
ಬೆಂಗಳೂರು[ಡಿ.18]: ರಾಜ್ಯದ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆರೂವರೆ ತಿಂಗಳ: ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕೇವಲ 640 ಗ್ರಾಂ. ತೂಕವಿದ್ದ ಶಿಶುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ನಗರದ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.
ಹೂವಿನ ವ್ಯಾಪಾರಿ ಪತ್ನಿಗೆ 5 ಕೆಜಿ ತೂಕದ ಮಗು ಜನನ
ಹೊಸಕೆರೆಹಳ್ಳಿಯಲ್ಲಿರುವ ಎ.ವಿ. ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದು, ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾದ ಈ ಮಗುವಿಗೆ ಈಗ 46 ದಿನ ವಯಸ್ಸು! ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಮಗುವಿನ ಬೆಳವಣಿಗೆ ಉತ್ತಮವಾಗಿದೆ ಎಂದು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಗೋಪಿಕಾ ರಾಜೇಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ನವಲಗುಂದದ ಅನಿಲ್‌ಕುಮಾರ್ ಪತ್ನಿ ಪೂಜಾ ಅವರು ಅ.31 ರಂದು ಆಸ್ಪತ್ರೆಗೆ ದಾಖಲಾದರು. ಮಗುವಿನ ದೈಹಿಕ ಬೆಳವಣಿಗೆ ಉತ್ತಮವಾಗಿರಲಿಲ್ಲ. ಹೀಗಾಗಿ, ಭ್ರೂಣಕ್ಕೆ 26 ವಾರ (ಆರೂವರೆ ತಿಂಗಳು) ವಿದ್ದಾಗಲೇ ಸಿಜೇರಿಯನ್ ಮೂಲಕ ಹೊರ ತೆಗೆಯಲಾಯಿತು ಎಂದರು.
ತಡ ಮಾಡಬೇಡಿ, ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿ: ಸರ್ಕಾರದ ಮನವಿ!
ಆರೂವರೆ ತಿಂಗಳಿಗೆ ಭ್ರೂಣ ಸಾಮಾನ್ಯವಾಗಿ 600ರಿಂದ 700 ಗ್ರಾಂ. ಇರುತ್ತದೆ. ಅಂತರ್ಜಾಲದ ಮಾಹಿತಿ ಪ್ರಕಾರ ಕೇರಳ ರಾಜ್ಯದಲ್ಲಿ 625 ಗ್ರಾಂ. ತೂಕದ ಮಗುವನ್ನು ಅವಧಿಪೂರ್ವ ಹೆರಿಗೆ ಮಾಡಿಸಿದ್ದೇ ದಾಖಲೆ. ರಾಜ್ಯದ ಬಗ್ಗೆ ಇಂತಹ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಇಷ್ಟು ಕಡಿಮೆ ತೂಕದ ಮಗ ಹುಟ್ಟಿರುವುದು ರಾಜ್ಯದಲ್ಲಿ ಇದೇ ಮೊದಲು. ಇದೊಂದು ದಾಖಲೆ ಎಂದು ಹೇಳಿದರು.
ಈ ವೇಳೆ ಮಗುವಿನ ಪೋಷಕರಾದ ಅನಿಲ್‌ಕುಮಾರ್ ಮತ್ತು ಪೂಜಾ ದಂಪತಿ ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಆಸ್ಪತ್ರೆ ವೈದ್ಯ ಡಾ.ಜಗದೀಶ್, ಡಾ.ರಾಜೇಶ್ ಕುಮಾರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ