ಧರ್ಮದ ಬಗ್ಗೆ ಅವಹೇಳನ ಮಾಡಿದವರಿಗೆ ಶಿಕ್ಷೆ ಆಗಲಿ: ಶಾಸಕ ಅಖಂಡ

By Kannadaprabha NewsFirst Published Aug 12, 2020, 1:27 PM IST
Highlights

ಯಾರೋ ಕಿಡಿಗೇಡಿಗಳು ಅಥವಾ ನನ್ನ ಸಂಬಂಧಿ ತಪ್ಪು ಮಾಡಿದ್ದಾರೋ ಗೊತ್ತಿಲ್ಲ| ನಮಗೂ ನನ್ನ ಸಹೋದರಿ ಹಾಗೂ ಅವರ ಮಗನಿಗೂ ಸಂಬಂಧವಿಲ್ಲ, ಆ ಪೋಸ್ಟ್‌ಗೂ ಸಂಬಂಧವಿಲ್ಲ| ಕಿಡಿಗೇಡಿಗಳು ಹಾಕಿದ ಪೋಸ್ಟ್‌ನಿಂದ ಶಾಂತಿ ಕದಡಬಾರದು. ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಕೇಳಿಕೊಂಡಿದ್ದೇನೆ ಎಂದ ಶಾಸಕ ಅಖಂಡ|

ಬೆಂಗಳೂರು(ಆ.12): ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಕೋಮಿನ ವಿರುದ್ಧ ನಡೆದ ತಪ್ಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ಧರ್ಮದ, ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು, ಪೋಸ್ಟ್‌ ಮಾಡುವುದು ತಪ್ಪು. ಅಂತಹ ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಶಾಸಕರು, ಯಾರೋ ಕಿಡಿಗೇಡಿಗಳು ಅಥವಾ ನನ್ನ ಸಂಬಂಧಿ ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ನಮಗೂ ನನ್ನ ಸಹೋದರಿ ಹಾಗೂ ಅವರ ಮಗನಿಗೂ ಸಂಬಂಧವಿಲ್ಲ. ಆ ಪೋಸ್ಟ್‌ಗೂ ಸಂಬಂಧವಿಲ್ಲ. ಕಿಡಿಗೇಡಿಗಳು ಹಾಕಿದ ಪೋಸ್ಟ್‌ನಿಂದ ಶಾಂತಿ ಕದಡಬಾರದು. ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಕೇಳಿಕೊಂಡಿದ್ದೇನೆ ಎಂದರು.

ಪೈಗಂಬರ್ ಅವಹೇಳನ ಆರೋಪ, ಬೆಂಗಳೂರು ಪೂರ್ವ ಧಗಧಗ: ಗೋಲಿಬಾರ್‌ಗೆ 2 ಬಲಿ!

ಜನಾಂಗ, ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು, ಪೋಸ್ಟ್‌ ಹಾಕುವುದು ತಪ್ಪು. ಅಂಥವರನ್ನು ಬಂಧಿಸಿ ಶಿಕ್ಷಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಮುಸ್ಲಿಮರು ಶಾಂತಿಯುತವಾಗಿ ವರ್ತಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆ. ಘಟನೆ ಸಂದರ್ಭದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಮನೆಯ ಸುತ್ತ ನಡೆದ ದಾಂಧಲೆ ಬಗ್ಗೆ ತಡವಾಗಿ ತಿಳಿಯಿತು. ಗಲಾಟೆ ನಡೆಸಿದವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಶಾಸಕ ಅಖಂಡ ತಿಳಿಸಿದರು.
 

click me!