
ಚಿಕ್ಕಮಗಳೂರು (ಮೇ.17): ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್ ಅವರ ವಿವಾದಾತ್ಮಕ ಹೇಳಿಕೆ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿವೆ. ಸಭೆಯಲ್ಲಿ ಪತ್ರಕರ್ತರನ್ನು ನಿಗದಿತ ಸ್ಥಳದಲ್ಲಿ ಕೂರಿಸಲಾಗಿದ್ದು, ಅವರನ್ನು 'ನಾವು ಕುರ್ಚಿ ಕೊಟ್ಟಿವಿ ಅದೇ ಜಾಗದಲ್ಲೇ ನೀವು ಕೂರಬೇಕು, ಫೋಟೋ ತೆಗೆದುಕೊಂಡು ಹೋಗಬೇಕು. ಇಲ್ಲಂದ್ರೆ ಹೊರಗೆ ಕಳಿಸ್ತೀವಿ' ಎಂದು ಸಚಿವ ಜಾರ್ಜ್ ಪತ್ರಕರ್ತರ ಬಗ್ಗೆ ತೀರ ಹಗುರವಾಗಿ ಮಾತಾಡಿದ್ದಾರೆ..
ನೀವು ಎಲ್ಲವನ್ನೂ ಫೋಟೋ, ವಿಡಿಯೋ ತೆಗೆದರೆ ಹೇಗೆ? ಎನ್ನುತ್ತಾ ಮೀಟಿಂಗ್‌ನಿಂದ ಎಂದು ಪತ್ರಕರ್ತರನ್ನು ಹೊರಗಿಡುವಂತೆ ಸೂಚಿಸಿದ್ದಾರೆ. ಘಟನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಚಿವರ ಹೇಳಿಕೆಯಿಂದ ಕೆರಳಿದ ಪತ್ರಕರ್ತರು, 'ಸರಿ ನಾವು ಹೊರಗಡೆ ಹೋಗ್ತೇವೆ. ಮುಂದೆ ನಿಮ್ಮ ಯಾವ ಕಾರ್ಯಕ್ರಮಕ್ಕೂ ಆಹ್ವಾನಿಸಬೇಡಿ. ಪತ್ರಕರ್ತರಿಲ್ಲದೇ ಕಾರ್ಯಕ್ರಮ ನಡೆಸಿ' ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರಕರ್ತರು ಸಭೆಯಿಂದ ಎದ್ದು ಹೊರನಡೆದಿದ್ದಾರೆ.
ಇದನ್ನೂ ಓದಿ: ಇಂಡಿಯಾ -ಪಾಕ್ ಕದನ ವಿರಾಮ ಸಂತೋಷ್‌ಲಾಡ್-ಪತ್ರಕರ್ತರ ನಡುವೆ ವಾಗ್ಯುದ್ಧ! India–Pakistan conflict Suvarna News
ಪತ್ರಕರ್ತರು ಸಭೆಯಿಂದ ಹೊರನಡೆಯಲು ಮುಂದಾದ ಹಿನ್ನೆಲೆ ಸಚಿವ ಜಾರ್ಜ್ ಪತ್ರಕರ್ತರನ್ನ ಸಮಾಧಾನಪಡಿಸಿ "ನಾನು ಹೇಳಿದ್ದು ಅಪಾರ್ಥವಾಗಿದೆ. ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ" ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಆದರೆ, ಪತ್ರಕರ್ತರು ಈ ಸಮಜಾಯಿಷಿಗೆ ಒಪ್ಪದೇ ಸಭೆಯಿಂದ ಹೊರಗೆ ತೆರಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಮತ್ತು ಶಾಸಕರಿಂದ ಪತ್ರಕರ್ತರ ಮೇಲೆ ರೇಗುವುದು, ಅಧಿಕಾರದ ಮದದಲ್ಲಿ ಅವಮಾನಿಸುವ ಘಟನೆಗಳು ಪದೇಪದೇ ನಡೆಯುತ್ತಿವೆ, ಇದು ಖಂಡನೀಯವಾಗಿದೆ. ಇತ್ತೀಚೆಗೆ ಸಚಿವ ಸಂತೋಷ ಲಾಡ್, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವಾಜ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪತ್ರಕರ್ತ ಸಮುದಾಯದಿಂದ ತೀವ್ರ ಖಂಡನೆಗೆ ಒಳಗಾಗಿತ್ತು. ಇದೀಗ ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್ ಪತ್ರಕರ್ತರ ಕುರಿತು ಅನುಚಿತವಾಗಿ ಮಾತನಾಡಿ, ನಿಗದಿತ ಜಾಗದಲ್ಲಿ ಕೂರಿ, ಫೋಟೋ ತೆಗೆದುಕೊಂಡು ಹೋಗಿ ಎಂದು ಲೂಸ್ ಟಾಕ್ ಮಾಡಿರುವುದು ಮತ್ತೊಮ್ಮೆ ಸಚಿವರ ಜವಾಬ್ದಾರಿಯಿಲ್ಲದ ವರ್ತನೆಯನ್ನು ಎತ್ತಿ ತೋರಿಸಿದೆ, ಸಚಿವರ ಇಂಥ ವರ್ತನೆಯನ್ನ ಪತ್ರಕರ್ತ ಸಮುದಾಯ ತೀವ್ರವಾಗಿ ಖಂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ