ದೂರದೃಷ್ಟಿಗೆ ಎಂ.ಎಸ್.ರಾಮಯ್ಯ ಸಾಕ್ಷಿ: ಕೇಂದ್ರ ಸಚಿವ ನಿತಿನ್ ಗಡ್ಕರಿ

By Kannadaprabha News  |  First Published Dec 13, 2023, 6:17 AM IST

ಜ್ಞಾನ, ವಿಜ್ಞಾನದಿಂದ ದೇಶ, ಸಮಾಜದ ಏಳಿಗೆ ಸಾಧ್ಯ ಎಂಬ ದೂರದೃಷ್ಟಿ ಹೊಂದಿದ್ದ ಎಂ.ಎಸ್.ರಾಮಯ್ಯ ಅವರಂತಹ ವ್ಯಕ್ತಿಗಳ ಪ್ರಯತ್ನದಿಂದ ಬೆಂಗಳೂರು ನಗರ ಇಂದು ದೇಶದ ‘ಜ್ಞಾನ ರಾಜಧಾನಿ’ಯಾಗಿ ಗುರುತಿಸಿಕೊಂಡಿದೆ.


ಬೆಂಗಳೂರು (ಡಿ.13): ಜ್ಞಾನ, ವಿಜ್ಞಾನದಿಂದ ದೇಶ, ಸಮಾಜದ ಏಳಿಗೆ ಸಾಧ್ಯ ಎಂಬ ದೂರದೃಷ್ಟಿ ಹೊಂದಿದ್ದ ಎಂ.ಎಸ್.ರಾಮಯ್ಯ ಅವರಂತಹ ವ್ಯಕ್ತಿಗಳ ಪ್ರಯತ್ನದಿಂದ ಬೆಂಗಳೂರು ನಗರ ಇಂದು ದೇಶದ ‘ಜ್ಞಾನ ರಾಜಧಾನಿ’ಯಾಗಿ ಗುರುತಿಸಿಕೊಂಡಿದೆ. ಐದಾರು ದಶಕಗಳ ಹಿಂದೆಯೇ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಆರಂಭಿಸಿದ್ದು, ಅವರ ದೂರದೃಷ್ಟಿಗೆ ಸಾಕ್ಷಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ಬರೆದಿರುವ ಉದ್ಯಮಿ ಎಂ.ಎಸ್.ರಾಮಯ್ಯ ಅವರ ಜೀವನ ಚರಿತ್ರೆ ‘ರಾಮಯ್ಯಾನಮ್’ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಗಡ್ಕರಿ ಅವರು, ‘ಹಿಂದೆ ಮಾಡಿರುವ ಕಾರ್ಯಗಳ ಕುರಿತು ವರ್ತಮಾನದಲ್ಲಿ ಚಿಂತನೆ, ಅಧ್ಯಯನ ಮಾಡಿ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ರಾಮಯ್ಯನವರಂತಹ ಜೀವನ ಚರಿತ್ರೆ ಓದಿನಿಂದ ಸಾಧ್ಯವಾಗುತ್ತದೆ. ನಮ್ಮ ಸಮಾಜ, ದೇಶಕ್ಕೆ ರಾಮಯ್ಯ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಗತಿಗೆ ಕಾರಣರಾಗಿರುವ ಸಾವಿರಾರು ಎಂಜಿನಿಯರ್‌, ಡಾಕ್ಟರ್‌ ಸೇರಿದಂತೆ ಅನೇಕ ಪ್ರತಿಭೆಗಳನ್ನು ನೀಡಿದ್ದಾರೆ’ ಎಂದರು.

Tap to resize

Latest Videos

ಅಶೋಕ್‌ಗೆ ಬಿಜೆಪಿಗರಿಂದಲೇ ಮಂಗಳಾರತಿ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

‘ನಮ್ಮ ದೇಶದಲ್ಲಿ ಜ್ಞಾನ, ಮಾನವ ಸಂಪನ್ಮೂಲ, ಹಣಕ್ಕೆ ಕೊರತೆ ಇಲ್ಲ. ಸೂಕ್ತ ದೂರದೃಷ್ಟಿ ಹೊಂದಿರುವವರ ಕೊರತೆ ಇದೆ. ಸಾಧನೆ ಮಾಡಲು ಪದವಿ ಮುಖ್ಯವಲ್ಲ. ನಮ್ಮ ಜ್ಞಾನ ಬಳಸಿಕೊಂಡು ಸರಿಯಾದ ಗುರಿ, ದೂರದೃಷ್ಟಿಯೊಂದಿಗೆ ನಿಯತ್ತಿನಿಂದ ಕೆಲಸ ಮಾಡಬೇಕಿದೆ’ ಎಂದು ಅವರು ಹೇಳಿದರು.

‘ತಂದೆ ರಾಮಯ್ಯ ಅವರು ಬಡತನದಿಂದ ಮೇಲೆ ಬಂದರೂ ಸರಳ ಜೀವನ ಮತ್ತು ಶಿಸ್ತು ರೂಢಿಸಿಕೊಂಡಿದ್ದರು. ಕೆಲಸದ ವಿಚಾರದಲ್ಲಿ ಅವರು ಅತ್ಯಂತ ಶ್ರದ್ಧೆ ಹೊಂದಿರುತ್ತಿದ್ದರು. ಸ್ಪೂರ್ತಿದಾಯಕ ಜೀವನದಿಂದ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ’ ಎಂದು ಗೋಕುಲ ಎಜುಕೇಷನ್ ಫೌಂಡೇಷನ್‌ನ ಟ್ರಸ್ಟೀ ಕೋದಂಡರಾಮ್ ರಾಮಯ್ಯ ಹೇಳಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿ, ತಂದೆಯ ಜೊತೆ ಕೂಲಿ ಕೆಲಸ ಮಾಡಿ ಶಿಕ್ಷಣ, ನಿರ್ಮಾಣ, ಸಮಾಜ ಸೇವಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಎಂ.ಎಸ್. ರಾಮಯ್ಯ ಅವರ ಜೀವನವು ಸ್ಪೂರ್ತಿದಾಯಕವಾಗಿದೆ. ಸಂಸ್ಕಾರ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಅಮೋಘ ಸಾಧನೆ ಮಾಡಿರುವ ಇವರ ಜೀವನ ಚರಿತ್ರೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.

ಸಚಿವ ಜಮೀರ್‌ ಅಸಂಸದೀಯ ಪದ ಬಳಸಿಲ್ಲ: ಸಿದ್ದರಾಮಯ್ಯ ಸಮರ್ಥನೆ

‘ಬೆಂಗಳೂರಿನ ಮರಳಿನ ಸಮಸ್ಯೆಗೆ ಕಸ ಪರಿಹಾರ’: ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಮರಳಿನ ಕೊರತೆ ಎದುರಾಗುತ್ತಿರುತ್ತದೆ ಎಂದು ನಮ್ಮ ಎಂಜಿನಿಯರ್‌ವೊಬ್ಬರು ಹೇಳಿದರು. ಆದರೆ, ಬೆಂಗಳೂರಿನಲ್ಲಿ ಉತ್ಪತ್ತಿ ಆಗುವ ಕಸವನ್ನು ಬಳಸಿ ರಸ್ತೆ, ರಿಂಗ್ ರಸ್ತೆಗಳನ್ನು ನಿರ್ಮಾಣ ಮಾಡಿ. ದಿಲ್ಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಕಸದ ಸಮಸ್ಯೆ ಜೊತೆಗೆ ಮರಳಿನ ಸಮಸ್ಯೆಗೂ ಕಸದಿಂದಲೇ ಪರಿಹಾರ ಸಿಕ್ಕಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

click me!