ಒಳಪಂಗಡ ಮರೆತು ಶೋಷಿತರು ಒಂದಾದ​ರೆ ದಲಿತ ಸಿಎಂ ಸಾಧ್ಯ: ಎಚ್‌ಸಿ ಮಹದೇವಪ್ಪ

By Kannadaprabha News  |  First Published Sep 4, 2023, 10:48 AM IST

ರಾಜ್ಯದಲ್ಲಿ ಆಗಾಗ ‘ದಲಿತ ಸಿಎಂ’ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಶೋಷಿತ ಸಮುದಾಯಗಳು ತಮ್ಮಲ್ಲಿನ ಒಳಪಂಗಡದ ಒಡಕು ಮರೆತು ಒಂದಾದರೆ ಮಾತ್ರ ದಲಿತ ಸಿಎಂ ಕನಸು ನನಸಾಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.


ಹುಬ್ಬಳ್ಳಿ (ಸೆ.4) :  ರಾಜ್ಯದಲ್ಲಿ ಆಗಾಗ ‘ದಲಿತ ಸಿಎಂ’ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಶೋಷಿತ ಸಮುದಾಯಗಳು ತಮ್ಮಲ್ಲಿನ ಒಳಪಂಗಡದ ಒಡಕು ಮರೆತು ಒಂದಾದರೆ ಮಾತ್ರ ದಲಿತ ಸಿಎಂ ಕನಸು ನನಸಾಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಧಾರವಾಡ ತಾಲೂಕು ದಡ್ಡಿಕಮಲಾಪುರ ‘ಬುದ್ಧ ವಿಹಾರ’ದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ದಲಿತ ನಾಯಕರನ್ನು ಮುಖ್ಯ​ಮಂತ್ರಿ(Dalit CM Karnataka) ಮಾಡುವುದು ದಲಿತರ ಕೈಯಲ್ಲೇ ಇದೆ. ಅದಕ್ಕಾಗಿ ಶೋಷಿತ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸುವುದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂದರು. ಇಡೀ ಶೋಷಿತ ಸಮುದಾಯಗಳ ಹಿತ ಕಾಯಬಲ್ಲ, ದಲಿತರ ಏಳ್ಗೆಗೆ ಆಶಾಕಿರಣ ಎನಿಸುವ ಯಾವುದಾದರೂ ಒಬ್ಬ ದಲಿತ ನಾಯಕನನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡು ಆತನ ಬೆನ್ನಿಗೆ ನಿಂತು ನಿಮ್ಮ ಶಕ್ತಿ ಪ್ರದರ್ಶಿಸಿದರೆ ಹೈಕಮಾಂಡ್‌ ನಿಮ್ಮ ಭಾವನೆ ಅರ್ಥಮಾಡಿಕೊಂಡು ಬೇಡಿಕೆ ಈಡೇರಿಸಲಿದೆ. ಜನಬೆಂಬಲ ಯಾವ ನಾಯಕನಿಗೆ ಇರುತ್ತೋ ಆತ ಮುಖ್ಯ​ಮಂತ್ರಿ ಆಗುತ್ತಾರೆ. ಮೊದಲು ಶೋಷಿತ ಸಮು​ದಾ​ಯ​ಗ​ಳು ಒಂದಾ​ಗ​ಬೇಕು ಎಂದ​ರು.

Tap to resize

Latest Videos

ಬಿಎಲ್ ಸಂತೋಷ್ ಯೋಗ್ಯತೆಗೆ ಜನರು ಉತ್ತರ ಕೊಟ್ಟಿದ್ದಾರೆ: ಸಚಿವ ಎಚ್‌ಸಿ ಮಹದೇವಪ್ಪ

ಎಚ್‌.ಡಿ.ದೇವೇಗೌಡ(HD Devegowda), ಬಿ.ಎಸ್‌. ಯಡಿಯೂರಪ್ಪ(BS Yadiyurappa), ಸಿದ್ದರಾಮಯ್ಯ(Siddaramaiah) ಅವರು ಮುಖ್ಯ​ಮಂತ್ರಿ ಆಗಿದ್ದು ಕೂಡ ಹೀಗೆಯೇ. ಆಯಾ ಸಮುದಾಯಗಳು ಈ ನಾಯಕರ ಬೆನ್ನಿಗೆ ಗಟ್ಟಿಯಾಗಿ ನಿಂತು ಮುಖ್ಯ​ಮಂತ್ರಿ ಗದ್ದುಗೆ ಮೇಲೆ ಕುಳ್ಳಿರಿಸುವಂತಹ ಶಕ್ತಿ ಪ್ರದರ್ಶಿಸಿದವು ಎಂದರು.

ದೊಡ್ಡ ಪ್ರಮಾಣದ ಮತಗಳನ್ನು ಪಕ್ಷಕ್ಕೆ ತಂದುಕೊಡುವ ನಾಯಕರನ್ನು ಹೈಕಮಾಂಡ್‌ ಗೌರವಿಸುತ್ತದೆ ಮತ್ತು ಆ ಸಮುದಾಯ ಆಶಿಸುವ ಹುದ್ದೆಗಳನ್ನು ನೀಡುತ್ತದೆ. ದಲಿತರು ಮೊದಲು ನಿಮ್ಮಲ್ಲಿನ ಒಡಕು ಮರೆತು ಒಂದಾಗಿ, ಆ ಮೇಲೆ ಮುಖ್ಯ​ಮಂತ್ರಿ ಬೇಡಿಕೆ ಇಡಿ ಎಂದು ಮಹಾದೇವಪ್ಪ ಕಿವಿಮಾತು ಹೇಳಿದರು.

ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ

click me!