
ಬೆಂಗಳೂರು(ಜೂ.29): ಶಕ್ತಿ ಯೋಜನೆ ಜಾರಿಯಿಂದಾಗಿ ಸಿಬ್ಬಂದಿಗೆ ಜೂನ್ ತಿಂಗಳ ವೇತನ ಪಾವತಿಸಲು ಸಾರಿಗೆ ನಿಗಮಗಳಲ್ಲಿ ಹಣವಿಲ್ಲ ಎಂಬುದು ಕೇವಲ ಊಹೆ. ಅದಕ್ಕೆಲ್ಲ ಉತ್ತರ ಕೊಡಲು ಆಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಹೇಳಿದ್ದಾರೆ.
ಮಹಿಳಾ ಪ್ರಯಾಣಿಕರು ಎಷ್ಟು ಓಡಾಡಿದ್ದಾರೆ, ಅದಕ್ಕೆ ತಗುಲಿದ ವೆಚ್ಚಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. ಆ ಮೊತ್ತವನ್ನು ಸರ್ಕಾರ ನಮಗೆ ಭರಿಸಲಿದೆ. ನಾಲ್ಕೂ ನಿಗಮಗಳಿಗೆ ಪ್ರತ್ಯೇಕವಾಗಿ ಅನುದಾನ ಪಡೆಯಲಾಗುವುದು. ಆ ಹಣವನ್ನು ವೇತನ ಪಾವತಿ ಸೇರಿದಂತೆ ಇನ್ನಿತರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.
ಉಚಿತ ಬಸ್ ಸಂಚಾರಕ್ಕೆ ಗಡಿ ಜಿಲ್ಲೆ ಬೀದರ್‌ನಲ್ಲಿ ನಿರಾಸಕ್ತಿ: ಬಸ್‌ಗಳು ಖಾಲಿ ಖಾಲಿ!
ಈವರೆಗಿನ ಉಚಿತ ಬಸ್ ಪ್ರಯಾಣದ ಮೌಲ್ಯ 208 ಕೋಟಿ
ಬೆಂಗಳೂರು: ‘ಶಕ್ತಿ’ ಯೋಜನೆ ಅಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳವಾರ 60.63 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆ ಜಾರಿ ನಂತರದಿಂದ ಈವರೆಗೆ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 208.36 ಕೋಟಿ ರು. ತಲುಪಿದೆ. ಮರುಪಾವತಿಗೆ ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ: ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ ಟಿಕೆಟ್ ಮೌಲ್ಯವನ್ನು ನಿಗಮಗಳಿಗೆ ಮರು ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಜೂನ್ 30ರ ನಂತರ ಜೂನ್ 11ರಿಂದ 30ರವರೆಗೆ ಬಸ್‌ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ, ಅವರಿಗೆ ನೀಡಲಾದ ಟಿಕೆಟ್‌ನ ಮೌಲ್ಯ ಉಲ್ಲೇಖಿಸಿ ಅಷ್ಟುಮೊತ್ತವನ್ನು ನಿಗಮಗಳಿಗೆ ಪಾವತಿಸಬೇಕು ಎಂದು ಕೋರಲಾಗುತ್ತದೆ. ರಾಜ್ಯ ಸರ್ಕಾರ ನೀಡುವ ಅನುದಾನದಿಂದ ನಿಗಮಗಳು ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ಪಾವತಿಸಲಿವೆ.
ಜೂ. 11ರಿಂದ ಮಹಿಳೆಯರ ಉಚಿತ ಪ್ರಯಾಣ ಯೋಜನೆ ಜಾರಿಯಾದ ದಿನದಿಂದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಸಂಚರಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವಾರದವರೆಗೆ 50ರಿಂದ 55 ಲಕ್ಷದಷ್ಟಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ ಸೋಮವಾರ ಮತ್ತು ಮಂಗಳವಾರ 60 ಲಕ್ಷ ದಾಟಿದೆ. ಜೂನ್ 26ರಂದು 60.53 ಲಕ್ಷ ಮಹಿಳೆಯರು ಸಂಚರಿಸಿದ್ದರೆ, ಜೂನ್ 27ರಂದು ಈ ಸಂಖ್ಯೆ 60.63 ಲಕ್ಷಕ್ಕೆ ತಲುಪಿತ್ತು.
ಸಾರಿಗೆ ನಿಗಮಗಳಿಗೆ ಉಚಿತ ಪ್ರಯಾಣದ ‘ಶಕ್ತಿ’..!
200 ಕೋಟಿ ರು. ದಾಟಿದ ಟಿಕೆಟ್ ಮೌಲ್ಯ:
ಯೋಜನೆ ಜಾರಿಯಾದ 18 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 208.36 ಕೋಟಿ ರು. ತಲುಪಿದೆ. ಸೋಮವಾರದವರೆಗೆ 194.50 ಕೋಟಿ ರು. ಇತ್ತು.ಮಂಗಳವಾರ 60.63 ಲಕ್ಷ ಮಹಿಳೆಯರ ಪ್ರಯಾಣಿಸಿದ್ದು, 13.86 ಕೋಟಿ ರು. ಮೌಲ್ಯದ ಟಿಕೆಟ್ ನೀಡಲಾಗಿದೆ. ಮಂಗಳವಾರದವರೆಗೆ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 208.36 ಕೋಟಿ ರು. ಮುಟ್ಟಿದೆ.
ಮರುಪಾವತಿಗೆ ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ:
ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ ಟಿಕೆಟ್ ಮೌಲ್ಯವನ್ನು ನಿಗಮಗಳಿಗೆ ಮರು ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಜೂನ್ 30ರ ನಂತರ ಜೂನ್ 11ರಿಂದ 30ರವರೆಗೆ ಬಸ್‌ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ, ಅವರಿಗೆ ನೀಡಲಾದ ಟಿಕೆಟ್‌ನ ಮೌಲ್ಯ ಉಲ್ಲೇಖಿಸಿ ಅಷ್ಟುಮೊತ್ತವನ್ನು ನಿಗಮಗಳಿಗೆ ಪಾವತಿಸಬೇಕು ಎಂದು ಕೋರಲಾಗುತ್ತದೆ. ರಾಜ್ಯ ಸರ್ಕಾರ ನೀಡುವ ಅನುದಾನದಿಂದ ನಿಗಮಗಳು ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ಪಾವತಿಸಲಿವೆ. ಈ ಕುರಿತಂತೆ ನಿಗಮಗಳ ಎಂಡಿಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೂ ತಂದಿದ್ದು, ಅವರು ಕೂಡ ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಿ ನಿಗಮಗಳಿಗೆ ಪ್ರಸ್ತಾವನೆ ಸಲ್ಲಿಸಿದ ಕೂಡಲೆ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ