ಇಂದು ಭಾರತ ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಇಡೀ ದೇಶವೇ ಟಿವಿ ಮುಂದೆ ಕುಳಿತಿದೆ. ಭಾರತ ತಂಡ ಗೆಲುವಿಗಾಗಿ ದೇಶಾದ್ಯಂತ ಕ್ರೀಡಾಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಇತ್ತ ದಾಂಪತ್ಯಕ್ಕೆ ಕಾಲಿಟ್ಟ ಯುವ ಜೋಡಿ ಜೋಡಿಯೊಂದು ಭಾರತ ವಿಶ್ವಕಪ್ ಗೆಲ್ಲಲಿ ಎಂದು ಮದುವೆ ಮಂಟಪದಲ್ಲೇ ತಂಡದ ಸದಸ್ಯರ ಬ್ಯಾನರ್ ಹಿಡಿದು ಇಂಡಿಯಾ ಟೀಂ ಗೆ ಶುಭಕೋರಿದ್ದಾರೆ.
ಚಿಕ್ಕೋಡಿ (ನ.19): ಇಂದು ಭಾರತ ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಇಡೀ ದೇಶವೇ ಟಿವಿ ಮುಂದೆ ಕುಳಿತಿದೆ. ಭಾರತ ತಂಡ ಗೆಲುವಿಗಾಗಿ ದೇಶಾದ್ಯಂತ ಕ್ರೀಡಾಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಇತ್ತ ದಾಂಪತ್ಯಕ್ಕೆ ಕಾಲಿಟ್ಟ ಯುವ ಜೋಡಿ ಜೋಡಿಯೊಂದು ಭಾರತ ವಿಶ್ವಕಪ್ ಗೆಲ್ಲಲಿ ಎಂದು ಮದುವೆ ಮಂಟಪದಲ್ಲೇ ತಂಡದ ಸದಸ್ಯರ ಬ್ಯಾನರ್ ಹಿಡಿದು ಇಂಡಿಯಾ ಟೀಂ ಗೆ ಶುಭಕೋರಿದ್ದಾರೆ.
ವಿಶ್ವಕಪ್ ಫೈನಲ್ ವೇಳೆ ಮಳೆ ಬಂದ್ರೆ ಏನಾಗುತ್ತೆ? ಪಿಚ್ ರಿಪೋರ್ಟ್ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೌಲಾಪೂರ ಹಾಗೂ ಮುದ್ದಾಪೂರ ಮದುವೆ ಸಂಭ್ರಮದಲ್ಲಿ ನವ ವಧು ವರರಿಂದ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದಾರೆ. ನವೀನ ಹಾಗೂ ಸ್ನೇಹಾ ಎಂಬ ವಧು ವರರಿಂದ ಇಂಡಿಯಾ ತಂಡದ ಸದಸ್ಯರ ಬ್ಯಾನರ್ ಹಿಡಿದು ಗೆದ್ದು ಬಾ ಇಂಡಿಯಾ ಎಂದು ಮದುವೆ ಮಂಟಪದಿಂದಲೇ ಶುಭಾಶಯ ಹೇಳಿದ್ದಾರೆ.
ವಿಶ್ವಕಪ್ ಏಕದಿನ ಕ್ರಿಕೆಟ್ ಆರಂಭದಿಂದಲೂ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿರುವ ಭಾರತ ತಂಡ. ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದು ನವದಂಪತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಆಸ್ಟ್ರೇಲಿಯಾ ಸೋಲು ಖಚಿತ, ಟೀಂ ಇಂಡಿಯಾ ಗೆಲುವು ನಿಶ್ಚಿತ ಎಂದ ಇಡೀ ಮದುವೆ ಮನೆಯ ಸದಸ್ಯರು.