ಶಿವಮ್ಮಳ ಶವ ಸಂಸ್ಕಾರ ನೆರವೇರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು

By Sathish Kumar KH  |  First Published Nov 13, 2022, 1:13 PM IST

ಕಳೆದೆರಡು ದಿನಗಳಿಂದ  ಟಿಪ್ಪು ಪ್ರತಿಮೆ ನಿರ್ಮಾಣದ ವಿಚಾರವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿರುವ ಕೇಂದ್ರವಾದ ಸೂರಿನಲ್ಲಿಯೇ ಹಿಂದೂ-ಮುಸ್ಲಿಂ ಭಾವಕ್ಯತೆ ಸಾರುವ ಘಟನೆಯೊಂದು ಸಮಾಜದ ಮುನ್ನೆಲೆಗೆ ಬಂದಿದೆ.



ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಮೈಸೂರು (ನ.13): ನಮ್ಮ ರಾಜ್ಯ ಸೇರಿದಂತೆ ಇಡೀ ದೇಶವೇ ಕೆಲವು ಸಂದರ್ಭದಲ್ಲಿ ಧಾರ್ಮಿಕ ಸಂಘರ್ಷಕ್ಕಿಳಿಯುತ್ತವೆ. ಈಗಲೂ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗಿದ್ದು, ಅದಕ್ಕೆ ಕೆಲವೊಂದು ಸಂಘಟನೆಗಳು ಧರ್ಮ ದಂಗಲ್‌ ಎಂದು ಹೆಸರಿಟ್ಟುಕೊಂಡು ತಮ್ಮದೇ ಹೋರಾಟ ಮತ್ತು ವೈಷಮ್ಯ ಸಾಧಿಸುತ್ತಿವೆ. ಕಳೆದೆರಡು ದಿನಗಳಿಂದ  ಟಿಪ್ಪು ಪ್ರತಿಮೆ ನಿರ್ಮಾಣದ ವಿಚಾರವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮೈಸೂರಿನಲ್ಲಿಯೇ ಹಿಂದೂ-ಮುಸ್ಲಿಂ ಭಾವಕ್ಯತೆ ಸಾರುವ ಘಟನೆಯೊಂದು ಸಮಾಜದ ಮುನ್ನೆಲೆಗೆ ಬಂದಿದೆ.

ಈ ಮಾನವೀಯ (Humanity) ಘಟನೆ ನಡೆದಿದ್ದು, ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಸುನ್ನಿಚೌಕ್ (Sunni chouk) ಪ್ರದೇಶದಲ್ಲಿ. ಶಿವಮ್ಮ (Shiovamma) ಅಲಿಯಾಸ್ ಕುಳ್ಳಿ ಎಂಬ ಮಹಿಳೆ ಸುಮಾರು 30 ವರ್ಷದಿಂದಲೂ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದರು. ಅವರಿಗೆ ಮಗ, ಮಗಳು ಇದ್ದರೂ ಅಲ್ಲಿಗೆ ಹೋಗದೇ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಮಗ ಮಾತ್ರ ಕೆಲವೊಮ್ಮೆ ಬಂದು ತಾಯಿಯನ್ನು ಮಾತನಾಡಿಸಿ ಹೊಗುತ್ತಿದ್ದ. ಆದರೆ, ಈಗ ಶಿವಮ್ಮ ಶುಕ್ರವಾರ ಮೃತಪಟ್ಟಿದ್ದರು. ಇಂತಹ ಸಂದರ್ಭದಲ್ಲಿ ಮಗ ಮತ್ತು ಮಗಳಿಂದ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, ಇವರ ಕಾರ್ಯಕ್ಕೆ ನೆರವಾಗಲು ಸ್ಥಳೀಯ ಮುಸ್ಲಿಂ (Muslim) ಬಾಂಧವರು ಕೈಜೋಡಿಸಿದ್ದಾರೆ.

Latest Videos

undefined


ದತ್ತಪೀಠದಲ್ಲಿ ಹಿಂದು-ಮುಸ್ಲಿಂ ಇಬ್ಬರಿಗೂ ಪೂಜೆ ಅಧಿಕಾರ: ಹೈಕೋರ್ಟ್‌ಗೆ ಮಾಹಿತಿ

ಹಿಂದೂ ಸಂಪ್ರದಾಯದಂತೆ ಅತ್ಯಕ್ರಿಯೆ:
ಇಡೀ ಮೈಸೂರು ಸೇರಿ ರಾಜ್ಯಾದ್ಯಂತ ಟಿಪ್ಪು ಸುಲ್ತಾನ್‌  ಪ್ರತಿಮೆ (Tiipu Sultan Statue) ನಿರ್ಮಾಣದ ಬಗ್ಗೆ ವಿವಾದ ನಡೆಯುತ್ತಿದೆ. ಇತ್ತೀಚೆಗೆ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಕುರಿತು ಸಾಕಷ್ಟು ಪರ- ವಿರೋಧ ವ್ಯಕ್ತವಾಗಿದ್ದವು. ಆದರೆ, ಇದ್ಯಾವುದನ್ಜು ಗಮನಿಸದ ಮೈಸೂರಿನ ಸುನ್ನಿಚೌಕ್‌ನ ಮುಸ್ಲಿಂ ಯುವಕರು ತಮ್ಮ ಏರಿಯಾದಲ್ಲಿ ವಾಸವಿದ್ದ ಹಿಂದೂ (Hindu) ಮಹಿಳೆಯೊಬ್ಬರ ಅಂತ್ಯ ಸಂಸ್ಕಾರದ  ಜವಾಬ್ದಾರಿ ಹೊರುವ ಮೂಲಕ ಮಾನವೀಯ ಸೌಹಾರ್ದತೆ (Friendliness) ಮೆರೆದಿದ್ದಾರೆ. ಅಂತ್ಯಸಂಸ್ಕಾರದಲ್ಲಿ  ಮೃತ ಮಹಿಳೆಯ ಮಗ, ಮಗಳು, ಸೊಸೆ ಹಾಗೂ ಮೊಮ್ಮಕ್ಕಳನ್ನು ಇದ್ದುದು ಬಿಟ್ಟರೆ, ಉಳಿದಂತೆ 60ಕ್ಕೂ ಹೆಚ್ಚು ಮುಸ್ಲಿಂ ಬಾಂಧವರೇ ಭಾಗವಹಿಸಿ ಎಲ್ಲಾ ವಿಧಿವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ (Tradition) ನೆರವೇರಿಸಲು ಒಪ್ಪಿಕೊಂಡರು.

ರಾತ್ರಿಯಿಡಿ ಜಾಗರಣೆ:
ಮಹಿಳೆ ಸಾವಿನ ವಿಷಯ ತಿಳಿಯುತ್ತಿದ್ದಂತೆ ಇಸ್ಲಾಮಿಯಾ ಅಂಜುಮಾನ್ ಸಮಿತಿ (Islamia Anjuman Committee) ಯವರು ಆಕೆಯ ಮನೆಯವರನ್ನು ಹುಡುಕಿ ಕರೆ ತಂದಿದ್ದಾರೆ. ಅಸಹಾಯಕತೆ ವ್ಯಕ್ತಪಡಿಸಿದ ಮಗ ಮತ್ತು ಮಗಳು, ನಾವು ನಮ್ಮ ಮನೆಗೆ ದೇಹವನ್ನು ಕೊಂಡೊಯ್ಯುವುದಿಲ್ಲ. ಆಕೆ 30 ವರ್ಷದಿಂದ ನಿಮ್ಮ ನಡುವೆಯೇ ಇದ್ದುದ್ದರಿಂದ ನೀವೇ ಅಂತ್ಯಕ್ರಿಯೆ (Funeral) ನೆರವೇರಿಸಿ ಎಂದು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೊಪ್ಪಿದ ಮುಸ್ಲಿಂ ಬಾಂಧವರು ಶಿವಮ್ಮಳ ಗುಡಿಸಲ ಮುಂದೆ ಪೆಂಡಾಲ್ ಹಾಕಿ ರಾತ್ರಿಯಿಡಿ ಜಾಗರಣೆ (Vigilance) ಮಾಡುತ್ತಾ ಕಾವಲಿದ್ದರು. ರಾತ್ರಿ ಶಿವಮ್ಮಳ ಮಗ, ಮಗಳು, ಸೊಸೆ ಹಾಗೂ ಮೊಮ್ಮಕ್ಕಳಿಗೆ ಊಟದ (Meal) ವ್ಯವಸ್ಥೆ ಮಾಡಿ, ಅಲ್ಲೇ ಇರಿಸಿಕೊಂಡಿದ್ದಾರೆ.

Gadag; ಭಾವೈಕ್ಯತೆಯ ಗಣೇಶೋತ್ಸವಕ್ಕೆ ಸಾಕ್ಷಿಯಾದ ಕಳಸಾಪುರ

ಶವಕ್ಕೆ ಹೆಗಲುಕೊಟ್ಟ ಮುಸ್ಲಿಮರು:
ಅಂತ್ಯಕ್ರಿಯೆ ನೆರವೇರಿಸಲು ನಗರದ ಸುನ್ನಿ ಚೌಕ್‌ನಿಂದ ಜೋಡಿ ತೆಂಗಿನ ಮರ ರುದ್ರಭೂಮಿಗೆ ಪಾರ್ಥಿವ ಶರೀರ (Dead Body)ವನ್ನು ತರಲಾಗಿದೆ. ಈ ವೇಳೆ ಮುಸ್ಲಿಂ ಬಾಂಧವರೇ ಶವಕ್ಕೆ ಹೆಗಲು ಕೊಟ್ಟು ಹೊತ್ತು ಸಾಗಿದ್ದರು. ರುದ್ರಭೂಮಿಯಲ್ಲಿ ಶಿವಮ್ಮಳ ಕುಟುಂಬಸ್ಥರು ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊನೆವರೆಗೂ ಅಲ್ಲೇ ಇದ್ದ 60 ಕ್ಕೂ ಹೆಚ್ಚು ಮುಸ್ಲಿಂ ಬಾಂಧವರಿಗೆ ಸುನ್ನಿಚೌಕ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಧರ್ಮದ ಹೆಸರಿನಲ್ಲಿ ದ್ವೇಷ (Hate) ಸಾರಿಕೊಂಡು ಹೊಡೆದಾಡುತ್ತಿರುವ ಸಮಾಜದಲ್ಲಿ ನಡೆದ ಮಾನವೀಯ ಕಾರ್ಯ ಎಲ್ಲರಿಗೂ ಪಾಠ ಹೇಳಿದಂತಿತ್ತು.

click me!