- ಸಂಸದ ಪ್ರತಾಪ ಸಿಂಹ ಸೂಚನೆ
- ಶತಮಾನೋತ್ಸವಕ್ಕೆ ಪ್ರಧಾನಿ ಮೋದಿ ಆಹ್ವಾನಿಸಲು ನಿರ್ಧಾರ
- ರಾಜ್ಯದ ಮೊಟ್ಟಮೊದಲ ಮೆಡಿಕಲ್ ಕಾಲೇಜು ಎನ್ನುವ ಹೆಮ್ಮೆ
ಮೈಸೂರು (ಮಾ.10) ಶತಮಾನೋತ್ಸವದ (centennial) ಹೊಸ್ತಿಲಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜು, ಕೆ.ಆರ್. ಆಸ್ಪತ್ರೆ (KR Hospital) ಸಮುಚ್ಚಯ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಸಂಸದ ಪ್ರತಾಪ ಸಿಂಹ (MP Pratap Simha) ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ, ರಾಜ್ಯದಲ್ಲೇ ಮೊದಲ ಮೆಡಿಕಲ್ ಕಾಲೇಜು (First Medical College in the State) ಎಂಬ ಹೆಸರು ಹೊಂದಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಂಭ್ರಮಾಚರಣೆಗೆ ಪ್ರಧಾನಮಂತ್ರಿ ನರೇಂದ್ರಮೋದಿ (PM Narendra Modi) ಅವರನ್ನು ಆಹ್ವಾನಿಸಲಾಗುವುದು. ಮೈಸೂರು ವಿವಿ ಶತಮಾನೋತ್ಸವಕ್ಕೂ ಆಗಮಿಸಿದ್ದರು. ಹೀಗಾಗಿ, ಈ ಸಮಾರಂಭಕ್ಕೆ ಆಹ್ವಾನಿಸಲು ಭೇಟಿ ಮಾಡಲಾಗುವುದು ಎಂದು ಹೇಳಿದರು.
ಶತಮಾನೋತ್ಸವ ಕಾರ್ಯಕ್ರಮ: ರಾಜ್ಯದ ಮೊದಲ ಮತ್ತು ದೇಶದ ಏಳನೇ ವೈದ್ಯಕೀಯ ಕಾಲೇಜು 2024ಕ್ಕೆ ನೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2023ರ ಆಗಸ್ವ್ ತಿಂಗಳಿಂದ ಒಂದು ವರ್ಷ ಶತಮಾನೋತ್ಸವ ಕಾರ್ಯಕ್ರಮಗಳ ಜತೆಗೆ ಕೆ.ಆರ್. ಆಸ್ಪತ್ರೆ ಸಮುಚ್ಛಯ ಕಟ್ಟಡಗಳ ನವೀಕರಣ ಸೇರಿ ಹಲವು ಯೋಜನೆ ರೂಪಿಸಲು ನಿರ್ಧರಿಸಲಾಯಿತು.
undefined
ಕೆ.ಆರ್. ಆಸ್ಪತ್ರೆ, ಚೆಲುವಾಂಬ, ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಗಳ ನವೀಕರಣಕ್ಕೆ ರಾಜ್ಯಸರ್ಕಾರ . 89 ಕೋಟಿ ಬಿಡುಗಡೆಗೊಳಿಸಿದ್ದರೂ, ಶತಮಾನೋತ್ಸವ ಹೆಸರಿನಲ್ಲಿ ಹಲವಾರು ಸೌಲಭ್ಯ ಕಲ್ಪಿಸಲು ಪೂರ್ಣ ಪ್ರಮಾಣದ ಡಿಪಿಆರ್ ತಯಾರಿಸುವಂತೆ ಸಂಸದ ಪ್ರತಾಪ್ ಸಿಂಹ ಮುಖ್ಯ ಆಡಳಿತಾಧಿಕಾರಿಗೆ ಸೂಚಿಸಿದರು. ಪ್ರಸ್ತಾಪಿತ ಅಂದಾಜು ಪಟ್ಟಿಗೂ-ಡಿಪಿಆರ್‌ಗೂ ಸಾಕಷ್ಟುವ್ಯತ್ಯಾಸವಿರುತ್ತದೆ. ಕೆ.ಆರ್. ಆಸ್ಪತ್ರೆ ಕಟ್ಟಡಗಳ ನವೀಕರಣ ಜತೆಗೆ ವೈದ್ಯಕೀಯ ಕಾಲೇಜಿನಲ್ಲಿ ಶಿಥಿಲವಾಗಿರುವ ಭಾಗಗಳ ದುರಸ್ತಿ, ಶೌಚಾಲಯಗಳು ಹೆಚ್ಚಳ, ರೋಗಿಗಳ ಸಂಬಂಧಿಕರು ಮಲಗಲು ಡಾರ್ಮೆಟರಿ, ಊಟ-ತಿಂಡಿ ಮಾಡಲು ಸುಸಜ್ಜಿತ ಹಾಲ್, ಲ್ಯಾಂಡ್ ಸ್ಕೇಪಿಂಗ್ ಮಾಡಲು ಡಿಪಿಆರ್‌ನಲ್ಲಿ ಸೇರಿಸಬೇಕು ಎಂದರು.
ಡಯಾಲಿಸೀಸ್ ಘಟಕ: ಇದರ ಜತೆಗೆ 50 ಬೆಡ್‌ಗಳುಳ್ಳ ಡಯಾಲಿಸಿಸ್ ಘಟಕವನ್ನು ಆರಂಭಿಸುವುದು, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಸೇರಿ ಅವರ ಹೆಸರಿನಲ್ಲಿ ಏನಾದರೊಂದು ಯೋಜನೆ ರೂಪಿಸಬೇಕು. ಮೈಸೂರು ಸೇರಿ ಸುತ್ತಮುತ್ತಲ ಜಿಲ್ಲೆಗಳಿಂದ ಮರಣೋತ್ತರ ಶವಪರೀಕ್ಷೆ ಬರುವುದರಿಂದ ಶವಾಗಾರವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಬೇಕು. ಜತೆಗೆ ಕೆ.ಆರ್. ಆಸ್ಪತ್ರೆ ಸಮುಚ್ಛಯದಲ್ಲಿ ಕಾಂಪೌಂಡ್ ನಿರ್ಮಿಸಬೇಕು. ಸರ್ಕಾರ ಮಂಜೂರು ಮಾಡಿರುವ . 89 ಕೋಟಿ ಜತೆಗೆ ಹೆಚ್ಚುವರಿಯಾಗಿ . 20 ಕೋಟಿ ರೂ. ಆಗಬಹುದು. ಸಿಎಂ ಅವರನ್ನು ಭೇಟಿಯಾಗಿ ಉಳಿದ ಹಣ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡೀನ್ ಡಾ.ಎಚ್.ಎನ್. ದಿನೇಶ್, ಕಾಲೇಜಿನಲ್ಲಿ ಫಾರೆನ್ಸಿಕ್ ಮ್ಯೂಸಿಯಂ ಮಾಡುವಾಗ ಶವಾಗಾರವನ್ನು ಮೇಲ್ದರ್ಜೇಗೇರಿಸಲಾಗುವುದು. ಕೇಂದ್ರ ಸರ್ಕಾರದಿಂದ . 1.10 ಕೋಟಿ ವೆಚ್ಚದಲ್ಲಿ ಸ್ಕಿಲ್ ಲ್ಯಾಬ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಅಂತೆಯೇ . 120 ಕೋಟಿ ವೆಚ್ಚದಲ್ಲಿ ಲೈಬ್ರರಿ ಹಾಲ್, ಉಪನ್ಯಾಸ ಕೊಠಡಿಗಳು, ಪಿಕೆಟಿಬಿ ಸ್ಯಾನಿಟೋರಿಯಂ ಆವರಣದಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿನಿಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಶೇ. 50ರಷ್ಟುರೋಗಿಗಳು ಅಥವಾ ಕೆಲವು ವಿಭಾಗಗಳನ್ನು ಕೆಆರ್‌ಎಸ್ ರಸ್ತೆಯಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಿ ಕೆ.ಆರ್. ಆಸ್ಪತ್ರೆಯ ಕಟ್ಟಡ ನವೀಕರಿಸುವುದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಯಂತ್ರೋಪರಕರಣ ಖರೀದಿಸಲು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ . 35 ಕೋಟಿ ವೆಚ್ಚದ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ಕೊಡಿಸಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು. ಶತಮಾನೋತ್ಸವ ಸಂದರ್ಭದಲ್ಲಿ ಆಸ್ಪತ್ರೆಯ ಫುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು. ಅವರಿಗೆ ಪರ್ಯಾಯ ವ್ಯವಸ್ಥೆಯಾಗುವಂತೆ ಮಾಡಬೇಕು ಎಂದರು.
Mysuru: ಬರೋಬ್ಬರಿ 700 ದಿನಗಳ ಬಳಿಕ ಬುದ್ಧನ ದರ್ಶನಕ್ಕೆ ಅವಕಾಶ
ಸಿಎಸ್‌ಆರ್ ನಿಧಿ ಬಳಸಿಕೊಂಡು ಕೆ.ಆರ್. ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣ ಖರೀದಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಏ. 1 ರಿಂದ ಹಣಕಾಸು ವರ್ಷ ಆರಂಭವಾಗುವುದರಿಂದ ಕಾರ್ಪೋರೇಟ್ ಕಂಪನಿಗಳಿಂದ ಬರುವ ನಿಧಿಯಲ್ಲಿ ಶೇ. 50ರಷ್ಟುಆಸ್ಪತ್ರೆ ಅಭಿವೃದ್ಧಿಗೆ ಮೀಸಲಿರಿಸುವಂತೆ ಕೋರಲಾಗುವುದು. ಇಸ್ಫೋಸಿಸ್‌ನವರು ಉದಾರವಾಗಿ ಕೆಲವನ್ನು ಕೊಟ್ಟಿದ್ದಾರೆ. ಕಾರ್ಮಿಕರಿಗೆ ಚಿಕಿತ್ಸೆ ಕೊಡಲು ಒಪ್ಪಂದ ಮಾಡಿಕೊಂಡರೆ ಅವರೇ ಎರಡು-ಮೂರು ಕೋಟಿಯನ್ನು ಕೊಟ್ಟು ಯಂತ್ರಗಳನ್ನು ಅಳವಡಿಸುತ್ತಾರೆ ಎಂದು ನುಡಿದರು. ವಿದೇಶದಲ್ಲಿ ಇರುವ ವಿದ್ಯಾರ್ಥಿಗಳನ್ನು ಶತಮಾನೋತ್ಸವ ಸಂದರ್ಭದಲ್ಲಿ ಆಹ್ವಾನಿಸಿ ಸಂತಸದ ಕೂಟ ಏರ್ಪಡಿಸುವ ಜತೆಗೆ ಅವರಿಂದ ಸಾಧ್ಯವಾದಷ್ಟುದೇಣಿಗೆ ಪಡೆದು ಕೆಲವು ವಿಭಾಗಗಳಿಗೆ ಅನುಕೂಲ ಕಲ್ಪಿಸುವಂತೆ ಮಾಡಬೇಕು ಎಂದರು. ಸಭೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಬಿ.ಎಸ್. ವೀಣಾ, ಪ್ರಾಂಶುಪಾಲೆ ದಾಕ್ಷಾಯಿಣಿ, ಮುಖ್ಯ ಲೆಕ್ಕಾಧಿಕಾರಿ ಮಹದೇವನಾಯಕ, ಆರ್‌ಎಂಒ ಡಾ.ರಾಜೇಶ್‌ಕುಮಾರ್ ಇದ್ದರು.
ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡ್ಲಿ, ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ
ಶಾಶ್ವತ ಕಾರ್ಯಕ್ರಮ ಅಗತ್ಯ: ಆಸ್ಪತ್ರೆಯ ಡೀನ್ ಡಾ.ಎಚ್.ಎನ್. ದಿನೇಶ್ ಮಾತನಾಡಿ ಮೈಸೂರು ಮೆಡಿಕಲ್ ಕಾಲೇಜು ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಒಂದು ಹಂತದ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಕಟ್ಟಡಗಳ ನವೀಕರಣ ಸೇರಿ ಶಾಶ್ವತ ಕಾರ್ಯಕ್ರಮ ರೂಪಿಸಬೇಕಿದೆ. . 89 ಕೋಟಿ ಅನುದಾನ ಮಂಜೂರಾಗಿರುವ ಕಾರಣ ಮತ್ತಷ್ಟುಕಾಮಗಾರಿಗಳನ್ನು ಸೇರಿಸಿ ಮತ್ತೊಂದು ಡಿಪಿಆರ್ ಸಿದ್ಧಪಡಿಸಲಾಗುವುದು ಎಂದರು.