ಕೊರೋನಾ ಜಾಗೃತಿ ಮೂಡಿಸಲು ಹೊನ್ನಾಳಿ ತಾಲೂಕಿನ ಹನಗವಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮಕ್ಕಳೊಂದಿಗೆ ಮಗುವಾಗಿ ತಾವೂ ಎಲ್ಲರಂತೆ ಸರದಿಯಲ್ಲಿ ಕುಳಿತು, ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.
ದಾವಣಗೆರೆ (ಜ.18): ಕೊರೋನಾ ಜಾಗೃತಿ (Corona Awareness) ಮೂಡಿಸಲು ಹೊನ್ನಾಳಿ ತಾಲೂಕಿನ ಹನಗವಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukacharya) ಮಕ್ಕಳೊಂದಿಗೆ (Childrens) ಮಗುವಾಗಿ ತಾವೂ ಎಲ್ಲರಂತೆ ಸರದಿಯಲ್ಲಿ ಕುಳಿತು, ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.
ಹನಗವಾಡಿ ಶಾಲೆಯಲ್ಲಿ ಬಿಸಿಯೂಟದ ಸಮಯವಾಗಿದ್ದರಿಂದ ಶಾಸಕ ರೇಣುಕಾಚಾರ್ಯ ಸಹ ಮಕ್ಕಳ ಜೊತೆಗೆ ಸರದಿಯಲ್ಲಿ ಕುಳಿತರು. ಶಾಸಕರು ತಮ್ಮೊಂದಿಗೆ ಊಟಕ್ಕೆ ಕುಳಿತಿದ್ದನ್ನು ಕಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಸಹ ಖುಷಿಯಲ್ಲಿದ್ದರೆ, ಅಡುಗೆ ಸಿಬ್ಬಂದಿ ತಾವು ಮಾಡಿದ ಅಡುಗೆ ಸವಿದ ಶಾಸಕರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿದ್ದರು.
ಮಕ್ಕಳೊಂದಿಗೆ ಬಿಸಿಯೂಟ ಸೇವಿಸುತ್ತಲೇ, ದಿನ ನಿತ್ಯ ಏನೆಲ್ಲಾ ಊಟವನ್ನು ಮಕ್ಕಳಿಗೆ ನೀಡುತ್ತೀರಿ, ಅಡುಗೆಗೆ ಏನೇನು ಬೇಳೆ, ಕಾಳು, ಸೊಪ್ಪು, ತರಕಾರಿ ಬಳಸುತ್ತೀರಿ ಎಂಬುದಾಗಿ ಅಡುಗೆ ಸಿಬ್ಬಂದಿ, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಪ್ರಶ್ನಿಸಿದರು. ಅಲ್ಲದೇ, ಮಕ್ಕಳಿಗೆ ಶಾಲೆಯಲ್ಲಿ ನೀಡುವ ಬಿಸಿಯೂಟದ ಬಗ್ಗೆ ಪ್ರಶ್ನಿಸಿದಾಗ ಊಟ ಚೆನ್ನಾಗಿರುತ್ತದೆಂಬ ಉತ್ತರ ಮಕ್ಕಳಿಂದ ವ್ಯಕ್ತವಾಯಿತು.
ಬಂಡಾಯದ ಪ್ರಶ್ನೆಯೇ ಇಲ್ಲ, ರಾಜಕೀಯ ವೈರಾಗ್ಯದ ಮಾತನ್ನೂ ನಾನು ಆಡಿಲ್ಲ: Renukacharya
ಶಾಲಾ ಮಕ್ಕಳೊಂದಿಗೆ ಊಟ ಮಾಡಿದ ನಂತರ ಶಾಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕ-ಶಿಕ್ಷಕಿಯರು, ಅಡುಗ ಸಿಬ್ಬಂದಿ ಹಾಗೂ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶಾಸಕರು, ಎಲ್ಲೆಡೆ 0ಯಿಂದ 18 ವರ್ಷದ ಒಳಗಿನ ಮಕ್ಕಳಲ್ಲೂ ಕೊರೋನಾ ಸೋಂಕು ಕಂಡು ಬರುತ್ತಿದೆ. ಒಮಿಕ್ರೋನ್ ಕೇಸ್‌ಗಳೂ ಬೇರೆ ಕಡೆ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆ, ಕೊಠಡಿ, ಅಡುಗೆ ಮನೆಯನ್ನು ಸ್ಯಾನಿಟೈಸ್ ಮಾಡಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ: ಶಾಲೆಯಲ್ಲಿ ಹಾಗೂ ಶಾಲಾ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಕ್ಕಿ, ಬೇಳೆ, ತರಕಾರಿ, ಸೊಪ್ಪನ್ನು ಚೆನ್ನಾಗಿ ತೊಳೆದು ಅಡುಗೆ ಮಾಡಬೇಕು. ಆಹಾರ ಧಾನ್ಯ, ಸೊಪ್ಪು ತರಕಾರಿ ಸಂಗ್ರಹಿಸಿಡುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಶುಚಿಯಾದ, ರುಚಿಯಾದ ಅಡುಗೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ನಿಗಾವಹಿಸಬೇಕು. ನಿಮ್ಮ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
Karnataka BJP ಯತ್ನಾಳ್ ಹೇಳಿಕೆಗೆ ಜೈ ಎಂದ ರೇಣುಕಾಚಾರ್ಯ, ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
ಶ್ವಾನಕ್ಕೆ ಸನ್ಮಾನ: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ರಾಮೇಶ್ವರ ಗ್ರಾಮದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಇಂದು(ಭಾನುವಾರ) 15.76 ರೂ ವೆಚ್ಚದ ನೀರಿನ ಮೇಲ್ತೊಟ್ಟಿ ಕಾಮಗಾರಿಯನ್ನು ಉದ್ಘಾಟಿಸಿದರು. ಈ ವೇಳೆ ರೇಣುಕಾಚಾರ್ಯ ಶ್ವಾನ ಪ್ರೀತಿ ಮೆರೆದಿದ್ದಾರೆ. ಹೌದು! ಚುನಾಯಿತ ಜನಪ್ರತಿನಿದಿನಗಳು, ಮುಖಂಡರು, ಗ್ರಾಮಸ್ಥರು ಎಂಪಿ ರೇಣುಕಾಚಾರ್ಯ ಅವರುಗೆ ಹೂವಿನ ಹಾರ ಹಾಕಿ ಸನ್ಮಾನಿಸಿದರು, ಈ ವೇಳೆ ರೇಣುಕಾಚಾರ್ಯ ಅವರು ತಮ್ಮ ಕೊರಳಿನಲ್ಲಿದ್ದ ಹೂ ತೆಗೆದು ಶ್ವಾನಕ್ಕೆ ಹಾಕಿದ್ದಾರೆ.