ಇಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದ ಕ್ರೀಡಾಭಿಮಾನಿಗಳು. ಬ್ಯಾಟ್, ಬಾಲ್, ವಿಕೆಟ್ ಇಟ್ಟು ವಿಶೇಷ ಪೂಜೆ ನಡೆಸಿದರು.
ಬೆಂಗಳೂರು (ನ.19): ಇಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದ ಕ್ರೀಡಾಭಿಮಾನಿಗಳು. ಬ್ಯಾಟ್, ಬಾಲ್, ವಿಕೆಟ್ ಇಟ್ಟು ವಿಶೇಷ ಪೂಜೆ ನಡೆಸಿದರು.
ಸರ್ಕಲ್ ಮಾರಮ್ಮ ಹಾಗೂ ಮುಕ್ಕೋಟಿ ದೇವರ ಬಳಿ ಪ್ರಾರ್ಥನೆ ಮಾಡಿದ ಕ್ರೀಡಾಭಿಮಾನಿಗಳು, ಕೈಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಇಶಾನ್ ಕಿಶನ್ ಮುಂತಾದ ಕ್ರಿಕೆಟರ್ಸ್ ಫೋಟೋ ಹಿಡಿದು ಪೂಜಿಸಿದರು.ಭಾರತ ತಂಡದ ಆಟಗಾರರಿಗೆ ಬೂದುಗುಂಬಳ, ನಿಂಬೆಹಣ್ಣು ದಿಂದ ದೃಷಿ ತೆಗೆದರು. ಈಡುಗಾಯಿ ಹೊಡೆದು ಆಟಗಾರರ ಮೇಲೆ ಯಾವುದೇ ದೃಷ್ಟಿ ಬೀಳದಿರಲಿ ಎಂದು ಬೇಡಿದರು. ಬಳಿಕ ಕೈಯಲ್ಲಿ ಧ್ವಜ ಹಿಡಿದು ಗೆಲ್ಲಬೇಕು ಗೆಲ್ಲಬೇಕು ಭಾರತ, ಸೋಲಬೇಕು ಸೋಲಬೇಕು ಆಸ್ಟ್ರೇಲಿಯಾ ಎಂದು ಘೋಷಣೆ ಕೂಗಿದರು.
'ಭಾರತ ವಿಶ್ವಕಪ್ ಗೆಲ್ಲಲಿ' ನವದಂಪತಿಗಳಿಂದ ಟೀಂ ಇಂಡಿಯಾಗೆ ಶುಭಾಶಯ