ಮುನಿರತ್ನ ಒಂದು ಕಾಲದ ಲೀಡಿಂಗ್ ರೌಡಿ, ಕೋರ್ಟ್‌ಗೆ ಬೆಳಗೆರೆ ಬರಹ ಉಲ್ಲೇಖಿಸಿದ ಸಂತ್ರಸ್ಥೆ ಪರ ವಕೀಲ!

Published : Feb 05, 2025, 02:24 PM ISTUpdated : Feb 05, 2025, 02:32 PM IST
ಮುನಿರತ್ನ ಒಂದು ಕಾಲದ ಲೀಡಿಂಗ್ ರೌಡಿ, ಕೋರ್ಟ್‌ಗೆ ಬೆಳಗೆರೆ ಬರಹ ಉಲ್ಲೇಖಿಸಿದ ಸಂತ್ರಸ್ಥೆ ಪರ ವಕೀಲ!

ಸಾರಾಂಶ

ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ವಿರುದ್ಧ ಕೊಳಗೇರಿ ನಿವಾಸಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ತೆರವು ಕಾರ್ಯಾಚರಣೆ ವೇಳೆ ಗುಡಿಸಲು ಧ್ವಂಸ, ಹಣ, ಆಭರಣ ನಷ್ಟವಾಗಿದೆ ಎಂದು ದೂರಲಾಗಿದೆ. ಮುನಿರತ್ನ ರೌಡಿ ಹಿನ್ನೆಲೆಯವರು, ಕ್ರಿಮಿನಲ್ ಪ್ರಕರಣಗಳಿವೆ ಎಂದು ಸಂತ್ರಸ್ತರ ಪರ ವಕೀಲರು ವಾದಿಸಿದರು.  

ಕೊಳಗೇರಿಯ ಕಾರ್ಮಿಕರ ಗುಡಿಸಲುಗಳನ್ನು ಜೆಸಿಬಿ ಸಹಾಯದಿಂದ ಧ್ವಂಸ ಮಾಡಿಸಿ ಕಾರ್ಮಿಕರ ಮೇಲೆ ಹಲ್ಲೆಗೈದು ಜಾತಿ ನಿಂದನೆ ಮಾಡಿದ ಆರೋಪದಡಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಮಹಿಳೆಯೊಬ್ಬರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.

ತನ್ನ ಮೇಲಿನ ಎಸ್‌ಸಿ–ಎಸ್‌ಟಿ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ಸಲ್ಲಿಸಿದ್ದ  ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿದೆ.

ಶಾಸಕ ಮುನಿರತ್ನಗೆ ಸಂಕಷ್ಟದ ಮೇಲೆ ಸಂಕಷ್ಟ | Munirathna Case | Political Updates | Suvarna News

ಈ ವೇಳೆ ಸಂತ್ರಸ್ತರ ಪರ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ವಾದ ಮಂಡಿಸಿ ಪೀಣ್ಯದ ಅಕ್ಕಮಹಾದೇವಿ ಕೊಳೆಗೇರಿ ಪ್ರದೇಶದಲ್ಲಿ ಶೆಡ್ ಗಳ ನೆಲಸಮ ಪ್ರಕರಣ, ತೆರವು ಕಾರ್ಯಾಚರಣೆಯು ಶಾಸಕ ಮುನಿರತ್ನರ ಕರಾಳ ಚರಿತ್ರೆಯ ಮುಂದುವರಿದ ಭಾಗವಾಗಿದೆ. ದಲಿತ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ಮುನಿರತ್ನ ದೌರ್ಜನ್ಯ ನಡೆಸಿದ್ದಾರೆ.

ಶಾಸಕ ಮುನಿರತ್ನ ಒಂದು ಕಾಲದ ಲೀಡಿಂಗ್ ರೌಡಿ. ಇವರ ವಿರುದ್ಧ ಈಗಲೂ ಎಂಟು ಕ್ರಿಮಿನಲ್‌ ಕೇಸುಗಳು ಬಾಕಿ ಇವೆ. ದಲಿತ ಕುಟುಂಬಗಳ ಶೆಡ್ ಗಳನ್ನ ಬಲವಂತದಿಂದ ತೆರವುಗೊಳಿಸಿದ್ದಾರೆ ಎಂದು ವಾದಿಸಿದರು.

ಕಾಲ ಭೈರವೇಶ್ವರ ಮೇಲೆ ಮುನಿರತ್ನ ಆಣೆ ಮಾಡಲಿ: ಸಂತ್ರಸ್ತರ ಸವಾಲು

ಈ ಪ್ರಕರಣದಲ್ಲಿ ಮುನಿರತ್ನ ಪಾತ್ರ ಇಲ್ಲ ಎಂದು ಅವರ ಪರ ವಕೀಲರು ‌ವಾದಿಸಿದ್ದರು. ಇದರಲ್ಲಿ ಯಾವುದೇ ಪಿತೂರಿಯನ್ನೂ ಮುನಿರತ್ನ ಮಾಡಿಲ್ಲ. ತೆರವು ಕಾರ್ಯಾಚರಣೆಯೆಲ್ಲಾ ಕಾನೂನು ಬದ್ಧವಾಗಿಯೇ ನಡೆದಿದೆ ಎಂದಿದ್ದರು. 

ಅದನ್ನ ಅಲ್ಲಗಳೆದ ಸಂತ್ರಸ್ತರ ಪರ ವಕೀಲರು ಪೋಟೋ ಸಾಕ್ಷಿಗಳನ್ನ ನೀಡಿದರು. ಜೊತೆಗೆ ಮುನಿರತ್ನ ಬಗ್ಗೆ ಪತ್ರಕರ್ತ ರವಿಬೆಳಗೆರೆಯ ಬರಹಗಳನ್ನ ಉಲ್ಲೇಖಿಸಲಾಯ್ತು. 1995ರಲ್ಲಿ ಬೆಳಗೆರೆ ಬರೆದ ಪಾಪಿಗಳ ಲೋಕದಲ್ಲಿ ಪುಸ್ತಕದಲ್ಲಿ ಉಲ್ಲೇಖವಿದೆ.  ಒಂದು ಕಾಲದಲ್ಲಿ ಮುನಿರತ್ನ ಕೊತ್ವಾಲ ರಾಮಚಂದ್ರ ಮುಂದೆ ಬೇಡಿಕೊಂಡು ತಿರುಗಾಡುತ್ತಿದ್ದವರು. ಇವತ್ತು ಶಾಸಕ, ಮಾಜಿ ಮಂತ್ರಿಯಾಗಿದ್ದು ₹293 ಕೋಟಿ ಆಸ್ತಿ ಹೊಂದಿದ್ದಾರೆ. ಇದನ್ನೆಲ್ಲಾ ಹೇಗೆ ಗಳಿಸಿದ್ದೀರಿ ಎಂದು ಯಾರಾದರೂ ಕೇಳಿದರೆ ಬಿಸಿನೆಸ್‌ ಎನ್ನುತ್ತಾರೆ. ಇಷ್ಟೆಲ್ಲಾ ಸಂಪಾದನೆಯನ್ನು ಬಿಬಿಎಂಪಿಯನ್ನು ಗುಡಿಸಿ ಗುಂಡಾತರ ಮಾಡಿ ಪಡೆದಿದ್ದಾರೆ ಎಂದರು.

ವಾದ ಆಲಿಸಿದ ನ್ಯಾಯಾಲಯ ಮುನಿರತ್ನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶ ವಿಸ್ತರಿಸಿ, ತೆರವು ಕಾರ್ಯಾಚರಣೆ ದಿನ ಪೊಲೀಸರು ಯಾವ ಕ್ರಮ ತೆಗೆದುಕೊಂಡಿದ್ದರು ಎಂಬ ಮಾಹಿತಿ ನೀಡುವಂತೆ ಸೂಚನೆ ನೀಡಿತು.

ಏನಿದು ಪ್ರಕರಣ?: ಪೀಣ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಅಕ್ಕಮಹಾದೇವಿ ಕೊಳಗೇರಿಯಲ್ಲಿ ಸಮಾರು 60 ಕುಟುಂಬಗಳು ಗುಡಿಸಲು ಹಾಕಿಕೊಂಡು ನೆಲೆಸಿವೆ. ಇಲ್ಲಿನ ವಾಸಿಗಳು ದಿನಗೂಲಿ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ.  ಕಳೆದ ಜನವರಿಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಸಹಚರರು ಜೆಸಿಬಿ ಯಂತ್ರದೊಂದಿಗೆ ಕೊಳಗೇರಿಗೆ ಬಂದಿದ್ದು, ನಿವಾಸಿಗಳಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಗುಡಿಸಲುಗಳನ್ನು ನೆಲಸಮ ಮಾಡಿದ್ದರು.

ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ, ಹಲ್ಲೆ: ಪ್ರತಿ ಗುಡಿಸಲಲ್ಲಿ ಕೂಡಿಟ್ಟಿದ್ದ ಸುಮಾರು 20 ಸಾವಿರ ರು.ನಿಂದ 70 ಸಾವಿರ ರು. ನಗದು ಹಾಗೂ 30 ಗ್ರಾಂ. ಚಿನ್ನಾಭರಣಗಳನ್ನು ಮಣ್ಣುಪಾಲು ಮಾಡಿದ್ದಾರೆ. ಖುದ್ದು ಶಾಸಕ ಮುನಿರತ್ನ ಸ್ಥಳದಲ್ಲಿ ನಿಂತು ತನ್ನ ಸಹಚರರಿಗೆ ನಿರ್ದೇಶನ ನೀಡಿ ಗುಡಿಸಲು ನೆಲಸಮ ಮಾಡಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಮನಿರತ್ನ ಹಾಗೂ ಅವರ ಸಹಚರರು ಜಾತಿ ನಿಂದನೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನಿವಾಸಿಗಳ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕಾಲಿಗೆ ಬೀಳಲು ಮುಂದಾದ ಹೆಣ್ಣುಮಕ್ಕಳನ್ನು ಎಳೆದಾಡಿ ಚಪ್ಪಲಿ ಕಾಲುಗಳಿಂದ ಒದ್ದು ಗೂಂಡಾ ವರ್ತನೆ ತೋರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಾಸಕ ಮುನಿರತ್ನ, ವಸಂತಕುಮಾರ, ಚನ್ನಕೇಶವ, ನವೀನ, ಶ್ರೀರಾಮ, ಪೀಣ್ಯ ಕಿಟ್ಟಿ ಮತ್ತು ಪೀಣ್ಯ ಗಂಗಾ ಎಂಬುವವರ ವಿರುದ್ಧ ಪ್ರಕರಣವಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌