ನಾಳೆ ನಾವೆಲ್ಲ ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೀವಿ. ಹೆಣ್ಣು ಕುಟುಂಬದ ಕಣ್ಣು ಎಲ್ಲ ನನ್ನ ತಾಯಂದಿರಿಗೆ ಕೋಟಿ ನಮಸ್ಕಾರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಬೆಂಗಳೂರು (ಆ.14): ನಾಳೆ ನಾವೆಲ್ಲ ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೀವಿ. ಹೆಣ್ಣು ಕುಟುಂಬದ ಕಣ್ಣು ಎಲ್ಲ ನನ್ನ ತಾಯಂದಿರಿಗೆ ಕೋಟಿ ನಮಸ್ಕಾರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಇಂದು ಪದ್ಮನಾಭನಗರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಪದ್ಮನಾಭನಗರಕ್ಕೆ ಬಂದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ನೋಡೋದೇ ನನ್ನ ಭಾಗ್ಯ ಇದು ಭಾಗ್ಯವಯ್ಯ.. ನಮ್ಮ ಶ್ರೀನಿವಾಸ ಸುಪುತ್ರ ಪ್ರಮೋದ್ ಅವರು ಪುರಂದರ ದಾಸರ ನಾಮವನ್ನು ಹೇಳಿದ್ದಾರೆ. ರಾಜಕೀಯ ಎಂದಮೇಲೆ ಅಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಆದ್ರೆ ಈ ಐದು ಯೋಜನೆಗಳು ಹೇಗೆ ಬಂತು? ನಾವು ಜನರ ಬದುಕಿನ ಮೇಲೆ ಯೋಜನೆ ರೂಪಿಸುತ್ತೇವೆ. ಬಿಜೆಪಿ ಅವರು ಭಾವನೆಗಳ ಮೇಲೆ ಯೋಜನೆ ರೂಪಿಸುತ್ತಾರೆ. ನಾವು ನಮಗೆ ಒಳ್ಳೆಯದಾಗಲಿ, ಮಕ್ಕಳಿಗೆ ಮನೆಗೆ ಒಳ್ಳೆಯದು ಮಾಡಲಿ ಎಂದು ದೇವಸ್ಥಾನಕ್ಕೆ ಹೋಗಿ ದೇವರ ಹತ್ರ ಬೇಡಿಕೊಳ್ತೇವೆ. ನೀವು ದೇವರಲ್ಲಿ ಏನು ಕೇಳ್ತೀರೋ ಅದನ್ನು ನೀಡೋದಕ್ಕೆ ನಾವು ಯೋಜನೆ ರೂಪಿಸುತ್ತೆವೆ ಎಂದರು.
ಹಿಂದೆ ನಾವು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದಾಗ ಇದರಿಂದ ಕುಟುಂಬಗಳಲ್ಲಿ ಅತ್ತೆ-ಸೊಸೆ ನಡುವೆ ಜಗಳ ಹಚ್ಚಿ ದೂರ ಮಾಡ್ತಿದ್ದಾರೆ ಎಂದು ಬಿಜೆಪಿಯವ್ರು ಹೇಳಿದ್ರು. ನೀವು ಅತ್ತೆ ಸೊಸೆ ಜಗಳ ಆಡಿದ್ದೇರನಮ್ಮ ಎಂದು ಮಹಿಳೆಯರನ್ನ ಪ್ರಶ್ನಿಸಿದರು ಮುಂದುವರಿದು, ನಾನು ಪುರುಷರಿಗೆ ಎರಡು ಸಾವಿರ ಕೊಟ್ಟಿಲ್ಲ ಯಾಕೆಂದರೆ ಅವ್ರು ತಗೊಂಡು ವೈನ್‌ಶಾಪ್‌ಗೆ ಹೋಗ್ತಾರೆ ಅಂತಾ. ಹೀಗಾಗಿ ಮನೆಯೊಡತಿಗೆ ಹಣ ನೀಡಿದೇವು ಎಂದರು.
ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಡಿದಾಟದ ನಡುವೆ ಎಂಟ್ರಿ ಕೊಟ್ಟ ಸಿ.ಪಿ. ಯೋಗೇಶ್ವರ
ಬಿಜೆಪಿಯವ್ರು ಇನ್ನೂ ನೂರು ಜನ್ಮ ತಾಳಿದ್ರೂ ಈ ಐದು ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸೋದಕ್ಕೆ ಆಗೊಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೆಂದರೆ ದೇಶದ ಇತಿಹಾಸ. ನಿಮ್ಮ ಯೋಜನೆಯನ್ನು ಬಿಜೆಪಿಯವರು ಪಡೆದುಕೊಳ್ತಿದ್ದಾರೆ. ಬಿಜೆಪಿ ಅವ್ರು ಫ್ರೀ ಕರೆಂಟು ಪಡೆಯುತ್ತ ಇದ್ದಾರೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡ್ತಾ ಇದ್ದಾರೆ. ಅಶೋಕ್‌ಗೆ ಹೇಳೋದಕ್ಕೆ ಹೇಳಿ ಬಿಜೆಪಿಯವರು ಎಲ್ಲರೂ ಬಸ್ ಟಿಕೆಟ್ ತಗೊಂಡು ಪ್ರಯಾಣ ಮಾಡಲಿ ಅಂತಾ. ಗ್ಯಾರಂಟಿ ಯೋಜನೆಗಳನ್ನ ಪಡೆಯಬೇಡಿ, ಬರೆದುಕೊಡೋಕೆ ಹೇಳಲಿ ಎಂದು ಕಾಂಗ್ರೆಸ್ ಯೋಜನೆಗಳನ್ನು ವಿರೋಧಿಸಿದವರು ಯಾಕೆ ಬಳಸಿಕೊಳ್ತಾರೆ? ಎಂದು ವಾಗ್ದಾಳಿ ನಡೆಸಿದರು.