ಬಿಜೆಪಿಯಲ್ಲಿ ಅಸಮಾಧಾನ ಮೊದಲಿಂದಲೂ ಇದೆ. ಕೇಂದ್ರದ ಬಗ್ಗೆ ಬಿಜೆಪಿ ಯಾವ ಸಂಸದರೂ ಮಾತಾಡುವುದಿಲ್ಲ. ಆದರೆ ರಾಜ್ಯದ ವಿಷಯ ಬಂದಾಗ ಎಲ್ಲರೂ ಮಾತನಾಡುತ್ತಾರೆ. ಆದರೆ ದೇಶದ ವಿಚಾರ ಬಂದಾಗ ಮಾತನಾಡುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಹುಬ್ಬಳ್ಳಿ (ನ.19): ಬಿಜೆಪಿಯಲ್ಲಿ ಅಸಮಾಧಾನ ಮೊದಲಿಂದಲೂ ಇದೆ. ಕೇಂದ್ರದ ಬಗ್ಗೆ ಬಿಜೆಪಿ ಯಾವ ಸಂಸದರೂ ಮಾತಾಡುವುದಿಲ್ಲ. ಆದರೆ ರಾಜ್ಯದ ವಿಷಯ ಬಂದಾಗ ಎಲ್ಲರೂ ಮಾತನಾಡುತ್ತಾರೆ. ಆದರೆ ದೇಶದ ವಿಚಾರ ಬಂದಾಗ ಮಾತನಾಡುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಕ್ಯಾಬಿನೆಟ್ ಪ್ರಗತಿ ಪರಿಶೀಲನೆ ಇಲ್ಲ, ಕ್ಯಾಬಿನೆಟ್ ಬಿಟ್ಟು ನಿರ್ಧಾರ ತೆಗೆದುಕೊಳ್ಳುವುದು ಇದನ್ನು ಹತ್ತು ವರ್ಷದಿಂದ ನೋಡುತ್ತಾ ಬಂದಿದ್ದವೆ.ಬಿಜೆಪಿ ಕರ್ನಾಟಕ ವಿಷಯಕ್ಕೆ ಬಂದಾಗ ಬೆಳಗ್ಗೆ ಏನು ಹೇಳತ್ತಾರೆ ರಾತ್ರಿ ಏನು ಹೇಳತ್ತಾರೆ ಗೊತ್ತಾಗುವುದಿಲ್ಲ.ಬಿಜೆಪಿ ಪತನಕ್ಕೆ ಜನ ತೀರ್ಮಾನ ಮಾಡಿದ್ದಾರೆ. ದೇಶದಲ್ಲಿ ಸತ್ಯ ಹೇಳೋದೆ ದೊಡ್ಡ ಅಪರಾಧವಾಗಿದೆ. ಸತ್ಯ ಹೇಳಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಉಸಿರುಗಟ್ಟುವ ವಾತವರಣವಿದೆ ಇಂದಲ್ಲಾ ನಾಳೆ ಅದು ಬಯಲಿಗೆ ಬರುತ್ತೆ. ನರೇಂದ್ರ ಮೋದಿ ಅವರಿಗೆ ಮಾತ್ರ ಅನುಕೂಲ ಆಗಿದೆ ಆದರೆ ಅವರಿಂದ ದೇಶಕ್ಕೆ ಒಂದು ರೂಪಾಯಿ ಅನುಕೂಲವಾಗಿಲ್ಲ ಎಂದರು.
undefined
ನನಗೀಗ ರಾಜಕೀಯದ 20-20 ಮ್ಯಾಚ್ ಆಡುವ ಜವಾಬ್ದಾರಿ ಪಕ್ಷ ವಹಿಸಿದೆ: ಬಿವೈ ವಿಜಯೇಂದ್ರ
ಇನ್ನು ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡತ್ತಾರೆ. ಅವರು ಬಹಳಷ್ಟು ಭ್ರಷ್ಟರಿದ್ದಾರೆ. ಯತೀಂದ್ರರನ್ನು ಯಾಕೆ ಬಿಜೆಪಿ ಅಧ್ಯಕ್ಷರಾಗಿ ಮಾಡಿದರು ದಯವಿಟ್ಟು ಅವರನ್ನು ಕೇಳಿ.
ಯತೀಂದ್ರ ಮೇಲೆ ಆಪಾದನೆ ಹೊರಿಸಿದವರು ಯಾರು ಎಂದು ಮಾತಿನ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲು ಸಿಎಂ ಪುತ್ರ ಯತೀಂದ್ರ ಎಂದು ಸಂಭೋಧಿಸಿದ ಸಚಿವ ಸಂತೋಷ ಲಾಡ್.
ವಿಜಯೇಂದ್ರ ಮತ್ತು ಯತೀಂದ್ರ ಹೆಸರು ಗೊಂದಲ ಮಾಡಿಕೊಂಡ ಕಾರ್ಮಿಕ ಸಚಿವ ಲಾಡ್ ಬಳಿಕ ಮಾತಿನ ತಪ್ಪು ಅರಿವಾಗಿ ನಾನು ವಿಜಯೇಂದ್ರ ಬಗ್ಗೆ ಮಾತನಾಡಿದೆ ಅಂತ ಸಮಜಾಯಿಷಿ ನೀಡಿದರು.
ವಿಜಯೇಂದ್ರ ಆಡಳಿತ ಹಸ್ತಕ್ಷೇಪ ಮಾಡುತ್ತಾರೆ ಅಂತಲೇ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಯಿತು. ಆರ್ ಎಸ್ ಎಸ್ ಮತ್ತು ಕೇಂದ್ರ ಸರ್ಕಾರ ವಿಜಯೇಂದ್ರರ ಹಸ್ತಕ್ಷೇಪ ಬೇಸತ್ತು ಯಡಿಯೂರಪ್ಪನವರನ್ನು ಕೆಳಗಿಸಿತು. ಆದರೆ ಈಗ ಅದೇ ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷ ಮಾಡಲಾಗಿದೆ ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಪಟ್ಟ ಹಾಸ್ಯಾಸ್ಪದ: ಶಾಸಕ ನಾರಾಯಣಸ್ವಾಮಿ
ಇನ್ನು ಇಂದು ಭಾರತ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಬಗ್ಗೆ ಮಾತನಾಡಿದ ಸಚಿವರು, ನಮ್ಮ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುತ್ತದೆ. ನಮ್ಮ ತಂಡ ಒಳ್ಳೆಯ ಫಾರ್ಮ್‌ನಲ್ಲಿದೆ. ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ ಇಂದಿನ ಮ್ಯಾಚ್ ಒನ್‌ಸೈಡ್ ಆಗುತ್ತದೆ ಟೀಂ ಇಂಡಿಯಾ ಗೆಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.