ವಿವಾಹ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನದ ಮಾಲೀಕರಿಗೆ 15 ಸಾವಿರ ರು. ದಂಡ| ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ನಡೆದ ವಿವಾಹ| ವಿವಾಹದಲ್ಲಿ 50 ಜನರನ್ನು ಹೊರತು ಪಡಿಸಿ ಉಳಿದವರನ್ನು ಹೊರಗೆ ಕಳುಹಿಸಿದ ಅಧಿಕಾರಿಗಳು ಮತ್ತು ಪೊಲೀಸರು|
ಕಾರವಾರ/ಮಂಡ್ಯ(ಏ.23): ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೆಚ್ಚು ಜನ ಸೇರಿದ್ದ ಹಿನ್ನೆಲೆಯಲ್ಲಿ ಮದುವೆ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮತ್ತು ಪೊಲೀಸರು 50 ಜನರನ್ನು ಹೊರತು ಪಡಿಸಿ ಉಳಿದವರನ್ನು ಹೊರಗೆ ಕಳುಹಿಸಿದ ಘಟನೆ ಕಾರವಾರದಲ್ಲಿ ನಡೆದಿದ್ದರೆ, ಮಂಡ್ಯದಲ್ಲಿ ವಿವಾಹ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನದ ಮಾಲೀಕರಿಗೆ 15 ಸಾವಿರ ರು. ದಂಡ ವಿಧಿಸಲಾಗಿದೆ.
ಆದರೆ, ಕಾರವಾರ ತಾಲೂಕಿನ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ನಡೆದ ವಿವಾಹದಲ್ಲಿ ಹೆಚ್ಚಿನ ಜನ ಸೇರಿದ್ದರು. ಹೀಗಾಗಿ ಅಧಿಕಾರಿಗಳು 50 ಜನಕ್ಕೆ ಮಾತ್ರ ಅಲ್ಲಿ ಇರಲು ಅವಕಾಶ ನೀಡಿ ಉಳಿದವರನ್ನು ಹೊರಕ್ಕೆ ಕಳುಹಿಸಿದರು.
undefined
ಇಂದು ರಾತ್ರಿಯಿಂದ 57 ತಾಸು ವೀಕೆಂಡ್ ಕರ್ಫ್ಯೂ: ಸುಮ್ ಸುಮ್ನೆ ತಿರುಗಾಡೋ ಹಾಗಿಲ್ಲ..!
ಇನ್ನು ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀಯೋಗಿ ನಾರಾಯಣ ಸಮುದಾಯ ಭವನದಲ್ಲಿ 200ಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ವಿವಾಹ ನಿಶ್ಚಿತಾರ್ಥ ನಡೆಸಲಾಗುತ್ತಿತ್ತು. ಅಧಿಕಾರಿಗಳು ದಾಳಿ ನಡೆಸಿ ಸಮುದಾಯಭವನದ ಮಾಲೀಕರಿಗೆ 15 ಸಾವಿರ ದಂಡ ವಿಧಿಸಿದರು.