Mysuru dasara 2025: ಮೈಸೂರಲ್ಲಿ ಆಹಾರ ಮೇಳ ಎಲ್ಲಿ ನಡೆಯುತ್ತಿದೆ? ಇಲ್ಲಿದೆ ವಿವರ

Kannadaprabha News, Ravi Janekal |   | Kannada Prabha
Published : Sep 24, 2025, 01:01 PM IST
Mysuru dasara food festival

ಸಾರಾಂಶ

Mysuru dasra 2025: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಆಹಾರ ಮೇಳಕ್ಕೆ ಜನಸಾಗರವೇ ಹರಿದುಬರುತ್ತಿದೆ. ಈ ಮೇಳದಲ್ಲಿ ಬೊಂಬು ಬಿರಿಯಾನಿ, ಜೋಳದ ರೊಟ್ಟಿಯಂತಹ ಸಾಂಪ್ರದಾಯಿಕ ಖಾದ್ಯಗಳಿಂದ ವಿವಿಧ ಜಿಲ್ಲೆಗಳ ವಿಶಿಷ್ಟ ಸಸ್ಯಹಾರಿ ಮಾಂಸಹಾರಿ ತಿನಿಸು ಲಭ್ಯವಿದೆ,.

ಎಲ್‌.ಎಸ್. ಶ್ರೀಕಾಂತ್‌

ಮೈಸೂರು (ಸೆ.24): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಹಾರ ಇಲಾಖೆಯಿಂದ ನಗರದ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಜನವೋ… ಜನ.., ವಿವಿಧ ಜಿಲ್ಲೆಗಳ ವಿಶಿಷ್ಟ ಶೈಲಿಯ ತಿಂಡಿ, ತಿನಿಸು ಸವಿಯಲು ಸಾವಿರಾರು ತಿಂಡಿ ಪ್ರಿಯರು ಭೇಟಿ ನೀಡುತ್ತಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ತಿಂಡಿ ಪ್ರಿಯರು ಉದ್ಘಾಟನಾ ದಿನದಿಂದಲೆ ಎಲ್ಲ ಮಳಿಗೆಗಳು ತುಂಬಿ, ವ್ಯಾಪಾರ ವಹೀವಾಟು ಜೋರಾಗಿ ನಡೆಯುತ್ತಿದೆ, ಮೊದಲ ದಿನ ತಕ್ಕಮಟ್ಟಿಗೆ ಇದ್ದ ಜನರು, ಎರಡನೇ ದಿನವಾದ ಮಂಗಳವಾರ ಹೆಚ್ಚು ಜನರು ಭೇಟಿ ನೀಡಿ ತಮ್ಮ ಇಷ್ಟವಾದ ತಿಂಡಿಗಳನ್ನು ಸವಿದರು.

ಸೋಮವಾರ ಆಹಾರ ಮೇಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಪುಳಿಯೋಗರೆ ತಿಂದ ಪರಂಪರೆ ಮೇಲುಕೋಟೆ ಪುಳಿಯೋಗರೆ ಮಳಿಗೆ ಸೇರಿದಂತೆ ಎಲ್ಲ ಮಳಿಗೆಗಳ ಮುಂದೆ ಜನ ಸ್ತೋಮವೇ ಸೇರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ದಸರಾ ಗಿಫ್ಟ್: 37 ಜನಕ್ಕೆ ನಿಗಮ ಹುದ್ದೆ? ಖರ್ಗೆ ಕೈ ಸೇರಿದ ಅಂತಿಮ ಪಟ್ಟಿ, ಇವರಿಗೆ ಸಿಗೋ ಸಾಧ್ಯತೆ!

ಈ ಬಾರಿ 160 ಮಳಿಗೆಗೆ ಅವಕಾಶ

ಈ ಬಾರಿ ಆಹಾರ ಮೇಳದಲ್ಲಿ ಒಟ್ಟು 160 ಮಳಿಗೆಯಲ್ಲಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿದ್ದು, ಅದರಲ್ಲಿ 120 ಮಳಿಗೆಯಲ್ಲಿ ಸಸ್ಯಹಾರ ಹಾಗೂ 40 ಮಳಿಗೆಯಲ್ಲಿ ಮಾಂಸಹಾರ ವ್ಯಾಪಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ಮೇಳದಲ್ಲಿ ಹೆಚ್ಚು ಆಕರ್ಷಣಿಯವಾದ ಬಂಬೂ ಬಿರಿಯಾನಿ, ಉತ್ತರ ಕರ್ನಾಟಕ ಶೈಲಿ, ಕರಾವಳಿ ಪಾರಂಪರಿಕ ಆಹಾರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಸ್ಯಹಾರಿ ಪ್ರಿಯರಿಗೆ ಏನೇನು?

ಸಸ್ಯಹಾರಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ರೊಟ್ಟಿ ತಟ್ಟೆ ಕಡುಬಿನ ಕಟ್ಟೆ, ಕಂಬನ ಮನೆ, ಧಾರವಾಡ ಜೋಳದ ರೊಟ್ಟಿ, ಬಾಂಬೆ ಚಾಟ್ಸ್‌ ಹೌಸ್‌, ಬಂಗಾರ್‌ ಪೇಟೆ ಪಾನಿಪುರಿ ಮತ್ತು ಚಾಟ್ಸ್‌, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಗಿರ್ಮಿಟ್‌, ಮಿರ್ಚಿ, ಬಜ್ಜಿ, ಶೆಖೆ ಗಿಣ್ಣು ಮತ್ತು ಅವಲಕ್ಕಿ ಗಿಣ್ಣು, ಮಿಸ್ಟರ್‌ಮಶ್ರೂಮ್‌, ಮಶ್ರೂಮ್‌ ಮಡಿಕೆ ಬಿರಿಯಾನಿ, ಬಾಗಲಕೋಟೆ ಜೋಳದ ರೊಟ್ಟಿ, ಚನಾ ಬತೂರ ಮಶ್ರೂಮ್‌ ಬೈಟ್ಸ್‌, ಕರಾವಳಿ ಶೈಲಿಯ ತಿಂಡಿಗಳು, ಫ್ರೆಶ್‌ ಜ್ಯೂಸ್‌, ಬಿಸಿ ಬಿಸಿ ಹೋಳಿಗೆ, ಚುರುಮುರಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳ ಮಳಿಗೆಗಳು ಜನರನ್ನು ಆಕರ್ಷಿಸುತ್ತಿದೆ.

ಮಾಂಸಹಾರ ಪ್ರಿಯರಿಗೇನು ಸ್ಪೆಷಲ್?

ಮಾಂಸಹಾರ ಪ್ರಿಯರಿಗಾಗಿ 40 ಮಳಿಗೆಯಲ್ಲಿ ವಿವಿಧ ಶೈಲಿಯ ತಿನಿಸುಗಳು ಲಭ್ಯವಿದ್ದು, ಅದರಲ್ಲೂ ಬೊಂಬು ಬಿರಿಯಾನಿ ರುಚಿ ನೋಡಲು ಮಾಂಸಪ್ರಿಯರು ಮುಗಿಬಿದ್ದಿದ್ದಾರೆ.

ಬಿರಿಯಾನಿ ಬಫೇಟ್‌, ಮೈಸೂರು ದಮ್‌ ಬಿರಿಯಾನಿ, ನ್ಯೂ ರಾಯಲ್‌ ಬಿರಿಯಾನಿ ಪ್ಯಾರಡೈಸ್‌, ಹೊಸಪೇಟೆ ಧಮ್‌ಬಿರಿಯಾನಿ- ನಾಟಿ ಸ್ಟೈಲ್‌, ಬೊಂಬು ಬಿರಿಯಾನಿ ಸ್ಟಾಲ್‌ ನಲ್ಲಿ ನಾಟಿಕೋಳಿ ಬೊಂಬು ಬಿರಿಯಾನಿ, ಬೊಂಬು ಬಿರಿಯಾನಿ, ನಾಟಿ ಕೋಳಿ ಸಾಂಬಾರ್‌, ಕ್ರ್ಯಾಬ್‌ ಫ್ರೈ, ಬಿದರಕ್ಕಿ ಪಾಯಸ, ಮಾಗಳಿ ಬೇರು ಟೀ, ರಾಗಿ ಮುದ್ದೆ ಮಾಂಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿತ್ತು.

ಇದನ್ನೂ ಓದಿ: ಹಿಂ.ವರ್ಗಗಳ ಆಯೋಗ ರಿಮೋಟ್‌ ಕಂಟ್ರೋಲ್‌ ಬೇರೆ ಇದೆ: ಚಲವಾದಿ ನಾರಾಯಣಸ್ವಾಮಿ

ಹೊಸಕೋಟೆ ಮಣಿ, ಬಿರಿಯಾನಿ, ಮೈಸೂರಿನ ಪ್ರಖ್ಯಾತಿ ಪಡೆದಿರುವ ಹೋಟೆಲ್‌ ಹನುಮಂತು, ಚಿಕನ್‌ ಕೀಮಾ ದೋಸಾ, ಮಂಡ್ಯ ನಾಟಿ ಪಲಾವ್‌, ಮಿರ್ಚಿ ಚಿಕನ್‌ ಪಲಾವ್‌, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮತ್ಸ್ಯ ದರ್ಶಿನಿ, ನಾಟಿಕೋಳಿ ಮಡಿಕೆ ಬಿರಿಯಾನಿ, ಬೆಂಗಳೂರಿನ ಚಿಕ್ಕಪೇದೆ ದೊನ್ನೆ ಬಿರಿಯಾನಿ, ವಿವಿಧ ಬಗೆಯ ಮಡಿಕೆ ಬಿರಿಯಾನಿ, ಹಳ್ಳಿ ಮೈಸೂರು ಒತ್ತು ಶಾವಿಗೆ, ಮೈಸೂರು ಬಿರಿಯಾನಿ ಮಳಿಗೆಗಳು ಮಾಂಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.

ಇದಲ್ಲದೆ ಬೇಕರಿ ತಿನಿಸುಗಳಲ್ಲಿ ಹೆಸರುವಾಸಿಯಾದ ದಿ ಡೆಸರ್ಟ್‌ ಹೌಸ್‌, ಡೊನಟ್‌ ಹೌಸ್‌, ಕರದಂಟು, ಕುಂದಾ ಪೇಡಾ, ಥ್ಯಾಂಕೋಸ್‌ ನ್ಯಾಚುರಲ್‌, ಐಸ್‌ಕ್ರಿಮ್, ಚುರುಮುರಿ, ಕಬ್ಬಿನ ಹಾಲು, ತಂಪು ಪಾನಿಯ ಮುಂತಾದ ತಿನಿಸುಗಳು ದೊರೆಯಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌