ಬೆಂಗಳೂರು, (ಏ.02): ಹಿಂದುಗಳ ಪವಿತ್ರ ಹಬ್ಬ ಯುಗಾದಿ ಆಚರಣೆ ನಡೆಯುತ್ತಿದ್ದಂತೆ ಇತ್ತ ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಕೂಡಾ ಬಂದಿದೆ. ಇಂದು (ಶನಿವಾರ) ಚಂದ್ರ ಕಂಡಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ(ಏ.03) ರಂಜಾನ್‌ನ (Ramadan) ಉಪವಾಸ ಆರಂಭವಾಗುತ್ತಿದೆ. ಬರೋಬ್ಬರಿ ಒಂದು ತಿಂಗಳು ಕಾಲ ರೋಜಾ (ಉಪವಾಸ) ಮಾಡುತ್ತಾರೆ.
ದೇಶದ ವಿವಿಧ ಭಾಗಗಳಲ್ಲಿ ರಾಮದಾನ್ ಚಾಂದ್(ರಂಜಾನ್ ಚಂದ್ರ) ಕಾಣಿಸಿಕೊಂಡಿದೆ. ಇದರಿಂದಾಗಿ ಭಾನುವಾರದಿಂದ ರಂಜಾನ್ ಉಪವಾಸ ಕೈಗೊಳ್ಳಲು ಮುಸ್ಲಿಂ ಸಮುದಾಯದವರು (Ramadan Fasting) ಸಿದ್ಧತೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್‌ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸ ಅದಿ, ಬೆಂಗಳೂರಲ್ಲಿ ರಂಜಾನ್ ತಿಂಗಳ ಚಂದ್ರದರ್ಶನ ಹಿನ್ನೆಲೆ ರಾಜ್ಯಾದ್ಯಂತ ರಂಜಾನ್ ಉಪವಾಸ ಆರಂಭವಾಗಲಿದೆ. ನಾಳೆಯಿಂದ(ಭಾನುವಾರ) ಒಂದು ತಿಂಗಳ ಕಾಲ ಉಪವಾಸ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಂಜಾನ್: ಉಪವಾಸ ಮುಗಿಸುವಾಗ ಇಂಥ ತಪ್ಪುಗಳನ್ನೆಲ್ಲಾ ಮಾಡಬೇಡಿ
ಮುಸ್ಲಿಮರಿಗೆ ರಂಜಾನ್ ಎನ್ನುವುದು ಪವಿತ್ರವಾದ ತಿಂಗಳು. ಕುರಾನ್ ಆಚರಣೆಯು ಮೊದಲ ಭಾಗವೆಂದು ಹೇಳಲಾಗುತ್ತದೆ. ಈ ವರ್ಷದ ರಂಜಾನ್ ಹಬ್ಬ ಏಪ್ರಿಲ್ ತಿಂಗಳಾತ್ಯದಲ್ಲಿ ಆರಂಭವಾಗಿದೆ. ಕಳೆದ ವರ್ಷ ಕೊರೋನಾದಿಂದ ಸರಳವಾಗಿ ಆಚರಿಸಲಾಗಿತ್ತು. ಇದೀಗ ಕೊರೋನಾ ತೊಲಗಿದ್ದು, ಈ ಬಾರಿ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಅದ್ಧೂರಿಯಾಗಿ ಆಚರಿಸಬಹುದಾಗಿದೆ.
ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ ಮಾಡುತ್ತಾರೆ. ಈ ತಿಂಗಳಲ್ಲಿ ದಾನ ಧರ್ಮ, ಒಳಿತಿನ ಕಾರ್ಯಗಳನ್ನು ಮಾಡುತ್ತಾ ಅಲ್ಲಾನ ಕೃಪೆಗೆ ಪಾತ್ರರಾಗುತ್ತಾರೆ. ಹೊಸ ಚಂದ್ರನ ದರ್ಶನದಿಂದ ಆರಂಭವಾಗಿ ಮುಂದಿನ 30 ದಿನಗಳ ಬಳಿಕ ಹೊಸ ಚಂದ್ರನ ದರ್ಶನದಿಂದಲೇ ರಂಜಾನ್ ಮಾಸ ಕೊನೆಕೊಳ್ಳುತ್ತದೆ.
ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ, ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಹಾಗೂ ಸ್ನೇಹಿತರು ಮತ್ತು ಕುಟುಂಬದವ ರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ. ಸೂರ್ಯಾಸ್ತದ ವೇಳೆ, ಉಪವಾಸ ಮುರಿಯುವುದನ್ನು ಇಫ್ತಾರ್ ಎಂದು ಹೇಳಲಾಗುತ್ತದೆ. ಎಲ್ಲರೂ ಒಂದೇ ಕಡೆ ಸೇರುವುದು. ಅದು ಸಾರ್ವಜನಿಕ ಸ್ಥಳವೇ ಆಗಿರಲಿ, ಮನೆಯೇ ಆಗಿರಲಿ. ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸುತ್ತಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಅವಧಿಗೆ ಉಪವಾಸ ಸಮಯವನ್ನು ನಿರ್ಧರಿಸುತ್ತದೆ. ಆಗಾಗಿ ಸೂರ್ಯೋದಯ ಮತ್ತು ಸೂರ್ಯಸ್ತ ನಡುವೆ ಊಟ-ಉಪಹಾರ ಸೇವಿಸುವಂತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ