
ಚಿಕ್ಕಮಗಳೂರು (ನ.18): ಪ್ರಿಯಾಂಕ್ ಖರ್ಗೆ ಕಲಿಯುವುದು ಬಹಳ ಇದೆ, ಹಗುರವಾದ ಮಾತುಗಳು ಬೇಡ ಎಂದು ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ತಿಳಿಸಿದರು.
ಇಂದು ಚಿಕ್ಕಮಗಳೂರಿನ ಹನಿ ಡ್ಯೂ ರೆಸಾರ್ಟ್ ಬಳಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಎಲ್ಲಾ ಶಾಸಕರು ಬರುತ್ತಾರೆ, ಎಲ್ಲದರ ಬಗ್ಗೆಯೂ ಮಾತುಕತೆ ನಡೆಯುತ್ತೆ. ಎಲ್ಲರೂ ಒಂದು ಕಡೆ ಸೇರಿ ಖುಷಿಯಿಂದ ಇರೋಣ ಅಂತಾ ಇಲ್ಲಿಗೆ ಬಂದಿದ್ದೇವೆ ಜೆಡಿಎಸ್ ಪಕ್ಷದಿಂದ ಯಾರೂ ಹೋಗಲ್ಲ. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಗಾಳ ಹಾಕುವ ಕೆಲಸ ನಡೆಯುತ್ತಿದೆ. ಆದರೆ ಯಾರೂ ಕಿವಿಗೊಡಲ್ಲ. ನಾವು ಎಚ್‌ಡಿ ದೇವೇಗೌಡರ ಕುಟುಂಬದ ಸದಸ್ಯರಿದ್ದಂತೆ. ಹೆಚ್ಡಿಕೆ, ದೇವೇಗೌಡರ ಬಗ್ಗೆ ಗೌರವವಿದೆ. ನಾವ್ಯಾರೂ ಎಲ್ಲಿಗೂ ಹೋಗಲ್ಲ ಅಂತ ಎಲ್ಲರೂ ಮಾತು ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಖಾಲಿ: ಪ್ರಿಯಾಂಕ್ ಖರ್ಗೆ
ಎಚ್‌ಡಿ ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು ಅದಕ್ಕಾಗಿ ಸುಳ್ಳು ಆರೋಪ ಮಾಡುತ್ತಾರೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಸೋಲು-ಗೆಲುವನ್ನ ಸಮಾನವಾಗಿ ಸ್ವೀಕರಿಸ್ತಾರೆ. ಯಾರೇ ಆದರೂ ಸಣ್ಣತನದ ಹೇಳಿಕೆ ಕೊಡುವುದು ಒಳ್ಳೆಯದ್ದಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಪುತ್ರ ಯತೀಂದ್ರ ಅವರು ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿದ್ದ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು.
ಭ್ರಷ್ಟಾಚಾರ ಮಾಡಿದ್ದು ನೀವು, ರಾಜೀನಾಮೆ ನಾನು ಕೊಡ್ಬೇಕಾ: ಪ್ರಿಯಾಂಕ್ ಖರ್ಗೆ
ಕರೆಂಟ್ ಕದ್ದ ವಿಚಾರ ಡೈವರ್ಟ್ ಮಾಡಲು ಕುಮಾರಸ್ವಾಮಿ ಇದೆಲ್ಲ ಆರೋಪ ಮಾಡ್ತಿದ್ದಾರೆ. ಅವರಿಗೆ ಮುಜುಗರ ಆಗಿದೆ. ತಪ್ಪು ಆಗಿದೆ ಅಂತಾ ದಂಡ ಕೂಡ ಕಟ್ಟಿದ್ದಾರೆ. ಅದರ ಗಮನ ಬೇರೆಡೆ ತಿರುಗಿಸಲು ಈ ರೀತಿಯ ಆರೋಪಗಳನ್ನು ಮಾಡ್ತಾ ಇದಾರೆ. ಒಬ್ಬ ಮಾಜಿ ಶಾಸಕ ವರ್ಗಾವಣೆ ವಿಚಾರದಲ್ಲಿ ರೆಕಮಂಡ್ ಮಾಡಿದ್ರೆ ತಪ್ಪೇನು.? ದೇವೇಗೌಡರು ಪ್ರಧಾನಿ ಆಗಿದ್ದಾಗ ಕುಮಾರಸ್ವಾಮಿ ಮಾಡ್ತಾ ಇರಲಿಲ್ಲವಾ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಖಿಲ್ ಮಾಡಿರಲಿಲ್ಲವಾ? ಯತೀಂದ್ರ ಆದ್ರೂ ಒಬ್ಬ ಮಾಜಿ ಶಾಸಕ ಆಗಿ ಜವಾಬ್ದಾರಿ ನಿಭಾಯಿಸಿದ್ದಾರೆ ಎನ್ನುವ ಮೂಲಕ ವರ್ಗಾವಣೆ ವಿಚಾರದಲ್ಲಿ ಸಿಎಂ ಪುತ್ರನ ಶಿಫಾರಸು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದ ಪ್ರಿಯಾಂಕ್ ಖರ್ಗೆ. ಈ ವೇಳೆ ದೇವೇಗೌಡರ ಕುಟುಂಬ ವಿರುದ್ಧ ಹಗುರವಾಗಿ ಮಾತನಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ