
ರಾಯಚೂರು (ಅ.16): ನಾವು ಯಾರೂ ಹೆದರೋದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಪ್ರಿಯಾಂಕ್ ಖರ್ಗೆ ಜೊತೆಗಿದೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆ ಬ್ಯಾನ್ ಮಾಡುವ ವಿಚಾರ ಕುರಿತು ಸಿಎಂಗೆ ಪತ್ರ ಬರೆದ ಹಿನ್ನೆಲೆ ಬೆದರಿಕೆ ಕರೆ ಬಂದಿರುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಯಚೂರಿನಲ್ಲಿ ಮಾತನಾಡಿರು.
ಬೆದರಿಕೆ ಕರೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ. ದೇಶದ ಎಲ್ಲಾ ಒರಿಜಿನಲ್ ಹಿಂದುಗಳು ಅವರ ಜೊತೆಗೆ ಇದ್ದಾರೆ. ಐಡಿಯಾಲಜಿಕಲ್ ಡಿಫರನ್ಸ್ ಇರಬಹುದು. ಈ ರೀತಿ ಬೆದರಿಕೆ ಹಾಕೋದಕ್ಕೆ ಅರ್ಥ ಇರಲ್ಲ. ಯಾರು ಮಾಡಿದ್ದಾರೆ ಗೊತ್ತಿಲ್ಲ. ಈ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದವರು ಯಾರು? ಎರಡು-ಮೂರು ಬಾರಿ ಬ್ಯಾನ್ ಮಾಡಿದವರು ಯಾರು? ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟಾಚು ಮಾಡಿದ್ದಾರಲ್ಲ ಅವರೇ ಬ್ಯಾನ್ ಮಾಡಿದ್ದು. ಯಾಕ್ ಬ್ಯಾನ್ ಮಾಡಿದ್ದು ಅಂತ ಕೇಳಬೇಕು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಒಬ್ಬ ಪ್ರಧಾನಿ ಜನ್ರಿಗೆ 10 ಸಾವಿರ ಕೊಟ್ಟು ಓಟು ಕೇಳುವ ನಿದರ್ಶನ ಇದೆಯೇನ್ರಿ? ಮೋದಿ ವಿರುದ್ಧ ಲಾಡ್ ವಾಗ್ದಾಳಿ
ನಮ್ಮತ್ತ ಬೆರಳು ಮಾಡಿ ಬೈದ್ರು ನಾವು ಹೆದರೋದಿಲ್ಲ. ನಾವು ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲ್ಲ. ವೈಯಕ್ತಿಕವಾಗಿ ನಾನು ಯಾರ ವಿರುದ್ಧವೂ ಮಾತನಾಡೋದಲ್ಲ, ಮಾತಾಡಿಲ್ಲ. ನಾನು ವಿಚಾರ ದೃಷ್ಟಿಯಿಂದ ಮಾತನಾಡ್ತೇನೆ. ವೈಯಕ್ತಿಕವಾಗಿ ಮಾತಾಡೋದು ಏನಿದೆ. ಇಲ್ಲಿಯವರೆಗೆ ಇಂಟರ್ ವ್ಯೂ ನಲ್ಲಿ ಯಾರಿಗಾದ್ರು ತಪ್ಪು ಮಾಡಿದ್ದು ತೋರ್ಸಿ ಎಂದು ಸವಾಲು ಹಾಕಿದರು. ಪ್ರಿಯಾಂಕ್ ಖರ್ಗೆ ಹೆದರೊ ಅವಶ್ಯಕತೆ ಇಲ್ಲ. ಅವರ ಜೊತೆ ಕಾಂಗ್ರೆಸ್ ಪಕ್ಷ, ಮುಸ್ಲೀಂ, ಸಿಖ್ ರು, ಒರಿಜಿನಲ್ ಹಿಂದುಗಳು ಅವರ ಜೊತೆಗಿದ್ದಿವಿ. ಬೇರೆ ಸಚಿವರಿಗೆ ಏನು ಬೆದರಿಕೆ ಬಂದಿಲ್ಲ, ಬಂದ್ರೆ ಹೇಳ್ತೇವೆ ಎಂದು ಹೇಳಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ