ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌ ಭಾವ ಮಹದೇವಯ್ಯ ನಾಪತ್ತೆ: ಕಿಡ್ನಾಪ್‌ ಶಂಕೆ

By Kannadaprabha News  |  First Published Dec 3, 2023, 12:46 PM IST

ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ. 


ಚನ್ನಪಟ್ಟಣ (ಡಿ.03): ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದು, ಅಪಹರಣದ ಶಂಕೆ ವ್ಯಕ್ತವಾಗಿದೆ. ಯೋಗೇಶ್ವರ್ ಅವರ ಸಹೋದರಿಯ ಪತಿಯಾಗಿರುವ 62 ವರ್ಷದ ಮಹದೇವಯ್ಯ ಅವರು ಬೆಂಗಳೂರಿನಲ್ಲಿ ವಾಸವಿದ್ದು, ಆಗಾಗ ಚಕ್ಕೆರೆಯಲ್ಲಿನ ತೋಟದ ಮನೆಗೆ ಬಂದು ವಾಸಿಸುತ್ತಿದ್ದರು. ಪತ್ನಿ ಬೆಂಗಳೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅವರೊಬ್ಬರೇ ಇದ್ದರು. ಇನ್ನು, ಮಹದೇವಯ್ಯ ಅವರ ಮೊಬೈಲ್ ಪದೇ ಪದೇ ಆನ್ ಅಂಡ್ ಆಫ್ ಆಗುತ್ತಿದೆ.

ಶನಿವಾರ ಬೆಳಗ್ಗೆ ಮಹದೇಶ್ವರ ಬೆಟ್ಟದ ಮೇಲೆ ಮೊಬೈಲ್ ಲೊಕೇಶನ್ ತೋರಿಸಿದ್ದು, ನಂತರ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋಗಿ ನೋಡಿದಾಗ, ಯಾರೋ ಅವರನ್ನು ಅಪಹರಿಸಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿರುವ ಅನುಮಾನ ವ್ಯಕ್ತವಾಗಿ, ಕೂಡಲೇ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಮಹದೇವಯ್ಯ ಅವರ ಮೊಬೈಲ್ ಪದೇ ಪದೇ ಆನ್ ಅಂಡ್ ಆಫ್ ಆಗುತ್ತಿದೆ. ಶನಿವಾರ ಬೆಳಗ್ಗೆ ಮಹದೇಶ್ವರ ಬೆಟ್ಟದ ಮೇಲೆ ಮೊಬೈಲ್ ಲೊಕೇಶನ್ ತೋರಿಸಿದ್ದು, ನಂತರ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

Tap to resize

Latest Videos

ತನಿಖೆ ಚುರುಕು: ಈ ಪ್ರಕರಣವನ್ನು ಪರಿಗಣಿಸಿರುವ ಜಿಲ್ಲಾ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನೆಡೆಸುತ್ತಿದ್ದಾರೆ. ಪೊಲೀಸ್ ಹಿರಿಯ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸ್ ಶ್ವಾನ ಸುಳ್ಳೇರಿ ಗ್ರಾಮದ ವರೆಗೆ ಹೋಗಿ ಹಿಂದಿರುಗಿದ್ದು, ಆ ಮೂಲಕ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಮಹದೇವಯ್ಯ ಅವರ ಮೊಬೈಲ್ ಪೋನ್‌ಗೆ ಬಂದಿರುವ ಕರೆಗಳ ದಾಖಲೆಯನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ಕರೆಗಳ ವಿವರ ಸಿಕ್ಕ ಬಳಿಕ ಸುಳಿವು ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ತಿಗಳ ಡಿಜೀಟಲೀಕರಣ ಯೋಜನೆ ಕನಕಪುರಕ್ಕೆ ವಿಸ್ತರಣೆ: ಡಿ.ಕೆ.ಶಿವಕುಮಾರ್

ನಮ್ಮ ಭಾವ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ತೋಟದ ಮನೆಯತ್ತ ಬೇರೆ ಯಾವುದೋ ಕಾರುಗಳು ಬಂದು ಹೋಗಿರುವ ಹಾಗಿದೆ. ಈ ಹಿನ್ನೆಲೆಯಲ್ಲಿ ಸಂದೇಹ ಗೊಂಡು ಯಾರೋ ಅಪಹರಣ ಮಾಡಿರಬಹುದೆಂದು ಪೊಲೀಸರಿಗೆ ದೂರು ನೀಡಿದ್ದೇವೆ.
-ಸಿ.ಪಿ.ರಾಜೇಶ್, ಯೋಗೇಶ್ವರ್ ಸಹೋದರ

click me!