ಗುತ್ತಿಗೆದಾರ ಆತ್ಮಹತ್ಯೆ ಕೇಸ್‌: ಈಶ್ವರಪ್ಪ ರೀತಿಯೇ ಪ್ರಿಯಾಂಕ್ ಹುದ್ದೆ ಬಿಡಲಿ, ಬಿಜೆಪಿ

By Kannadaprabha News  |  First Published Dec 29, 2024, 6:55 AM IST

ಮಹಿಳೆಯರ ದುರ್ಬಳಕೆ ಸಂಚು ಸೇರಿ ಅನೇಕ ವಿಷಯಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿರುವ ಮರಣ ಪತ್ರದಲ್ಲಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿ.ಕುಮಾರ್ 


ಬೆಂಗಳೂರು(ಡಿ.29): ಈ ಹಿಂದೆ ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆ ಪಡೆದ ಮಾದರಿಯಲ್ಲೇ ಇದೀಗ ಬೀದರ್ ಜಿಲ್ಲೆಯ ಕಂಟ್ರಾಕ್ಟರ್ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೂ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿ.ಕುಮಾರ್ ಆಗ್ರಹಿಸಿದ್ದಾರೆ. 

ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ದುರ್ಬಳಕೆ ಸಂಚು ಸೇರಿ ಅನೇಕ ವಿಷಯಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿರುವ ಮರಣ ಪತ್ರದಲ್ಲಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ತನಿಖೆಯಲ್ಲಿ ಅವರ ಪಾತ್ರ ಏನೂ ಇಲ್ಲ ಎಂಬುದು ಸಾಬೀತಾದರೆ ಬಳಿಕ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರೂ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು. 

Tap to resize

Latest Videos

undefined

ಮಾತೆತ್ತಿದ್ರೆ ಕಾನೂನು ಬಗ್ಗೆ ಮಾತಾಡುವ ಪ್ರಿಯಾಂಕ್ ಖರ್ಗೆ ಈಗ್ಯಾಕೆ ಸೈಲೆಂಟ್: ಬಿಜೆಪಿ ಮುಖಂಡ ಕಿಡಿ

ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು `ಅದೆಲ್ಲ ಬೋಗಸ್, ಬೂಸಾ ಎಂಬುದು ಸಾಬೀತಾಗಿದೆ. ಪ್ರತಿಪಕ್ಷ ನಾಯಕರು, ಪಕ್ಷದ ಕಾರ್ಯಕರ್ತರ ಮೇಲೆ ಎಫ್‌ಐಆರ್‌ ಆಗುತ್ತಿದೆ. ಆದರೆ, ಪ್ರತಿಪಕ್ಷದವರು ಆಡಳಿತ ಪಕ್ಷದವರ ವಿರುದ್ಧ ದೂರು ನೀಡಿದರೆ ಎಫ್‌ಐಆ‌ರ್ ಆಗುತ್ತಿಲ್ಲ ಎಂದು ಕಿಡಿಕಾರಿದರು.  

ಬಿಜೆಪಿ ಶಾಸಕ, ನಾಯಕರ ಹತ್ಯೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತನಿಂದ ಸಂಚು!

ಕಲಬುರಗಿ:  ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಕಲಬುರಗಿ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ ಮತ್ತು ಆಂದೋಲಾ ಸ್ವಾಮೀಜಿ ಕೊಲೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಹಾಗೂ ಗ್ಯಾಂಗ್ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. 

ಇತ್ತೀಚೆಗೆ ಕಪನೂರ ವಿರುದ್ಧ ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಂಚಾಳ ಬರೆದಿಟ್ಟ ಡೆತ್‌ ನೋಟಲ್ಲಿ ಈ ಅಂಶ ಇದೆ ಎಂದು ಗೊತ್ತಾಗಿದೆ. ಇದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಚಂದು ಪಾಟೀಲ್‌ ದೂರು ನೀಡಿದ್ದು, ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಇದಕ್ಕೂ ಮುನ್ನ ಎಫ್‌ಐಆರ್ ದಾಖಲಿಗೆ ಪೊಲೀಸರು ಶುಕ್ರವಾರ ಮೀನ ಮೇಷ ಎಣಿಸಿದ ಹಿನ್ನೆಲೆಯಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಕೋರ್ಟ್ ಆದೇಶದ ಬಳಿಕ ಎಫ್‌ಐಆ‌ರ್ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಎಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಅವರ ಆಪ್ತ ರಾಜು ಕಪನೂರ ಹೆಸರು ಮಾತ್ರ ಇದೆ. 

ಸಚಿವ ಪ್ರಿಯಾಂಕ್‌ ಹೆಸರೇಳಿ ಆತ್ಮಹತ್ಯೆ ಕೇಸ್‌: ಪೇದೆಗಳಿಬ್ಬರು ಅಮಾನತು

ಆಗಿದ್ದೇನು?: 

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ಹೋಗಿ, 'ಸಚಿನ್ ಡೆತ್‌ನೋಟ್‌ನಲ್ಲಿ ನಮ್ಮ ಕೊಲೆಗೆ ಸಂಚು ರೂಪಿಸಿ ಸೊಲ್ಲಾಪುರದವರಿಗೆ ಸುಪಾರಿ ನೀಡಲಾದ ಅಂಶ ನಮೂದಾಗಿದೆ. ಹಾಗಾಗಿ ಸುಪಾರಿ ಕೊಟ್ಟವರ ವಿರುದ್ದ ದೂರು ದಾಖಲಿಸಬೇಕು' ಎಂದು ಶುಕ್ರವಾರ ಆಗ್ರಹಿಸಿದರಾದರೂ ಪೊಲೀಸರು ದೂರು ದಾಖಲಿಸಲೇ ಇಲ್ಲ. ಈ ಸಂಬಂಧ ಶಾಸಕ ಮತ್ತಿಮಡು ಹಾಗೂ ಇನ್ ಸ್ಪೆಕ್ಟರ್ ಶಕೀಲ್ ಅಂಗಡಿ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. 

ಚಂದ್ರಶೇಖರ ಠಾಣೆಗೆ ಆಗಮಿಸಿದರಾದರೂ ಐಫ್‌ಐಆರ್ ದಾಖಲು ಬಗ್ಗೆ ಸ್ಪಷ್ಟ ನಿರ್ಣಯಕ್ಕೆ ಬರಲಿಲ್ಲ. ಈ ಮಧ್ಯೆ ಶನಿವಾರ ನ್ಯಾಯಾಲಯ ನೀಡಿದ ಸೂಚನೆ ಮೇರೆಗೆ, 'ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್‌, ಮಣಿಕಂಠ ರಾಠೋಡ ಹಾಗೂ ಆಂದೋಲಾ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಲಾಗಿದೆ' ಎಂದು ರಾಜು ಕಪನೂರ್ ಮತ್ತವರ ಗುಂಪಿನ ಸದಸ್ಯರ ವಿರುದ್ಧ ಸ್ಟೇಷನ್ ಬಜಾರ್‌ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

click me!