ಸಚಿವ ಸುಧಾಕರ್ ಕೊರೋನಾ ಪರೀಕ್ಷಾ ವರದಿ ಬಹಿರಂಗ; ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರ್

By Suvarna NewsFirst Published Jun 29, 2020, 11:12 PM IST
Highlights

ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಇದೀಗ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ.  ಕೊರೋನಾ ವೈರಸ್ ಪರಿಕ್ಷಾ ವರದಿ ನೆಗಟಿವ್ ಆಗಿರುವ ಕಾರಣ ಸುಧಾಕರ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಬೆಂಗಳೂರು(ಜೂ.29): ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅಡುಗೆ ಸಿಬ್ಬಂದಿ ಮೂಲಕ ಕೊರೋನಾ ವೈರಸ್ ಕುಟುಂಬ ಸದಸ್ಯರಿಗೆ ವಕ್ಕರಿಸಿತ್ತು. ಸಿಬ್ಬಂದಿಯಿಂತ  ಸುಧಾಕರ್ ತಂದೆ, ಹೆಂಡತಿ ಹಾಗೂ ಮಕ್ಕಳಿಗೂ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸಚಿವ ಸುಧಾಕರ್ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ ಸುಧಾಕರ್ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಆಗಿದೆ. ಹೀಗಾಗಿ ನಾಳೆ(ಜೂ.30)ಯಿಂದ ಸುಧಾಕರ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಕ್ವಾರಂಟೈನ್‌ನಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಸಚಿವ ಸುಧಾಕರ್‌

ಈ ಕುರಿತು ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನ್ನ  ಕುಟುಂಬದ ಕೆಲವು ಸದಸ್ಯರಿಗೆ ಸೋಂಕು ಧೃಡಪಟ್ಟ ನಂತರ ಕಳೆದ 8 ದಿನಗಳಿಂದ ಗೃಹ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಈಗ ಮತ್ತೊಮ್ಮೆ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಬಂದಿರುವುದರಿಂದ ನಾಳೆಯಿಂದ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಳಿಂದ ನನ್ನ ಕುಟುಂಬ ಸದಸ್ಯರು ಚೇತರಿಸಿಕೊಳ್ಳುತ್ತಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ.

 

ನನ್ನ ಕುಟುಂಬದ ಕೆಲವು ಸದಸ್ಯರಿಗೆ ಸೋಂಕು ಧೃಡಪಟ್ಟ ನಂತರ ಕಳೆದ 8 ದಿನಗಳಿಂದ ಗೃಹ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಈಗ ಮತ್ತೊಮ್ಮೆ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಬಂದಿರುವುದರಿಂದ ನಾಳೆಯಿಂದ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಳಿಂದ ನನ್ನ ಕುಟುಂಬ ಸದಸ್ಯರು ಚೇತರಿಸಿಕೊಳ್ಳುತ್ತಿದ್ದಾರೆ. pic.twitter.com/hOU21Z4RuE

— Dr Sudhakar K (@mla_sudhakar)

ಸಚಿವ ಸುಧಾಕರ್ ಅವರ ಬೆಂಗಳೂರಿನ ಸದಾಶಿವನಗರದಲ್ಲಿನ ಅಡುಗೆ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಸುಧಾಕರ್ ಸೇರಿದಂತೆ ಕುಟುಂಬ ಸದಸ್ಯರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ ಸುಧಾಕರ್ ತಂದೆ, ಪತ್ನಿ, ಮಕ್ಕಳಿಗೂ ಕೊರೋನಾ ವೈರಸ್ ದೃಢಪಟ್ಟಿತ್ತು. 

click me!