ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಲಿಗೆ ಬಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಮುನಿರತ್ನ ಮನವಿ ಮಾಡಿದ್ದಾರೆ.
ಬೆಂಗಳೂರು (ಅ.11): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಲಿಗೆ ಬಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಮುನಿರತ್ನ ಮನವಿ ಮಾಡಿದ್ದಾರೆ.
ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಬುಧವಾರ ರಾಜಕೀಯ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಪ್ರತಿಭಟನೆ ಕೈಗೊಂಡಿದ್ದರು. ಇದಾದ ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕರಾವಳಿಗರ ಕಂಬಳ ಉತ್ಸವ ಕಾರ್ಯಕ್ರಮದ ಕರೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇರುವಲ್ಲಿಗೆ ತೆರಳಿದ ಶಾಸಕ ಮುನಿರತ್ನ ಅವರು ಡಿಸಿಎಂ ಕಾಲಿಗೆ ಬಿದ್ದು ಮನವಿ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಲೆಲ್ಲಾ ದರಿದ್ರ ಜೊತೆಗೆ ತರುತ್ತದೆ: ಚಲವಾದಿ ನಾರಾಯಣಸ್ವಾಮಿ ಆರೋಪ
ಅರಮನೆ ಮೈದಾನದಲ್ಲಿ ನಡೆದ ಹೈಡ್ರಾಮಾ: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳ ಕರೆ ಪೂಜೆ ನೆರವೇರಿಸಿ, ಕಂಬಳ ಲಾಂಛನ ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯತ್ತ ಶಾಸಕ ಮುನಿರತ್ನ ಆಗಮಿಸಲು ಮುಂದಾದರು. ಈ ವೇಳೆ ಪೊಲೀಸರಿಂದ ತಡೆಯಲಾಯಿತು. ಒಬ್ಬ ಶಾಸಕನನ್ನು ಮುಟ್ಟುವ ಮುನ್ನ ಯೋಚನೆ ಮಾಡಿ. ಶಾಸಕನಾಗಿ ಉಪಮುಖ್ಯಮಂತ್ರಿ ಭೇಟಿ ಮಾಡೋಕೆ ಬಂದಿರೋದು ಎಂದು ಪೊಲೀಸರ ವಿರುದ್ದ ಮುನಿರತ್ನ ಗರಂ ಆದರು. ನನ್ನನ್ನು ವೇದಿಕೆಗೆ ಹೋಗದಂತೆ ತಡೆಯಲು ನಾನಿಲ್ಲಿಗೆ ಪ್ರತಿಭಟನೆ ಮಾಡೋಕೆ ಬಂದಿಲ್ಲ, ನಿಮ್ಮ ವಿರುದ್ಧ ಹಕ್ಕು ಚ್ಯುತಿ ಮಂಡಿಸ್ತೇನೆ ಎಂದು ಎಚ್ಚರಿಕೆ ನೀಡಿದರು. ಇದಾದ ನಂತರ ಶಾಸಕ ಮುನಿರತ್ನ ಅವರನ್ನು ವೇದಿಕೆ ಬಳಿಗೆ ಬಿಟ್ಟರು. ಆಗ ವೇದಿಕೆ ಮುಂಭಾಗ ರ್ಸಾಜನಿಕರಂತೆ ಬಂದು ಕುಳಿತ ಮುನಿರತ್ನ, ತಾಉ ಮನವಿ ಕೊಟ್ಟೇ ಹೋಗುವುದಾಗಿ ಪಟ್ಟು ಹಿಡಿದರು. ಇನ್ನು ಡಿಕೆಶಿವಕುಮಾರ್ ಭಾಷಣ ಮುಗಿಸಿ ಕೆಳಗೆ ಬರುತ್ತಿದ್ದಂತೆ ಕಾಲಿಗೆ ಬಿದ್ದು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಮುನಿರತ್ನ ಬಂದರೂ ನೆರವಾಗದ ಸಂಸದ ಸದಾನಂದಗೌಡ, ಶಾಸಕ ಅಶ್ವತ್ಥನಾರಾಯಣ: ಇನ್ನು ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿ, ಅಲ್ಲಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಇರುವಲ್ಲಿಗೆ ಶಾಸಕ ಮುನಿರತ್ನ ಬಂದರೆ, ಬಿಜೆಪಿಯ ಸಂಸದ ಡಿ.ವಿ. ಸದಾನಂದಗೌಡ ಹಾಗೂ ಶಾಸಕ ಅಶ್ವತ್ಥನಾರಾಯಣ ವೇದಿಕೆ ಮೇಲೆ ಕುಳಿತಿದ್ದರೂ ಅವರನ್ನು ಸೌಜನ್ಯಕ್ಕಾದರೂ ಮಾತನಾಡಿಸಲು ಎದ್ದು ಬರಲಿಲ್ಲ. ಈ ಬಗ್ಗೆ ಶಾಸಕ ಅಶ್ವತ್ಥನಾರಾಯಣ ಅವರು ಪಕ್ಕದಲ್ಲಿಯೇ ಕುಳಿತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಭೇಟಿಯಾಗಲು ತಿಳಿಸಿದರೂ, ಮುನಿರತ್ನ ಡ್ರಾಮ ಮಾಡುತ್ತಿದ್ದಾರೆ ಅದನ್ನು ನೋಡಣ. ಫೀಲಂ ಮಾಡೋರದ್ದು ಡ್ರಾಮ ಒಂದೊಂದು ಇರುತ್ತದೆ. ಮೊದಲು ಮಾತನಾಡೋಣ ಆಮೇಲೆ ನೋಡಣ ಎಂದು ಮುನಿರತ್ನರನ್ನ ಕೇರ್ ಮಾಡದೇ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಷಣವನ್ನು ಮಾಡಿದರು.
ಸರ್ಕಾರ ಬೀಳಿಸುವ ಕನಸನ್ನು ಕುಮಾರಸ್ವಾಮಿ ಕಾಣಲಿ: ಚಲುವರಾಯಸ್ವಾಮಿ
ವಿಧಾನಸೌಧ ಮುಂದಿನ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದ್ದ ಯಡಿಯೂರಪ್ಪ: ಇನ್ನು ಶಾಸಕ ಮುನಿರತ್ನ ಜೊತೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲ ಪ್ರತಿಭಟನಾನಿರತ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ಇದರಿಂದ ಧೃತಿಗೆಡದ ಮುನಿರತ್ನ ಅವರು ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನೀಡಬೇಕಿದ್ದ ಅನುದಾನ ಕಡಿತಗೊಳಿಸಿ, ಯಶವಂತಪುರ, ಬ್ಯಾಟರಾಯನಪುರ ಸೇರಿ ಬೇರೆ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಇದಾದ ನಂತರ, ಮುನಿರತ್ನ ಅವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಗಮಿಸಿ ಮುನಿರತ್ನ ಅವರ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಟ್ಟರು. ಈ ಹಿನ್ನೆಲೆ ಸದ್ಯ ಶಾಸಕರು ತಮ್ಮ ಉಪವಾಸ ಧರಣಿಯನ್ನು ಹಿಂಪಡೆದು ಸರ್ಕಾರದಿಂದ ನನಗೆ ಸೂಕ್ತ ಉತ್ತರ ಸಿಗಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಅರಮನೆ ಮೈದಾನಕ್ಕೆ ತೆರಳಿದರು. ನಂತರ ಕಾಲಿಗೆ ಬಿದ್ದು ಮನವಿ ಸಲ್ಲಿಕೆ ಮಾಡಿದ ಪ್ರಹಸನ ನಡೆದಿದೆ.