ಚಂದ್ರಯಾನಕ್ಕೆ ಅಪಹಾಸ್ಯ: ಪ್ರಕಾಶ ರೈ ಬಂಧನಕ್ಕೆ ಶ್ರೀರಾಮ ಸೇನೆಯ ಆಗ್ರಹ

By Kannadaprabha News  |  First Published Aug 24, 2023, 7:37 PM IST

ಚಂದ್ರಯಾನ-3 ಯೋಜನೆ ಕುರಿತಂತೆ ನಟ, ರಾಜಕಾರಣಿ ಪ್ರಕಾಶ್‌ ರೈ ಸಾಮಾಜಿಕ ಜಾಲ ತಾಣದಲ್ಲಿ ಅಪಹಾಸ್ಯ ರೀತಿಯ ಫೋಟೋ ಹಂಚಿಕೊಂಡಿದ್ದು, ಇವರನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆ ಸಂಘಟನೆ ಆಗ್ರಹಿಸಿದೆ.


ರಬಕವಿ-ಬನಹಟ್ಟಿ (ಆ.24) ಚಂದ್ರಯಾನ-3 ಯೋಜನೆ ಕುರಿತಂತೆ ನಟ, ರಾಜಕಾರಣಿ ಪ್ರಕಾಶ್‌ ರೈ ಸಾಮಾಜಿಕ ಜಾಲ ತಾಣದಲ್ಲಿ ಅಪಹಾಸ್ಯ ರೀತಿಯ ಫೋಟೋ ಹಂಚಿಕೊಂಡಿದ್ದು, ಇವರನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆ ಸಂಘಟನೆ ಆಗ್ರಹಿಸಿದೆ.

ಪ್ರಕಾಶ್‌ ರೈ ಇಸ್ರೋ ವಿಜ್ಞಾನಿಗಳ ಕುರಿತು ವ್ಯಂಗ್ಯವಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶ್ರೀರಾಮ ಸೇನೆ ಮುಖಂಡ ಶಿವಾನಂದ ನಂದು ಗಾಯಕವಾಡ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಠಾಣೆಗೆ ತೆರಳಿ ಠಾಣಾಧಿ​ಕಾರಿ ಬಸವರಾಜ ಖೋತ ಅವರಿಗೆ ಮನವಿ ನೀಡಿದ್ದಾರೆ. ಆದರೆ, ಪ್ರಕಾ ರೈ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ.

Tap to resize

Latest Videos

ಚಹಾ ಸೋಸುವ ಫೋಟೊ ಹಾಕುವ ಮೂಲಕ ಪ್ರಕಾಶ್‌ ರೈ ವ್ಯಂಗ್ಯ ಮಾಡಿದ್ದು, ಚಂದ್ರಯಾನ-3 ಕಳಿಸುತ್ತಿರುವ ಚಿತ್ರಗಳ ಬಗ್ಗೆ ಟ್ವೀಟ್‌ ಸಹ ಮಾಡಿದ್ದು, ಈ ಮೂಲಕ ದೇಶದ ಜನತೆಯ ಭಾವನೆಗೆ ನೋವುಂಟು ಮಾಡಿದ್ದಾರೆಂದು ಶ್ರೀರಾಮ ಸೇನೆ ಮುಖಂಡರು ಆರೋಪಿಸಿದರು.

ಇಸ್ರೋ ಸಾಧನೆ ಪ್ರಕಾಶ್ ರಾಜ್ ಮುಖಕ್ಕೆ ಕ್ಯಾಕರಿಸಿ ಉಗಿದಂತಾಗಿದೆ: ಪ್ರಮೋದ್ ಮುತಾಲಿಕ್

ಮತ್ತೆ ಟೋಲ್‌ ಆದ ನಟ ಪ್ರಕಾಶ್‌ರಾಜ್‌

ಚಂದ್ರಯಾನ -3 ಯೋಜನೆ ಕುರಿತ ವ್ಯಂಗ್ಯಚಿತ್ರವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡು ಇತ್ತೀಚೆಗೆ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದ ಖ್ಯಾತ ನಟ ಪ್ರಕಾಶ್‌ ರಾಜ್‌, ಬುಧವಾರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ತುತ್ತಾಗಿದ್ದಾರೆ.

ಇತ್ತೀಚೆಗೆ ಜಾಲತಾಣದಲ್ಲಿ ‘ಲೋಟವೊಂದರಲ್ಲಿ ವ್ಯಕ್ತಿಯೊಬ್ಬ ಚಹಾ ಸುರಿಯುತ್ತಿರುವ ವ್ಯಂಗಚಿತ್ರ ಹಂಚಿಕೊಂಡು ‘ಇದೀಗ ಬಂದ ಸುದ್ದಿ. ಚಂದ್ರನಿಂದ ಬಂದ ಮೊದಲ ಚಿತ್ರ. ವಿಕ್ರಮ್‌ ಲ್ಯಾಂಡರ್‌. ಜಸ್ಟ್‌ ಆಸ್ಕಿಂಗ್‌’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದರು. ಈ ವಿವಾದಾತ್ಮಕ ಪೋಸ್ಟ್‌ಗೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ನಡುವೆ ಬುಧವಾರ ಮತ್ತೊಂದು ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌ ‘ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು. ಇಸ್ರೋ, ಚಂದ್ರಯಾನ-3, ವಿಕ್ರಮ್‌ಲ್ಯಾಂಡರ್‌ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ವಿಶಾಲ ವಿಶ್ವದ ಇನ್ನಷ್ಟುವಿಸ್ಮಯಗಳನ್ನು ತಿಳಿಯಲು ಸಂಭ್ರಮಿಸಲು ಇದು ದಾರಿಯಾಗಲಿ’ ಎಂದಿದ್ದಾರೆ. ಅದರ ಬೆನ್ನಲ್ಲೇ ಹಳೆಯ ಟ್ವೀಟ್‌ ಮತ್ತು ಬುಧವಾರ ಟ್ವೀಟ್‌ ಅನ್ನು ಹೋಲಿಸಿ ನೆಟ್ಟಿಗರು ಪ್ರಕಾಶ್‌ರಾಜ್‌ರನ್ನು ಅಣುಕಿಸಿದ್ದಾರೆ. ನಟನನ್ನು ದೇಶದ್ರೋಹಿ ಎಂದೆಲ್ಲ ಟೀಕಿಸಿ ಟ್ರೋಲ್‌ ಮಾಡಲಾಗುತ್ತಿದೆ.

Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್‌ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ

ಜೊತೆಗೆ ತೆಲುಗು ಸಿನಿಮಾವೊಂದರಲ್ಲಿ ಪ್ರಕಾಶ್‌ ರಾಜ್‌ಗೆ ನಟನೊಬ್ಬ ಕಪಾಳಮೋಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.

click me!