ಗೋಹತ್ಯೆ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಹೊಸನಗರ (ಮಾ.14): ಗೋಹತ್ಯೆ ನಿಷೇಧ ಕಾಯಿದೆಯನ್ನು (Cow Slaughter Act) ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan) ಹೇಳಿದರು. ತಾಲೂಕಿನ ರಾಮಚಂದ್ರಾಪುರ ಮಠದ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವಸ್ಥಾನದ ವರ್ಧಂತ್ಯುತ್ಸವದ ಸಾಮೂಹಿಕ ವಿಷ್ಣುಪಾರಾಯಣ ಪಾರಾಯಣ ಸಮರ್ಪಣೆ, ರಜತ ಕವಚ, ಛತ್ರ ಸಮರ್ಪನೆಯ ಕೃಷ್ಣಾರ್ಪಣಂ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ರಾಮಚಂದ್ರಾಪುರ ಶ್ರೀಗಳಂತೆ ರಾಜ್ಯದ ನೂರು ಸ್ವಾಮೀಜಿಗಳು ಗೋಮಾತೆಯ ರಕ್ಷಣೆಗಾಗಿ ಗೋಶಾಲೆ ನಿರ್ಮಿಸಿದರೇ ಗೋವುಗಳು ಕಸಾಯಿಖಾನೆಗೆ ಹೋಗುವುದಿಲ್ಲ. ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಕಳೆದೊಂದು ವರ್ಷದಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 50 ರಿಂದ 100 ಎಕರೆಗಳಷ್ಟುಪ್ರದೇಶದಲ್ಲಿ ಗೋಶಾಲೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 24 ಗೋಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿಯೂ 48 ಎಕರೆ ಪ್ರದೇಶದಲ್ಲಿ ಗೋಶಾಲೆ ಶೀಘ್ರವಾಗಿ ನಿರ್ಮಾಣ ಆಗಲಿದೆ ಎಂದರು.
ರಾಜ್ಯದಲ್ಲಿ 400 ಪಶುವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಕ್ರಮವಾಗಿ ಖಾಸಾಯಿ ಖಾನೆಗೆ ಹೋಗುತ್ತಿದ್ದ 12 ಸಾವಿರ ಗೋವುಗಳ ರಕ್ಷಣೆಯನ್ನು ಸರ್ಕಾರ ಮಾಡಿದೆ. 600ಕ್ಕೂ ಹೆಚ್ಚು ಅಕ್ರಮ ಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ ದಾಖಲು ಮಾಡಿದ್ದೇವೆ. ಕೆಲವರು ಗೋವುಗಳ ರಕ್ಷಣೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ, ಸಂವಿಧಾನದ ಮೇಲೆ ನಮಗೆ ನಂಬಿಕೆಯಿದ್ದು ಅಂತಿಮವಾಗಿ ಗೋಮಾತೆಗೆ ವಿಜಯ ಲಭಿಸಲಿದೆ ಎಂದರು.
Gaushala: ಮಾಸಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ: ಸಚಿವ ಚವ್ಹಾಣ್
ರಾಘವೇಶ್ವರ ಸ್ವಾಮೀಜಿ ಮಾತನಾಡಿ, ದೇಶೀಯ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರೀಮಠವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಶ್ವ ಗೋಸಮ್ಮೇಳನದಂತಹ ಕಾರ್ಯಕ್ರಮವು ಮುಂದೆ ಜರುಗಲಿದೆ ಎಂದರು. ಹೊಂಬುಜ ಶ್ರೀ ದೇವೇಂದ್ರ ಭಟ್ಟಾರಕ, ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇತರರಿದ್ದರು.
ಗೋಶಾಲೆ ನಿರ್ಮಾಣಕ್ಕೆ ಕೇಂದ್ರ ಅನುದಾನ: ರಾಜ್ಯದಲ್ಲಿ ಆತ್ಮ ನಿರ್ಭರ (AatmaNirbhar) ಗೋಶಾಲೆಯ ಮಾದರಿ ನಿರ್ಮಾಣ ಮಾಡಲು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಸಲಹೆ ನೀಡಿದ್ದಾರೆ ಎಂದು ರಾಜ್ಯ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಪಶುಸಂಗೋಪನೆ ಸಚಿವರ ಜೊತೆಗೆ ಸಭೆಯಲ್ಲಿ ಭಾಗವಹಿಸಿ ಬಳಿಕ ಮಾಹಿತಿ ನೀಡಿದರು.
ಸದ್ಯ ರಾಜ್ಯದಲ್ಲಿ (Karnataka) ಪ್ರಾರಂಭ ಮಾಡಿರುವ ಜಿಲ್ಲೆಗೊಂದು ಗೋಶಾಲೆಯನ್ನು (Goshala) ಆತ್ಮ ನಿರ್ಭರ ಮಾಡಲು ವ್ಯವಸ್ಥಿತವಾಗಿ ಮಾದರಿ ನಿರ್ಮಾಣ ಮಾಡಿದಲ್ಲಿ ಅದಕ್ಕೆ ಅಗತ್ಯವಿರುವ ಎಲ್ಲ ಅನುದಾನ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ ದ್ರವ ಮತ್ತು ಘನ ರೂಪದ ರಸಗೊಬ್ಬರ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದ್ದು, ಇದಕ್ಕೆ ಅಂದಾಜು 20 ಕೋಟಿ ರು. ಅನುದಾನ(Grant) ನೀಡಲು ಚವ್ಹಾಣ್ ಅವರು ಕೋರಿದರು.
Karnataka Veterinary Department : 5263 ಪಶು ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಪ್ರಭು ಚವ್ಹಾಣ್
ರಾಜ್ಯದಲ್ಲಿ ಕೃಷಿ ಜೊತೆಗೆ ಪಶುಸಂಗೋಪನೆಯನ್ನು ಪರ್ಯಾಯ ಕೃಷಿಯಾಗಿ ನಡೆಸುತ್ತಿರುವ ಹಾಗೂ ಜಾನುವಾರು ಸಾಕಣೆಯಲ್ಲಿ ತೊಡಗಿದವರ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಪಶುಸಂಗೋಪನೆ ಇಲಾಖೆಯಿಂದ ನೀಡಲಾಗುತ್ತಿರುವ ವಿಮಾ ಸೌಲಭ್ಯವನ್ನು ಹೆಚ್ಚಿಸಲು 100 ಕೋಟಿ ರು. ಅನುದಾನ ನೀಡಲು ಕೋರಲಾಗಿದೆ ಎಂದು ಸಚಿವರು ಹೇಳಿದರು. ಪಶುಪಾಲಕರಿಗೆ ಜಾನುವಾರುಗಳ ಸಾವಿನಿಂದ ಎದುರಾಗುವ ಆರ್ಥಿಕ ನಷ್ಟವನ್ನು ತಪ್ಪಿಸಿ ಪಶುಸಂಗೋಪನೆ ಇಲಾಖೆಯಿಂದ ಈ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್.