Lokayukta Raid: ವಾರಕ್ಕೊಮ್ಮೆ ಬರುವ ಮೋದಿ ಇದನ್ನೇ ಕಲಿಸಿ ಹೋಗಿದ್ದೀರಾ: ಶಾಸಕ ಎಚ್ ಕೆ ಪಾಟೀಲ ಪ್ರಶ್ನೆ

By Suvarna News  |  First Published Mar 3, 2023, 6:50 PM IST

ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲಿನ ಲೋಕಾಯುಕ್ತ ರೇಡ್ ಗೆ ಸಂಬಂಧಿಸಿದಂತೆ ಮಾತನಾಡಿದ  ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ ರಾಜ್ಯಕ್ಕೆ ವಾರಕ್ಕೊಮ್ಮೆ ಬರುವ ಮೋದಿ ಬಿಜೆಪಿ ಶಾಸಕರಿಗೆ ಭ್ರಷ್ಟಾಚಾರ ವಿಷಯವನ್ನ ಹೇಳಿಕೊಟ್ಟಿದ್ದಾರೆಯೆ ಎಂದು ಪ್ರಶ್ನಿಸಿದ್ದಾರೆ.


ಗದಗ (ಮಾ.3): ರಾಜ್ಯಕ್ಕೆ ವಾರಕ್ಕೊಮ್ಮೆ ಬರುವ ಮೋದಿ ಬಿಜೆಪಿ ಶಾಸಕರಿಗೆ ಭ್ರಷ್ಟಾಚಾರ ವಿಷಯವನ್ನ ಹೇಳಿಕೊಟ್ಟಿದ್ದಾರೆಯೆ ಅಂತಾ ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ ಪ್ರಶ್ನಿಸಿದ್ರು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮೇಲಿನ ಲೋಕಾಯುಕ್ತ ರೇಡ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವ್ರು, ಪ್ರಧಾನಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಮೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು 40 ಪರ್ಸೆಂಟ್ ವಿಷಯವಾಗಿ ಪ್ರಧಾನಿಗೆ ಪತ್ರ ಬರೆದ್ರೆ ಮೋದಿ ಮೌನವಾಗಿದ್ದರು. ಇವತ್ತಿನ ಭ್ರಷ್ಟಾಚಾರದ ವಿಚಾರವಾಗಿ ಏನು ಪ್ರತಿಕ್ರಿಯಿಸುತ್ತೀರಿ. ನೀವು ಉತ್ತರಾದಾಯಿಗಳಾಗಿದ್ದೀರಿ ಅಂತಾ ಪ್ರಧಾನಿ ಮೋದಿಗೆ ಕುಟುಕಿದ್ರು. 

ಲೋಕಾಯುಕ್ತ ಸಂಸ್ಥೆಗೆ ವಿಶೇಷ ಅಭಿನಂದನೆ ಹೇಳುತ್ತೇನೆ. ಲಂಚ ತೆಗೆದುಕೊಳ್ಳುವವರ ಜೊತೆಗೆ ಲಂಚ ಕೊಡವವರನ್ನೂ ಹಿಡಿದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದ್ರು. ಕರ್ನಾಟಕ ರಾಜ್ಯ ಉತ್ತಮ ಆಡಳಿತಕ್ಕೆ ಹೆಸರಾಗಿತ್ತು. ಇವತ್ತಿನ ಭ್ರಷ್ಟಾಚಾರ ನೋಡಿ ಕರ್ನಾಟಕದ ಮೇಲೆ ಅಭಿಮಾನ ಇರುವವರು ತಲೆ ತಗ್ಗಿಸುವಂತಾಗಿದೆ ಅಂತಾ ಹೇಳಿದ ಅವರು, 40 ಪರ್ಸೆಂಟ್ ಲಂಚದ ಮಾತು ಕೇಳಿಬಂದಾಗ ಪುರಾವೆ ಕೊಡಲಿ ಅಂತಾ ಸೆಡ್ಡು ಹೊಡೆದು ಕೇಳ್ತಿದ್ರು. ಇದಕ್ಕಿಂತ ದೊಡ್ಡ ಪುರಾವೆ ಬೇಕಾ ಮಾನ್ಯ ಮುಖ್ಯಮಂತ್ರಿಗಳೆ ಅಂತಾ ಪ್ರಶ್ನಿಸಿದ್ದಾರೆ. 

Tap to resize

Latest Videos

undefined

ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಬೇಕು:
ಲೋಕಾಯುಕ್ತ ದಾಳಿ‌ಯಿಂದ ಬಿಜೆಪಿ‌ಶಾಸಕರ ಭ್ರಷ್ಟಾಚಾರ ಬಯಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡ್ಬೇಕು. ನಮ್ಮ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕು. ಚುನಾವಣೆ ನಡೆಯಬೇಕು ಅಂತಾ ಆಗ್ರಹಿಸಿದ ಶಸಕ ಎಚ್ ಕೆಪಿ, ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರೋದ್ರಿಂದ ಮುಖ್ಯಮಂತ್ರಿಗಳಿಗೆ ಆಡಳಿತ ನಡೆಸುವ ನೈತಿಕ ಹಕ್ಕಿಲ್ಲ ಎಂದ್ರು. ರಾಜೀನಾಮೆ ನೀಡದಿದ್ರೆ, ಜನ ಜಾಗೃತರಾಗಿ, ಜನಾಕ್ರೋಶ ತಾನಾಗೇ ಎದ್ದು ಬರುತ್ತೆ ಎಂದ್ರು.

ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ಪತ್ರದಲ್ಲಿ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ವಿಷಯದ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ದುಡ್ಡು ಎಲ್ಲಿಂದ ಬಂತು? ಏಳು ಕೋಟಿ ಎಣಿಸಿದ್ದಾರೆ. ಇನ್ನೂ ಎಷ್ಟು ಕೋಟಿ ಇದೆಯೋ. ಸಿಲುಕಿಸಿದವರು ಯಾರು ಅನ್ನೋ ಬಗ್ಗೆ ನಾಯಾಂಗ ತನಿಖೆಯಾಗಲಿ ಎಂದ್ರು. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲಿ. ಸರ್ಕಾರ ಜಾಗೆ ಬಿಟ್ಟು ಖಾಲಿ ಮಾಡಲಿ. ಇದಕ್ಕೂ ಖಾಲಿ ಮಾಡದಿದ್ದರೆ ಇವ್ರು ಪ್ರಜಾಪ್ರಭುತ್ವಕ್ಕೆ ಗೌರವಿಸ್ತಾರಾ ಅನ್ನೋ ಪ್ರಶ್ನೆ ಮೂಡಿತ್ತೆ ಎಂದ್ರು.

ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಫಸ್ಟ್ ರಿಯಾಕ್ಷನ್

ಈ ಹಿಂದೆ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಯ್ಯ 40 ಪರ್ಸೆಂಟ್ ಕಮಿಷನ್ ಬಗ್ಗೆ ಆರೋಪ ಮಾಡಿದ್ರು. ಕಾಂಗ್ರೆಸ್ ಈ ಬಗ್ಗೆ ಸರ್ಕಾರವನ್ನ ಪ್ರಶ್ನೆ ಮಾಡಿದ್ರೆ, ನೂರೆಂಟು ಹೇಳಿದ್ರು. ಪುರಾವೆ ಕೇಳಿದ್ರು. ಈಗ ಲೋಕಾಯುಕ್ತಗೆ ಪುರಾವೆ ಕೇಳಿ ಅಂತಾ ಸವಾಲು ಹಾಕಿದ್ರು.

ವಿರೂಪಾಕ್ಷಪ್ಪಗೆ ಲೋಕಾಯುಕ್ತ ಖೆಡ್ಡಾ ತೋಡಿದ್ದು ಹೇಗೆ? ನ್ಯಾ. ಬಿಎಸ್‌ ಪಾಟೀಲ್‌ ವಿವರಿಸಿದ್ದು ಹೀಗೆ

ಲೋಕಾಯುಕ್ತ ವನ್ನ ಬಿಜೆಪಿ‌ ಜಾರಿ ಮಾಡಿದೆ ಅನ್ನೋ ವಾದದ ವಿಚಾರವಾಗಿ, ಆ ವಿಷಯವಾಗಿ ಚರ್ಚೆ ಮಾಡೋಣ. ಈಗ ವಿಷಯ ಏನಿದೆ. ಬಿಜೆಪಿಯವರು ದರೋಡೆ ಮಾಡಿದ್ದಾರೆ. ಎಲ್ಲವೂ ಬಹಿರಂಗವಾಗಿದೆ. ನೀವು ಅಧಿಕಾರದಲ್ಲಿರುವ ನೈತಿಕ ಹಕ್ಕಿಲ್ಲ. ಒಂದು ನಿಮಿಷ ಇರಕೂಡದು ರಾಜೀನಾಮೆ ಕೊಡಬೇಕು ಅಂತಾ ಹೇಳಿದ್ರು.

click me!