ಬೆಳಗಾವಿ ಸುವರ್ಣಸೌಧದದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಜಿಲ್ಲೆಯ 18ಶಾಸಕರ ಪೈಕಿ ಕೇವಲ 3 ಶಾಸಕರು ಮಾತ್ರ ಭಾಗಿಯಾಗಿದ್ದಾರೆ.
ಬೆಳಗಾವಿ (ನ.17): ಬೆಳಗಾವಿ ಸುವರ್ಣಸೌಧದದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಜಿಲ್ಲೆಯ 18ಶಾಸಕರ ಪೈಕಿ ಕೇವಲ 3 ಶಾಸಕರು ಮಾತ್ರ ಭಾಗಿಯಾಗಿದ್ದಾರೆ.
ಮಳೆಯ ಅಭಾವದಿಂದ ಬೆಳಗಾವಿ ಜಿಲ್ಲೆಯ ಎಲ್ಲ 15 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ರಾಜ್ಯ ಸರ್ಕಾರದಿಂದ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಲಾಗಿದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳ ಮಾಹಿತಿ ನೀಡಿದರು. ಸಭೆಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಕುಡಚಿ ಶಾಸಕ ಮಹೇಶ ತಮ್ಮನ್ನವರ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಭಾಗಿ, ಸಭೆ ಆರಂಭವಾದರೂ ಬಾರದ ಉಳಿದ 15 ಜನ ಶಾಸಕರು
ಬಿಜೆಪಿಯಲ್ಲಿ ಯಡಿಯೂರಪ್ಪಗೆ ಇದ್ದಷ್ಟು ಆಕರ್ಷಣೆ ಯಾರಿಗೂ ಇಲ್ಲ: ಸತೀಶ ಜಾರಕಿಹೊಳಿ
ಸಭೆಗೆ ಗೈರಾದ ಶಾಸಕರು
1) ಲಕ್ಷ್ಮಿ ಹೆಬ್ಬಾಳ್ಕರ್ ( ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ)
2) ಆಸೀಫ್ ಸೇಠ್( ಬೆಳಗಾವಿ ಉತ್ತರ ಕ್ಷೇತ್ರ)
3)ಅಭಯ್ ಪಾಟೀಲ ( ಬೆಳಗಾವಿ ದಕ್ಷಿಣ ಕ್ಷೇತ್ರ)
4) ವಿಠ್ಟಲ ಹಲಗೇಕರ್( ಖಾನಾಪುರ ಕ್ಷೇತ್ರ)
5) ಮಹಾಂತೇಶ ಕೌಜಲಗಿ ( ಬೈಲಹೊಂಗಲ ಕ್ಷೇತ್ರ)
6) ಅಶೋಕ ಪಟ್ಟಣ( ರಾಮದುರ್ಗ ಶಾಸಕ)
7) ಬಾಬಾಸಾಹೇಬ್ ಪಾಟೀಲ ( ಕಿತ್ತೂರು ಶಾಸಕ)
8) ರಮೇಶ ಜಾರಕಿಹೊಳಿ ( ಗೋಕಾಕ ಕ್ಷೇತ್ರ)
09) ಬಾಲಚಂದ್ರ ಜಾರಕಿಹೊಳಿ ( ಅರಭಾವಿ ಕ್ಷೇತ್ರ)
10) ನಿಖಿಲ್ ಕತ್ತಿ( ಹುಕ್ಕೇರಿ ಕ್ಷೇತ್ರ)
11) ಗಣೇಶ ಹುಕ್ಕೇರಿ ( ಚಿಕ್ಕೋಡಿ ಕ್ಷೇತ್ರ)
12) ರಾಜು ಕಾಗೆ( ಕಾಗವಾಡ ಕ್ಷೇತ್ರ)
13) ಲಕ್ಷ್ಮಣ ಸವದಿ( ಅಥಣಿ ಕ್ಷೇತ್ರ)
14) ಶಶಿಕಲಾ ಜೊಲ್ಲೆ( ನಿಪ್ಪಾಣಿ)
15) ದುರ್ಯೋಧನ ಐಹೊಳೆ( ರಾಯಬಾಗ ಕ್ಷೇತ್ರ
ಬರ ನಿರ್ವಹಣೆ: ರೈತರ ನೆರವಿಗೆ ಧಾವಿಸಲು ಸಚಿವ ಕೃಷ್ಣ ಬೈರೇಗೌಡ ತಾಕೀತು