ಅಂಗವಿಕಲರ ಬಸ್‌ ಪಾಸ್ ದುರುಪಯೋಗ; ಮಂಡ್ಯದ ಸರ್ಕಾರಿ ಶಿಕ್ಷಕಿಗೆ 1 ವರ್ಷ ಜೈಲು ಶಿಕ್ಷೆ!

Kannadaprabha News   | Kannada Prabha
Published : May 19, 2026, 06:56 AM IST
Misuse PWD bus pass Mandya Government teacher sentenced to 1 year in jail

ಸಾರಾಂಶ

ಮಂಡ್ಯದಲ್ಲಿ ಅಂಗವಿಕಲರ ರಿಯಾಯ್ತಿ ಬಸ್ ಪಾಸ್ ದುರುಪಯೋಗಪಡಿಸಿಕೊಂಡ ಸರ್ಕಾರಿ ನೌಕರೊಬ್ಬರಿಗೆ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಂಚನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀ ಹಿನ್ನೆತುಲೆಯಲ್ಲಿ, 10 ಸಾವಿರ ರೂ. ದಂಡ ಮತ್ತು ಸಾರಿಗೆ ನಿಗಮಕ್ಕೆ 47 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ.

ಮಂಡ್ಯ (ಮೇ.19): ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಮಹಿಳಾ ನೌಕರರೊಬ್ಬರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ ಸಾರಿಗೆ ನಿಗಮದವರಿಗೆ 47 ಸಾವಿರ ರು. ಪರಿಹಾರ ನೀಡುವಂತೆ ಆದೇಶಿಸಿದೆ.

ಮದ್ದೂರು ತಾಲೂಕು ಎರಗನಹಳ್ಳಿ ಗ್ರಾಮದ ಎ.ಶ್ರುತಿ (47) ಶಿಕ್ಷೆಗೊಳಗಾದ ಸರ್ಕಾರಿ ಮಹಿಳಾ ನೌಕರೆ. ಸರ್ಕಾರಿ ನೌಕರರು ಅಂಗವಿಕರ ರಿಯಾಯ್ತಿ ದರದ ಬಸ್ ಪಾಸ್ ಸೌಲಭ್ಯ ಪಡೆಯಲು ಅರ್ಹರಿಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೀಡುವ ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ಪಡೆದುಕೊಂಡು ದುರುಪಯೋಗಪಡಿಸಿಕೊಂಡಿದ್ದರು.

ರಸ್ತೆ ಸಾರಿಗೆ ನಿಗಮದ ಮಂಡ್ಯ ಮತ್ತು ಮದ್ದೂರು ಘಟಕದಿಂದ ಅಂಗವಿಕಲರ ಬಸ್ ಪಾಸ್ ಪಡೆದು 1.1.2014ರಿಂದ 17.10.2015ರ ವರೆಗೆ ನಿಗಮದ ಬಸ್‌ಗಳಲ್ಲಿ ಸಂಚರಿಸಿ ನಿಗಮಕ್ಕೆ 46,640 ರು. ನಷ್ಟವುಂಟು ಮಾಡಿ ಮೋಸ ಮಾಡಿರುವ ಬಗ್ಗೆ ದೂರು ಬಂದಿತ್ತು.

ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣೆ ಪೊಲೀಸರು ಕಲಂ 420 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಶ್ರುತಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿ ಎ.ಶ್ರುತಿ ಕಲಂ 420 ಐಪಿಸಿ ರೀತ್ಯಾ ವಂಚನೆ ಮಾಡಿರುವುದಾಗಿ ಪರಿಗಣಿಸಿ ನ್ಯಾಯಾಧೀಶ ಜಿ.ಜೆ.ಶಿವಕುಮಾರ್‌ ಅವರು ಭಾರತೀಯ ದಂಡ ಸಂಹಿತೆ ಕಲಂ 420ರಡಿ ಅಪರಾಧಕ್ಕೆ 1 ವರ್ಷಗಳ ಸೆರೆಮನೆ ವಾಸ ಮತ್ತು 10 ಸಾವಿರ ರು. ದಂಡ ವಿಧಿಸಿದರು. ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರವರಿಗೆ 47,000 ರು. ಪರಿಹಾರ ನೀಡಬೇಕೆಂದು ತೀರ್ಪು ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಶಿವಕುಮಾರ್ ವಾದ ಮಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉ.ಪ್ರದೇಶ ಯೋಗಿ ಆದಿತ್ಯನಾಥ್‌ರಂತೆ ಕರ್ನಾಟಕದಲ್ಲಿ ನಿರ್ಮಲಾನಂದ ಸ್ವಾಮೀಜಿ ಸಿಎಂ? ನಡೆದಿದೆ ದೊಡ್ಡ ಚರ್ಚೆ, ಶ್ರೀಗಳು ಹೇಳಿದ್ದೇನು?
ಸರ್ಕಾರದ ಸಾಧನಾ ರ್‍ಯಾಲಿಗೆ ತುಮಕೂರು ಸಜ್ಜು; 2 ಲಕ್ಷ ಜನರು ಭಾಗಿ, ರಾಜ್ಯ ಸರ್ಕಾರಕ್ಕೆ ನಾಳೆ 3: ಇಂದು ‘ಗಿನ್ನೆಸ್‌ ದಾಖಲೆ’ಯ ಸಮಾವೇಶ!