ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!

By Ravi Janekal  |  First Published Jul 20, 2023, 9:24 AM IST

ಒಡಿಶಾ ರೈಲು ದುರಂತದ ಬಳಿಕ ರಾಜ್ಯದಲ್ಲೂ ರೈಲಿನಮೇಲೆ ಕಲ್ಲು ತೂರಾಟ, ಹಳಿಗಳ ನಾಶಪಡಿಸುವಂಥ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ಇದೀಗ ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ದುರ್ಘಟನೆ ನಡೆದಿದೆ.


ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!

ಕಲಬುರಗಿ (ಜು.20) : ಒಡಿಶಾ ರೈಲು ದುರಂತದ ಬಳಿಕ ರಾಜ್ಯದಲ್ಲೂ ರೈಲಿನಮೇಲೆ ಕಲ್ಲು ತೂರಾಟ, ಹಳಿಗಳ ನಾಶಪಡಿಸುವಂಥ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ಇದೀಗ ಬಸವ ಎಕ್ಸ್‌ಪ್ರೆಸ್ ರೈಲಿ(Basava express train) ನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ(stone pelting) ನಡೆಸಿದ ದುರ್ಘಟನೆ ನಡೆದಿದೆ.

Tap to resize

Latest Videos

ಕಲಬುರಗಿ ತಾಲೂಕಿನ ಬಬಲಾದಿ ಗ್ರಾಮ(babaladi village)ದ ಬಳಿ ರಾತ್ರಿವೇಳೆ ನಡೆದಿರುವ ಘಟನೆ. ಎಸಿ A1 ಬೋಗಿಯ ಗಾಜು ಪುಡಿಪುಡಿ ಮಾಡಿರುವ ಕಿಡಿಗೇಡಿಗಳು. ಈ ವೇಳೆ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇಂಜಿನ್ ಬೋಗಿಯ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಬಾಗಲಕೋಟೆ/ಮೈಸೂರು ಮಧ್ಯೆ ನಿತ್ಯ ಸಂಚರಿಸುವ ಬಸವ ಎಕ್ಸ್‌ಪ್ರೆಸ್‌. ಕಲಬುರಗಿ/ವಾಡಿ/ಯಾದಗಿರಿ ಮಾರ್ಗವಾಗಿ ಸಂಚರಿಸುತ್ತಿರುವ ರೈಲು. ಕಿಡಿಗೇಡಿಗಳು ಕಲ್ಲು ಎಸೆದಿರುವ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ. ಸದ್ಯ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಂದೇ ಭಾರತ್‌ ರೈಲಿಗೆ ಮತ್ತೆ ಕಲ್ಲು ತೂರಾಟ: ಗಾಜಿಗೆ ಹಾನಿ

click me!