ಸ್ನೇಹಮಯಿ ಕೃಷ್ಣ ಒಬ್ಬ ಬ್ಲ್ಯಾಕ್ಮೇಲರ್, ರೌಡಿ ಶೀಟರ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
ಮೈಸೂರು (ಸೆ.28) : ಸ್ನೇಹಮಯಿ ಕೃಷ್ಣ ಒಬ್ಬ ಬ್ಲ್ಯಾಕ್ಮೇಲರ್, ರೌಡಿ ಶೀಟರ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಅವರನ್ನು ಅಡ್ಜಸ್ಟ್ ಮಾಡಿಕೊಳ್ಳಿ ಸರ್ ಅಂತ ಮೆಸೇಜ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನಾನು ಹೇಳಲ್ಲ, 100 ಕೋಟಿ ಕೊಡಿ ಅಂದರು. ನಾನು ತಪ್ಪೇ ಇಲ್ಲದೇ ನಾವು ಯಾಕೆ ಹಣ ಕೊಡಬೇಕು ಅಂತ ಹೇಳಿದವು. ಈ ಮಾತು ಯಾರು ಹೇಳಿದರು ಅಂತ ನಾನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.
ಕರ್ನಾಟಕ ರಾಜಕಾರಣದಲ್ಲಿ ಡಿಸೆಂಬರ್ ಹೊತ್ತಿಗೆ ಬೃಹತ್ ಕ್ರಾಂತಿ..!
ಸಿಎಂ ಸಿದ್ದರಾಮಯ್ಯ ಪ್ರಕರಣದಲ್ಲಿ 100 ಕೋಟಿ ಡೀಲ್‌ಗೆ ಬಂದಿದ್ದರು. ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಹತ್ತಿರ ಬಂದಿದ್ದರು ಎಂದು ಗಂಭೀರ ಆರೋಪ ಮಾಡಿದರು. ಈ ಹಿಂದೆಯೂ ಇಂತಹ ಅನೇಕ ಪ್ರಕರಣ ಮಾಡಿದ್ದು, ಮುಂದಿನ ದಿನಗಳಲ್ಲಿ ಆ ವ್ಯಕ್ತಿಯನ್ನು ಕರೆದುಕೊಂಡು ಬಂದು ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದರು.
ಸ್ನೇಹಮಯಿ ಕೃಷ್ಣ ವಿರುದ್ಧವೇ ರಾಜ್ಯದಾದ್ಯಂತ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೈಸೂರಿನಲ್ಲೇ 17 ಪ್ರಕರಣಗಳು ಇವೆ. ಈತನ ವಿರುದ್ಧ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ. ಈಗಲೂ ರೌಡಿಶೀಟರ್ ಆಗಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ಕೊಲೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಾಗಿದೆ. ಸ್ನೇಹಮಯಿ ಕೃಷ್ಣ ಮನೆ ರೈಡ್ ಮಾಡಿದರೆ ಎಂಡಿಎಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತವೆ ಎಂದು ಎಂ.ಲಕ್ಷ್ಮಣ ಹೇಳಿದರು.
ಸಿಬಿಐ ತನಿಖೆಗೆ ಸರ್ಕಾರದ ಅನುಮತಿ ಪಡೆಯುವುದು ಹೊಸದೇನಲ್ಲ: ಗೃಹ ಸಚಿವ
ನಾವು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ. ನಮ್ಮ ಪಕ್ಷದ ಸರ್ಕಾರ ಇದ್ದರೂ ನಮ್ಮ ದೂರು ಸ್ವೀಕರಿಸುತ್ತಿಲ್ಲ. ಆದರೆ, ನಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನೀಡುವ ದೂರನ್ನು ಪೊಲೀಸರು ಸ್ವೀಕರಿಸುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಎಷ್ಟೊಂದು ಪ್ರಭಾವ ಎಂಬುದು ಇದರಿಂದ ಸಾಬೀತಾಗಿದೆ ಎಂದು ಕಿಡಿಕಾರಿದರು