ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ

Published : Apr 15, 2025, 11:14 AM ISTUpdated : Apr 15, 2025, 11:21 AM IST
ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ

ಸಾರಾಂಶ

ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಪ್ರಧಾನಿ ಮೋದಿ ಗಂಡಸು ಇದ್ದಾರೆ, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ. *** ಮೇಲೆ ಒದ್ದು ಕಾಯ್ದೆ ಜಾರಿಗೊಳಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ (ಏ.15): ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಪ್ರಧಾನಿ ಮೋದಿ ಗಂಡಸು ಇದ್ದಾರೆ, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ. *** ಮೇಲೆ ಒದ್ದು ಕಾಯ್ದೆ ಜಾರಿಗೊಳಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಬಡ ಮುಸ್ಲಿಮರ ಅಭಿವೃದ್ಧಿಗಾಗಿಯೇ ಎಂದ ಜಿಗಜಿಣಗಿ, 'ವಕ್ಫ್ ಆಸ್ತಿ ಲೂಟಿ ಮಾಡಿದವರಿಗೆ, ವಿಶೇಷವಾಗಿ ಕಾಂಗ್ರೆಸ್ ನಾಯಕರಿಗೆ ಇದರಿಂದ ತೊಂದರೆಯಾಗಿದೆ. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಇಂತಹ ಕಾಯ್ದೆ ಜಾರಿಗೆ ತರಲಿಲ್ಲ. ಯಾಕೆಂದರೆ, ಅವರಲ್ಲಿ ಅನೇಕರು ಬಡ ಮುಸ್ಲಿಮರ ಆಸ್ತಿಯನ್ನೇ ಲಪಟಾಯಿಸಿದ್ದಾರೆ' ಎಂದು ಆರೋಪಿಸಿದರು.

ಇದನ್ನೂ ಓದಿ: ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಯುತ್ತೆ; ಎಂಎಲ್ಸಿ ಸಲೀಂ ಅಹ್ಮದ್

ಪ್ರಧಾನಿ ಮೋದಿ ಬಡ ಮುಸ್ಲಿಮರ ಪರವಾಗಿ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು ವೋಟ್‌ ಬ್ಯಾಂಕ್‌ಗಾಗಿ ವಿರೋಧಿಸುತ್ತಿವೆ. ಅವರಿಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿಯಿಲ್ಲ ಎಂದು ಕಿಡಿಕಾರಿದರು. 'ಕಾಂಗ್ರೆಸ್‌ನಲ್ಲಿ ಇಂತಹ ಕಾಯ್ದೆ ಜಾರಿಗೆ ತರುವ ಗಂಡಸು ಹುಟ್ಟಿಲ್ಲ. ಮೋದಿಯವರು ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ದೇಶದಲ್ಲಿ ವಕ್ಫ್ ಕಾಯ್ದೆ ಜಾರಿ ಆಗಿಯೇ ಆಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌