ರೈತರೊಬ್ಬರ ಹೊಲದಲ್ಲಿ ಬಿತ್ತನೆ ಮಾಡುವ ಮೂಲಕ ಬಸವಕಲ್ಯಾಣ ಶಾಸಕ ಶರಣು ಸಲಗರ ಎಲ್ಲರ ಗಮನ ಸೆಳೆದರು. ಒಂದು ಎಕರೆ ಹೊಲದಲ್ಲಿ ಬಿತ್ತನೆ ಮಾಡುವ ಮೂಲಕ ರೈತರಿಂದ ಸೈ ಎನ್ನಿಸಿಕೊಂಡ ಶಾಸಕ.
ಬೀದರ್ (ಜೂ.29) : ರೈತರೊಬ್ಬರ ಹೊಲದಲ್ಲಿ ಬಿತ್ತನೆ ಮಾಡುವ ಮೂಲಕ ಬಸವಕಲ್ಯಾಣ ಶಾಸಕ ಶರಣು ಸಲಗರ ಎಲ್ಲರ ಗಮನ ಸೆಳೆದರು.
ಘೋಟಲ ಗ್ರಾಮದ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ರೈತ. ಇಂದು ಶಾಸಕರು ಘೋಟಲ ಗ್ರಾಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲು ಹೋಗಿದ್ದರು. ವಾಪಸ್ ಆಗುವ ವೇಳೆ ಹೊಲದಲ್ಲಿ ರೈತನೋರ್ವ ಬಿತ್ತನೆ ಮಾಡುತ್ತಿರುವುದು ನೋಡಿ ಕಾರಿನಿಂದ ಇಳಿದು ರೈತನ ಜೊತೆ ಕೈ ಜೋಡಿಸಿದ ಶಾಸಕ ಶರಣು ಸಲಗರ.
undefined
ಬಸವಕಲ್ಯಾಣದಲ್ಲಿ ಶೀಘ್ರ ಅನುಭವ ಮಂಟಪ ಕಟ್ಟಡ ಉದ್ಘಾಟನೆ: ಈಶ್ವರ ಖಂಡ್ರೆ
ಸುಮಾರು ಒಂದು ಎಕರೆ ಭೂಮಿಯಲ್ಲಿ ತೊಗರಿ, ಸೋಳಾ ಬೀಜ ಬಿತ್ತನೆ ಮಾಡಿ ರೈತರಿಂದ ಸೈ ಎನಿಸಿಕೊಂಡ ಶಾಸಕರು.
ಮಳೆ ಬಾರದೆ ಆತಂಕದಲ್ಲಿದ್ದ ರೈತರು. ಆದರೆ ಕೆಳೆದ ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮಗಳಿಗೆ ತೆರಳಿ ರೈತರಿಗೆ ಶಾಸಕರೇ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ. ಜತೆಗೆ ಹೊಲದಲ್ಲಿ ಇಳಿದು ರೈತರೊಂದಿಗೆ ಬಿತ್ತನೆ ಮಾಡುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ರೈತರೊಂದಿಗೆ ಬಿತ್ತನೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮನಿಗೆ ಅವಮಾನ: ಬಿಜೆಪಿ ಶಾಸಕನ ವಿರುದ್ಧ ಆಕ್ರೋಶ