ಸಿಎಂ ಜೊತೆ ಪಿಎಂ ಚರ್ಚೆ: ಆಕ್ಸಿಜನ್, ಲಸಿಕೆಗಾಗಿ ಬಿಎಸ್‌ವೈ ಮನವಿ

By Suvarna NewsFirst Published Apr 23, 2021, 1:28 PM IST
Highlights

ಬಿಎಸ್‌ವೈ ಜೊತೆ ಮೋದಿ ಚರ್ಚೆ | ವೆಂಟಿಲೇಟರ್, ಆಕ್ಸಿಜನ್ ಹಾಗೂ ಕೊರೋನಾ ಲಸಿಕೆ ಪೂರೈಸುವಂತೆ ಮನವಿ

ಬೆಂಗಳೂರು(ಏ.23): 10 ರಾಜ್ಯಗಳ ಸಿಎಂ ಗಳ ಜೊತೆ ಪ್ರಧಾನಿ ವೀಡಿಯೋ ಕಾನ್ಪೆರೆನ್ಸ್ ಮೂಲಕ ರಾಜ್ಯದ ಕೊರೋನಾ ಸ್ಥಿತಿಗತಿ ಬಗ್ಗೆ ಪಿಎಂ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದ ಸಿಎಂ ಯಡಿಯೂರಪ್ಪ ಜೊತೆ ನರೇಂದ್ರ ಮೋದಿ ಚರ್ಚೆ ನಡೆಸಿದ್ದು, ಕೊರೋನಗೆ ಕೈಗೊಂಡ ಕ್ರಮ ಗಳ ಬಗ್ಗೆ ವಿವರಿಸಿದ ಸಿಎಂ ವಿವರಣೆ ನೀಡಿದ್ದಾರೆ.

"

ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಹಾಗೂ ಬಿಗಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದ, ಈ ವೇಳೆ ವೆಂಟಿಲೇಟರ್, ಆಕ್ಸಿಜನ್ ಹಾಗೂ ಕೊರೋನಾ ಲಸಿಕೆ ಪೂರೈಸುವಂತೆ ಮನವಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ ಸಿಎಂ ಯಡಿಯೂರಪ್ಪ ರಾಜ್ಯಕ್ಕೆ ಆಕ್ಸಿಜನ್ ಹೆಚ್ಚು ಅವಶ್ಯಕತೆ ಇದೆ. 
ಹೀಗಾಗಿ ಇದನ್ನು ಹೆಚ್ಚು ಪೂರೈಕೆ ಮಾಡಬೇಕು ಎಂದಿದ್ದಾರೆ.

ಕುಟುಂಬದವರೆಲ್ಲ ಕೊರೋನಾಗೆ ಬಲಿ: ನೊಂದ ಮಹಿಳೆ ಆತ್ಮಹತ್ಯೆ

ಸಭೆಯಲ್ಲಿ 1 ಕೋಟಿ ಲಸಿಕೆ ಖರೀದಿಸುವ ಸರ್ಕಾರದ ನಿರ್ಧಾರದ ಬಗ್ಗೆ ಪ್ರಧಾನಿಗೆ ವಿವರಣೆಯನ್ನೂ ನೀಡಿದ್ದಾರೆ. ಈಗಾಗಲೇ ನೀವು ನೀಡಿರುವ ಲಸಿಕೆ, ಸಮಗ್ರವಾಗಿ ಜನರಿಗೆ ವಿತರಣೆ ಮಾಡಲಾಗ್ತಿದೆ. ಇದರ ಜೊತೆಗೆ ಮತ್ತಷ್ಟು ಲಸಿಕೆ ರಾಜ್ಯಕ್ಕೆ ಒದಗಿಸಿ ಎಂದು ಕೇಳಲಾಗಿದೆ. ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ಅವಶ್ಯಕತೆ ಇದೆ. 
ಎಲ್ಲಾದರೂ ಬೇರೆ ಕಡೆಯಿಂದ ಆದರೂ ಆಕ್ಸಿಜನ್ ವ್ಯವಸ್ಥೆ ಮಾಡಿಕೊಡಿ. ಇಲ್ಲಿ ಆಕ್ಸಿಜನ್ ಇಲ್ದೆ ಜನರಿಗೆ ತುಂಬಾ ಸಮಸ್ಯೆ ಆಗಿದೆ. ಹೀಗಾಗಿ ನಮಗೆ ಹೆಚ್ಚು ಆಕ್ಸಿಜನ್ ಪೂರೈಕೆ ಮಾಡಿ ಎಂದು ಬಿಎಸ್‌ವೈ ಕೇಳಿಕೊಂಡಿದ್ದಾರೆ.

ಸದ್ಯ ರಾಜ್ಯದ ಸಿಎಂ ಯಡಿಯೂರಪ್ಪ ಜೊತೆಗೆ ಪಿಎಂ ಚರ್ಚೆ ಮುಕ್ತಾಯವಾಗಿದ್ದು ಇದೀಗ ಉಳಿದ ರಾಜ್ಯಗಳ ಸಿಎಂ ಗಳ ಜೊತೆ ಸಮಾಲೋಚನೆ ಮುಂದುವರಿಯಲಿದೆ. ಸ್ವಲ್ಪ ಹೊತ್ತಲ್ಲೇ ಉಳಿದ ರಾಜ್ಯಗಳ ಸಿಎಂ ಗಳ ಜೊತೆ ಪಿಎಂ ಚರ್ಚೆ ಮುಗಿಸಲಿದ್ದಾರೆ. ಅಂತಿಮವಾಗಿ 10 ರಾಜ್ಯಗಳ ಸಿಎಂ ಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

click me!