Housing Allocation Controversy: ನನ್ನ ಮೇಲಿನ ಆರೋಪಕ್ಕೆ ಸಿಎಂ ಬಳಿ ಸ್ಪಷ್ಟನೆ ನೀಡಿದ್ದೇನೆ: ಸಚಿವ ಜಮೀರ್‌ ಅಹ್ಮದ್

Kannadaprabha News   | Kannada Prabha
Published : Jun 27, 2025, 12:44 PM ISTUpdated : Jun 27, 2025, 01:05 PM IST
Karnataka’s Minister for Housing and Minorities Affairs, Zameer Ahmad Khan (Photo/ANI)

ಸಾರಾಂಶ

ವಸತಿ ಹಂಚಿಕೆ ವಿವಾದದಲ್ಲಿ ತಮ್ಮ ವಿರುದ್ಧದ ಆರೋಪಗಳ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟನೆ ನೀಡಿರುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬೆಂಗಳೂರು (ಜೂ.27): ವಸತಿ ಹಂಚಿಕೆ ವಿಚಾರದಲ್ಲಿ ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿದ್ದೇನೆ ಎಂದು ವಸತಿ ಸಚಿವ ಜಮೀರ್‌ ಅಹಮದ್ ಖಾನ್‌ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಎಲ್ಲೂ ನೇರ ಆರೋಪಗಳಿಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೆ. ಬಿ.ಆರ್‌. ಪಾಟೀಲ್‌ ಅವರೂ ನನ್ನ ಮೇಲೆ ಆರೋಪ ಮಾಡಿಲ್ಲ. ಈ ಕುರಿತು ಈಗಾಗಲೇ ಹೇಳಿದ್ದೇನೆ. ಗ್ರಾಪಂ ಅಧ್ಯಕ್ಷನ ಪತ್ರದ ಮೇಲೆ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ. ಆದರೂ, ಭ್ರಷ್ಟಾಚಾರ ನಡೆದಿದೆ ಎಂದು ನನ್ನ ಹೆಸರು ತರಲಾಯತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ದೆಹಲಿಯಿಂದ ಹಿಂದುರಿಗಿದ ಕೂಡಲೇ ಭೇಟಿಯಾಗಿ ವರದಿ ನೀಡಿದ್ದೇನೆ ಎಂದರು.

ಬಿ.ಆರ್‌.ಪಾಟೀಲ್‌ ಅವರು 2 ವರ್ಷಗಳಲ್ಲಿ 6 ಸಾವಿರ ಮನೆಗಳನ್ನು ಕೇಳಿದ್ದರು. ಅದರಲ್ಲಿ ನಾವು 900 ಮನೆಗಳನ್ನು ನೀಡಿದ್ದೇವೆ. ಆ ಬಗ್ಗೆ ಮುಕ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಬಿ,.ಆರ್‌. ಪಾಟೀಲ್ ಅವರನ್ನೂ ಭೇಟಿ ಮಾಡುತ್ತೇನೆ. ಅವರ ಬಳಿಯೂ ಮಾತನಾಡುತ್ತೇನೆ ಎಂದು ಹೇಳಿದರು.

ಹೈಕಮಾಂಡ್‌ ನಿರ್ಧಾರವೇ ಅಂತಿಮ:

ಅಧಿಕಾರ ಬದಲಾವಣೆ ಕುರಿತಂತೆ ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ.ಎನ್‌. ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್‌ ಅಹಮದ್‌ ಖಾನ್‌, ನಮ್ಮದು ಹೈಕಮಾಂಡ್‌ ಇರುವ ಪಕ್ಷ. ಅವರು ನಾಳೆಯೇ ನಿರ್ಧಾರ ತೆಗೆದುಕೊಳ್ಳಬಹುದು. ಹೈಕಮಾಂಡ್‌ ಏನು ನಿರ್ಧರಿಸುತ್ತದೋ ಅದಕ್ಕೆ ನಾವೆಲ್ ಬದ್ಧರಾಗಿರಬೇಕು. ಅದು ನಾನಾಗಲೀ, ರಾಜಣ್ಣ ಆಗಲಿ ಬೇರೊಬ್ಬರೇ ಆಗಲಿ. ಹೈಕಮಾಂಡ್‌ ನಿರ್ಧಾರವೇ ನಮಗೆ ಅಂತಿಮ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್