
ರಾಯಚೂರು (ಅ.15): ಬಿಹಾರ ಚುನಾವಣೆಯಲ್ಲಿ ಮೋದಿ ಸಾಹೇಬರು 10 ಸಾವಿರ ಕೊಟ್ಟಿದ್ದಾರಲ್ಲ. ಒಬ್ಬ ಪ್ರಧಾನಿ 10 ಸಾವಿರ ರೂಪಾಯಿ ಹಾಕಿ ಓಟು ಕೇಳೋದು ನಿದರ್ಶನ ಇದೆ ಏನ್ರಿ? ಸ್ವಾತಂತ್ರ್ಯ ಸಿಕ್ಕಾಗಿನಿಂದ ಈ ದೇಶದಲ್ಲಿ ಇಂಥ ಕಾರ್ಯಕ್ರಮ ಯಾರಾದ್ರೂ ಮಾಡಿದ್ದಾರಾ? ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಬಿಹಾರ ಚುನಾವಣೆ ವೇಳೆ ಬಿಜೆಪಿ ಜನ್ರಿಗೆ 10 ಸಾವಿರ ಹಣ ಗ್ಯಾರಂಟಿ ನೀಡಿರೊ ವಿಚಾರ ಸಂಬಂಧ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಅಮ್ಮ,ಅಕ್ಕ-ತಂಗಿಯರಿಗೆ 10 ಸಾವಿರ ಕೊಟ್ಟಿದ್ದಾರಲ್ಲ ಆಲ್ರೇಡಿ ಬೋನಸ್ ಕೊಟ್ಟಿದ್ದಾರೆ. 11 ವರ್ಷ ಪ್ರಧಾನಿ ಆಗಿ, 20 ಬಿಜೆಪಿಯಲ್ಲಿ ಆಡಳಿತದಲ್ಲಿ ಇದ್ದು, 43-60 ಸಾವಿರ ಒಳಗೆ ಪರ್ ಕ್ಯಾಪಿಟಲ್ ಇನ್ ಕಂ ಇದೆ. ಬಿಹಾರ್ ಎಷ್ಟು ಅಭಿವೃದ್ಧಿ ಆಗಿದೆ ಅಂದ್ರೆ, ವರ್ಷಕ್ಕೆ ಆದಾಯ ಕೇವಲ 60 ಸಾವಿರ ಅಷ್ಟೇ. ಇಡೀ ಭಾರತ ದೇಶದಲ್ಲಿ ಬಿಹಾರ ಬಹಳ ಬಡ ರಾಜ್ಯ. ಅಭಿವೃದ್ಧಿ ಮಾಡಲಾಗಲಿಲ್ಲ. ಈಗ ಹತ್ತು ಸಾವಿರ ಕೊಟ್ಟು ಓಟು ಕೇಳಬೇಕು. ಚುನಾವಣೆಗಿನ್ನೂ ಎರಡೇ ತಿಂಗಳಿದೆ ಎನ್ನುವಾಗಲೇ 10 ಸಾವಿರ ಹಾಕಿ, ಭಾಷಣ ಮಾಡಿ ಈಗ ಓಟು ಕೇಳ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದರು.
ಇದನ್ನೂ ಓದಿ: 'ಬಿಜೆಪಿಯವ್ರು ಯಾವಾಗ್ಲೂ ಧಮ್ಮಿದ್ರೆ ಬ್ಯಾನ್ ಮಾಡಿ ಅಂತಾರೆ..' ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಸಿಎಂ ಪರೋಕ್ಷ ಸುಳಿವು!
ಪ್ರಧಾನಿ ಮೋದಿ ಸ್ಟ್ರಾಂಗ್ ಇಲ್ಲ, ವೀಕ್ ಆಗಿದ್ದಾರೆ. ಹೀಗಾಗಿ ಸೆಲೆಬ್ರಿಟಿ ಕರೆತಂದು ಹಾಡು ಹಾಡಿಸುತ್ತಿದ್ದಾರೆ. ಮೋದಿ ಹೈತೊ ಮುನ್ ಕಿನ್ ಹೈ.. ನಿಮಗ್ಯಾಕೆ ಬೇಕು ಇದು.. ನಿಮ್ಮ ಪರವಾಗಿ ಯಾಕೆ ಹಾಡು ಹಾಡಬೇಕು? ನೀವು ಕೆಲಸ ಸರಿಯಾಗಿ ಮಾಡಿದ್ರೆ ನಿಮಗೆ ಬೊಟ್ಟು ಒತ್ತಿದ್ರೆ ಓಟು ಬಿದ್ದುಬಿಡಬೇಕಲ್ವ? ಎಲೆಕ್ಷನ್ ಕಮಿಷನ್ ಕೂಡ ಇವರದ್ದೇ ಪಿಕ್ಚರ್ ನಡಿತಿದೆ ನಡೆಯಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ