'ಇದೊಂದು ಭಂಡತನದ ರಾಜಕೀಯ' ಹೆಬ್ಬಾರ್‌ ಘರ್ ವಾಪ್ಸಿಗೆ ಶಾಸಕ ಭೀಮಣ್ಣ ನಾಯ್ಕ್ ಕಿಡಿ

By Kannadaprabha News  |  First Published Aug 20, 2023, 4:33 AM IST

ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಅವರು ಮತ್ತೆ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆಂಬ ಸುದ್ದಿಗಳ ಬೆನ್ನಲ್ಲೇ ಅವರ ಘರ್‌ ವಾಪ್ಸಿಗೆ ಪಕ್ಷದ ಶಾಸಕ ಭೀಮಣ್ಣ ನಾಯ್ಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಹೆಬ್ಬಾರ್‌ ಅವರು ಮತ್ತೆ ಕಾಂಗ್ರೆಸ್‌ ಕಡೆ ಮುಖ ಮಾಡಿರುವುದು ಭಂಡತನದ ರಾಜಕಾರಣವೇ ಸರಿ ಎಂದು ಕಿಡಿಕಾರಿದ್ದಾರೆ.


ಶಿರಸಿ (ಆ.20) :  ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಅವರು ಮತ್ತೆ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆಂಬ ಸುದ್ದಿಗಳ ಬೆನ್ನಲ್ಲೇ ಅವರ ಘರ್‌ ವಾಪ್ಸಿಗೆ ಪಕ್ಷದ ಶಾಸಕ ಭೀಮಣ್ಣ ನಾಯ್ಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಹೆಬ್ಬಾರ್‌ ಅವರು ಮತ್ತೆ ಕಾಂಗ್ರೆಸ್‌ ಕಡೆ ಮುಖ ಮಾಡಿರುವುದು ಭಂಡತನದ ರಾಜಕಾರಣವೇ ಸರಿ ಎಂದು ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಹೆಬ್ಬಾರ್‌ ಕಾಂಗ್ರೆಸ್‌(Ghar wapsi) ಸೇರ್ಪಡೆಗೆ ನನ್ನ ವಿರೋಧವಿದೆ. ನಾನು ಈ ಹಿಂದೆ ಅವರ ವಿರುದ್ಧ ನಿಂತು ಸೋತವನು. ಯಾರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಅವರ ವಿರುದ್ಧ ಕಾಂಗ್ರೆಸ್‌ನಿಂದ ಯಾರು ನಿಂತಿದ್ದರೋ ಅವರ ಅಭಿಪ್ರಾಯವನ್ನು ಪಕ್ಷದ ನಾಯಕರು ಪರಿಗಣಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

Tap to resize

Latest Videos

undefined

ಘರ್ ವಾಪಸಿ ಹಗ್ಗ ಜಗ್ಗಾಟ: ಅತೃಪ್ತರ ಓಲೈಕೆಗೆ ಬಿಜೆಪಿ ಕಸರತ್ತು

ಶಿವರಾಮ ಹೆಬ್ಬಾರ್‌(Shivarm hebbar) ಅಧಿಕಾರಕ್ಕೆ ಮತ್ತು ಹಣಕ್ಕಾಗಿ ಓಡಿಹೋದವರು. ಈಗ ವಾಪಸ್‌ ಕಾಂಗ್ರೆಸ್‌ಗೆ ಬರುತ್ತಿರುವುದೂ ಅಧಿಕಾರ, ಹಣಕ್ಕಾಗಿಯೇ. ಅವರ ಉದ್ದೇಶವೇ ಅಷ್ಟು. ಅವರ ಕ್ಷೇತ್ರದಲ್ಲಿ ಕೆರೆಗೆ ನೀರುತುಂಬುವ ಯೋಜನೆ ಅರ್ಧಕ್ಕೆ ನಿಂತಿದೆ. ಅಂದು ಅವರದ್ದೇ ಸರ್ಕಾರ ಇತ್ತು. ಆದರೂ ಅವರಿಗೆ ಕಾಮಗಾರಿ ಪೂರ್ಣಗೊಳಿಸಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಭೀಮಣ್ಣ, ಈಗ ಅಲ್ಲಿ ಅವರ ಕೆಲಸ ಮುಗಿದಿದೆ. ಹೀಗಾಗಿ ಇಲ್ಲಿ ಓಡಿಬರಲು ಹವಣಿಸುತ್ತಿದ್ದಾರೆ. ಯಾವ ಕಾರಣಕ್ಕೆ ಅವರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಎಂಬುದನ್ನು ಅವರ ಕಾರ್ಯಕರ್ತರಿಗೆ ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು.

ನಾನು ಕಾಂಗ್ರೆಸ್‌ ಜಿಲ್ಲಾಧ್ಯಕ್ಷನಾಗಿ 13 ವರ್ಷ ಸೇವೆ ಮಾಡಿದ್ದೇನೆ. ಪಕ್ಷ ಕಟ್ಟಲು ಶ್ರಮಿಸಿ ಶಾಸಕನಾದವನು. ಆದರೆ ಅವರು ಈ ರೀತಿ ಮನಸ್ಸು ಬಂದಂತೆ ಬಂದು ಹೋಗಲು ಕಾಂಗ್ರೆಸ್‌ ಅನ್ನು ಏನಂದುಕೊಂಡಿದ್ದಾರೆ? ಈ ರೀತಿ ಭಂಡ ರಾಜಕಾರಣವನ್ನು ಹೆಬ್ಬಾರರು ಬಿಡಲಿ ಎಂದರು.

ಆರ್.ಆರ್. ನಗರದಲ್ಲಿ ಕಳ್ಳರು, ಕನಕಪುರದಲ್ಲಿ ಸತ್ಯ ಹರಿಶ್ಚಂದ್ರರು ಇದ್ದಾರಾ? ಡಿಕೆಶಿಗೆ ಶಾಸಕ ಮುನಿರತ್ನ ತಿರುಗೇಟು

click me!