ಪುತ್ರನ ಲಂಚಾವತಾರ: ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

By Girish Goudar  |  First Published Mar 3, 2023, 12:01 PM IST

ತನಿಖೆಯ ದೃಷ್ಟಿಯಿಂದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಡಾಳು ವೀರೂಪಾಕ್ಷಪ್ಪ ಅವರಿಗೆ ಸೂಚನೆ ನೀಡಿದ ಸಿಎಂ ಬೊಮ್ಮಾಯಿ. 


ಬೆಂಗಳೂರು(ಮಾ.03): ತಮ್ಮ ಪುತ್ರನ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಪುತ್ರ ಮಾಡಾಳ್‌ ಪ್ರಶಾಂತ್‌ರನ್ನ ಬಂಧಿಸಿದ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಭೇಟಿಯಾಗಿದ್ದಾರೆ. 

ತನಿಖೆಯ ದೃಷ್ಟಿಯಿಂದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಡಾಳು ವೀರೂಪಾಕ್ಷಪ್ಪ ಅವರಿಗೆ ಸಿಎಂ ಬೊಮ್ಮಾಯಿ ಅವರು ಸೂಚನೆ ನೀಡಿದ್ದರು.  ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದ ವೇಳೆ ಸಿಎಂ ಸಿಟ್ಟಾಗಿದ್ದರು. ತಕ್ಷಣ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. 

Tap to resize

Latest Videos

ರಾಜೀನಾಮೆ ನೀಡಿದ ಮಾಡಾಳ್‌ ವಿರೂಪಾಕ್ಷಪ್ಪ 

ಸಿಎಂ ಸೂಚನೆ ಮೇರೆಗೆ ಕೆ.ಎಸ್.ಡಿ.ಎಲ್. ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ಇದು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಷಡ್ಯಂತ್ರವಾಗಿರುತ್ತದೆ. ಆದಾಗಿಯೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆ.ಎಸ್.ಡಿ.ಎಲ್. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯವಿಟ್ಟು ಮಾನ್ಯರು ಈ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಕೋರುತ್ತೇನೆ ಅಂತ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ರಾಜೀನಾಮೆ ನೀಡಿದ್ದಾರೆ.

ಲಂಚ ಪಡೆದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಅರೆಸ್ಟ್‌: ಸುದೀರ್ಘ ಲೋಕಾಯುಕ್ತ ದಾಳಿ ಅಂತ್ಯ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚೀಫ್ ಅಕೌಂಟೆಂಟ್ ಪ್ರಶಾಂತ್ ಮಾಡಾಳ್‌ ಲಂಚ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಪ್ರಶಾಂತ್ ಕಚೇರಿ ಮೇಲೆ ನಡೆಸಿದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. 9 ಗಂಟೆ -30 ನಿಮಿಷಗಳವರೆಗೆ ನಡೆದ ಸುದೀರ್ಘ ಪರಿಶೀಲನೆ ಅಂತ್ಯಗೊಳಿಸಲಾಗಿದೆ. ನಿನ್ನೆ(ಗುರುವಾರ) ಸಂಜೆ 6-30 ಕ್ಕೆ ಲೋಕಾಯುಕ್ತ ದಾಳಿ ನಡೆದಿತ್ತು, ಇಂದು(ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಪರಿಶೀಲನೆ ಅಂತ್ಯವಾಗಿದೆ ಅಂತ ತಿಳಿದು ಬಂದಿದೆ. ಶಾಸಕನ ಪುತ್ರ ಸೇರಿ ನಾಲ್ಕು ಜನರನ್ನ  ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.  

ಪ್ರಶಾಂತ್  ಮಾಡಾಳ್, ಸಿದ್ದೇಶ್, (ಸಂಬಂಧಿ), ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್(ದುಡ್ಡು ಕೊಡಲು ಬಂದವನು) ಅವರನ್ನ ಬಂಧಿಸಿಸಲಾಗಿದೆ.  M ಸ್ಟುಡಿಯೋದಲ್ಲಿರುವ ದಾಖಲಾತಿಗಳು, ನಗದನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ಬಂಧಿಸಿ ಕರೆದೊಯ್ದಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. ಇದುವರೆಗೆ ಒಟ್ಟು ಒಂದು ಮುಕ್ಕಾಲು ಕೋಟಿ ನಗದನ್ನ ವಶಕ್ಕೆ ಪಡೆಯಲಾಗಿದೆ. 
ಇಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರು ಪಡೆಸಿ ಅರೋಪಿಗಳ ವಶಕ್ಕೆ ಪಡೆಯಲಿದ್ದಾರೆ ಅಧಿಕಾರಿಗಳು. ಹಣದ ಮೂಲ ಮತ್ತು ಯಾವ ಯಾವ ಟೆಂಡರ್ ಗಾಗಿ ಹಣ ಪಡೆಯಲಾಗಿತ್ತು ಎಂದು ತನಿಖೆಯನ್ನ ಮುಂದುವರಿಸಿದ್ದಾರೆ. 

click me!