ದರ್ಗಾದಲ್ಲಿ ಉರುಸ್ ಆಚರಣೆ ವೇಳೆ ಪ್ರಸಾದ ಸೇವಿಸಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ. ಅಸ್ವಸ್ಥರಿಗೆ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಜಿಲ್ಲಾಸ್ಪತ್ರೆಗೆ ರಾಮನಗರ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮನಗರ (ನ.19): ದರ್ಗಾದಲ್ಲಿ ಉರುಸ್ ಆಚರಣೆ ವೇಳೆ ಪ್ರಸಾದ ಸೇವಿಸಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ.
ಎಂ.ಜಿ.ರಸ್ತೆಯಲ್ಲಿರುವ ದರ್ಗಾದಲ್ಲಿ ಇಂದು ಉರುಸ್ ಹಬ್ಬದ ಪ್ರಯುಕ್ತ ಭಕ್ತರಿಗೆ ಸಿಹಿ ವಿತರಣೆ ಮಾಡಲಾಗಿತ್ತು. ಬೆಲ್ಲದಿಂದ ಮಾಡಿದ್ದ ಸಿಹಿ ಪ್ರಸಾದ ಸ್ವೀಕರಿಸಿದ್ದ 70ಕ್ಕೂ ಹೆಚ್ಚು ಮಂದಿ. 10ಕ್ಕೂ ಹೆಚ್ಚು ಮಕ್ಕಳು ಸೇರಿ ಒಟ್ಟು 70 ಕ್ಕೂ ಹೆಚ್ಚು ಪ್ರಸಾದ ಸ್ವೀಕರಿಸಿದ್ದರು. ಪ್ರಸಾದ ಸೇವಿಸಿ ಬಳಿಕ ಕೆಲವೇ ಹೊತ್ತಿನಲ್ಲಿ ಹೊಟ್ಟೆ ನೋವಿನಿಂದ ಅಸ್ವಸ್ಥರಾಗಿದ್ದಾರೆ. ಮಧ್ಯಾಹ್ನ 12 ಗಂಟೆಯಲ್ಲಿ ಪ್ರಸಾದ ಸ್ವೀಕರಿಸಿದ್ದ ಜನರು. ಪ್ರಸಾದ ಸೇವಿಸಿದ ಬಳಿಕ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥರಿಗೆ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಜಿಲ್ಲಾಸ್ಪತ್ರೆಗೆ ರಾಮನಗರ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇಕರಿಯಿಂದ ತಂದ ಸಮೋಸಾದಲ್ಲಿತ್ತು ಸತ್ತ ಹಲ್ಲಿ, ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಗೆ ದಾಖಲು
ಎಲ್ಲರೂ ಚೇತರಿಕೆ; ಆತಂಕ ಬೇಡ:ಶಾಸಕ ಇಕ್ಪಾಲ್ ಹುಸೇನ್
ಇಂದು ಪೀರನ್ ಷಾ ವಾಲಿ ದರ್ಗಾದಲ್ಲಿ ಉರುಸ್ ಆಚರಣೆ ಮಾಡಲಾಗಿತ್ತು. ಬಳಿಕ ಬೆಲ್ಲದಲ್ಲಿ ತಯಾರಿಸಿದ ಪ್ರಸಾದ ವಿತರಣೆ ಮಾಡಲಾಗಿದೆ. ಪ್ರಸಾದ ತಿಂದ 50ಮಂದಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಯಾವುದೇ ಆತಂಕ ಇಲ್ಲ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಹೆಚ್ಚುವರಿ ವೈದ್ಯರನ್ನೂ ಸಹ ಕರೆಸಿ ಆರೋಗ್ಯ ತಪಾಸಣೆ ಮಾಡಿಸಲಾಗ್ತಿದೆ. ಅಸ್ವಸ್ಥರಾದವರ ಪೈಕಿ 10ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಮೇಲ್ನೋಟಕ್ಕೆ ಪ್ರಸಾದ ತಯಾರಿಸುವಾಗ ಏನೋ ವ್ಯತ್ಯಾಸ ಆದ ಹಾಗೆ ಕಾಣ್ತಿದೆ. ಪ್ರಸಾದದ ಸ್ಯಾಂಪಲ್ ನ್ನ ಟೆಸ್ಟಿಂಗ್ ಗೆ ಕಳುಹಿಸಿದ ಬಳಿಕ ಕಾರಣ ಗೊತ್ತಾಗುತ್ತೆ.