ನೂಕು ನುಗ್ಗಲಿನಲ್ಲಿ ಬಸ್ ಹತ್ತಲು ಹೋಗಿ ಬಾಲಕಿಯೋರ್ವಳು ಅಸ್ವಸ್ಥಗೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗದಗ (ಅ.21): ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಪ್ರತಿಯೊಂದು ಸಾರಿಗೆ ಬಸ್ ಮಹಿಳೆಯರಿಂದ ತುಂಬಿತುಳುಕುತ್ತಿವೆ, ವಿದ್ಯಾರ್ಥಿಗಳು, ಮಕ್ಕಳು, ಗರ್ಭಿಣಿಯರು ಬಸ್‌ನಲ್ಲಿ ಪ್ರಯಾಣಿಸುವುದು ಅಸಾಧ್ಯವಾಗಿದೆ. ನೂಕುನುಗ್ಗಲಿನ ಬಸ್‌ಗಳಲ್ಲಿ ದಿನನಿತ್ಯ ಗಲಾಟೆ, ಕಳ್ಳತನದಂತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂತಹದ್ದೆ ಮತ್ತೊಂದು ಘಟನೆ ನಡೆದುಹೋಗಿದೆ.
ನೂಕು ನುಗ್ಗಲಿನಲ್ಲಿ ಬಸ್ ಹತ್ತಲು ಹೋಗಿ ಬಾಲಕಿಯೋರ್ವಳು ಅಸ್ವಸ್ಥಗೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿಂದ ಲಕ್ಷ್ಮೇಶ್ವರ ಮೂಲಕ ಗದಗ ತಲುಪುವ ಬಸ್. ಗದಗ ಹೋಗಲು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡಿದ್ದ ಪ್ರಯಾಣಿಕರು. ಬಸ್ ಬರುತ್ತಿದ್ದಂತೆ ಸೀಟು ಹಿಡಿಯಲು ನೂಕುನುಗ್ಗಲಾಗಿದೆ.
undefined
ಉಗುಳಲು ಹೋಗಿ ಬಸ್ ಕಿಟಕಿಯೊಳಗೆ ಗೃಹಲಕ್ಷ್ಮೀ ತಲೆ ಲಾಕ್, ಇದು ನಿನಗೆ ಬೇಕಿತ್ತಾ ಎಂದ ನೆಟ್ಟಿಗರು
ಜನರ ಮಧ್ಯೆ ತೂರಿಕೊಂಡು ಬಸ್ ಹತ್ತಲು ಮುಂದಾಗಿದ್ದ ಬಾಲಕಿ. ಆದರೆ ಜನರ ನೂಕುನುಗ್ಗಲಿಗೆ ಬಸ್ ಹತ್ತಲಾಗದೆ, ಹೊರಬರಲಾಗದೆ ಉಸಿರಾಟ ತೊಂದರೆ ಅನುಭವಿಸಿ ಅಸ್ವಸ್ಥಗೊಂಡ ಬಾಲಕಿ. ಬಾಲಕಿ ಅಸ್ವಸ್ಥಗೊಂಡು ಕುಸಿದು ಬಿಳುತ್ತಿದ್ದಂತೆ ಮಗುವನ್ನು ಎತ್ತಿ ಗಾಳಿ ಬೀಸಿ ಆರೈಕೆ ಮಾಡಿದ ಸಹಪ್ರಯಾಣಿಕರು. ಕೆಲ ಹೊತ್ತು ಬಸ್ ನಿಲ್ದಾಣದಲ್ಲಿ ಕೂರಿಸಿ ಸಾವರಿಸಿಕೊಂಡ ಬಳಿಕ ಬಸ್‌ಗೆ ಹೋಗಿರುವ ಬಾಲಕಿ.