ಲಾಕ್‌ಡೌನ್‌, ಲಸಿಕೆ ಬಗ್ಗೆ ಕಾಂಗ್ರೆಸ್‌ ದ್ವಂದ್ವ ನೀತಿ: ಸುಧಾಕರ್‌

By Kannadaprabha NewsFirst Published Sep 25, 2021, 10:52 AM IST
Highlights

*  ಮೋದಿ ಲಾಕ್‌ಡೌನ್‌ ಘೋಷಿಸಿದಾಗ ಕಾಂಗ್ರೆಸ್‌ ವಿರೋಧ
*  2ನೇ ಅಲೆ ವೇಳೆ ಲಾಕ್‌ಡೌನ್‌ಗೆ ಸ್ವತಃ ಕಾಂಗ್ರೆಸ್‌ ಒತ್ತಾಯ
*  ಲಸಿಕೆ ಬಗ್ಗೆ ಜನರಿಗಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದ ಕಾಂಗ್ರೆಸ್ಸಿಗರು 
 

ಬೆಂಗಳೂರು(ಸೆ.25): 2020ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಾಕ್‌ಡೌನ್‌(Lockdown) ಘೋಷಿಸಿದಾಗ ಕಾಂಗ್ರೆಸ್‌(Congress) ಮುಖಂಡರು ಟೀಕೆ ಮಾಡಿದರು. ಇದೇ ಜನರು ಎರಡಲೇ ಅಲೆ ಬಂದಾಗ ಪೂರ್ಣ ಲಾಕ್‌ಡೌನ್‌ಗೆ ಒತ್ತಾಯ ಮಾಡಿದ್ದರು. ಒಂದು ಹಾಗೂ ಎರಡನೇ ಅಲೆಯ ನಡುವೆ ಯಾವ ರೀತಿಯ ಬದಲಾವಣೆ ಆಗಿದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌,(K Sudhakar) ಇಂತಹ ಗಂಭೀರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. 

ಕೋವ್ಯಾಕ್ಸಿನ್‌(Covaxin) ಹಾಗೂ ಕೋವಿಶೀಲ್ಡ್‌(Covishield) ಲಸಿಕೆಗೆ ಅನುಮತಿ ನೀಡಿದ್ದನ್ನು ‘ಪ್ರಿಮೆಚ್ಯೂರ್‌’ ಎಂದು ಟೀಕಿಸಿದ್ದ ಕಾಂಗ್ರೆಸ್‌ ಮುಖಂಡರು, ಲಸಿಕೆ ಬಗ್ಗೆ ಜನರಿಗಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದರು. ಕೇಂದ್ರ ಸರ್ಕಾರ ಲಸಿಕೆಯನ್ನು ಕೊಡುತ್ತಿದ್ದಾಗ, ವಿಳಂಬವಾಗಿದೆ ಎಂದು ಟೀಕೆ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, 2024ರ ವೇಳೆಗೆ ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ವ್ಯಂಗ್ಯವಾಡಿದ್ದರು. ನಂತರ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯನವರು, ಲಸಿಕೆಯ ದರ ಹೆಚ್ಚಿಸಲಾಗಿದೆ ಎಂದು ಟೀಕಿಸಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆಯನ್ನು(Vaccine) ಉಚಿತವಾಗಿ ನೀಡಿದೆ ಎಂದು ವಿವರಿಸಿದರು.

ಲಿಂಗಾಯತ ಮಹಾಸಭೆ ಗುತ್ತಿಗೆ ಹಿಡಿದಿದ್ದೀರಾ?: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಯತ್ನಾಳ್‌

ಕೋವಿಡ್‌ ನಿರ್ವಹಣೆಯನ್ನು ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಈ ಎಲ್ಲ ಟೀಕೆ, ರಾಜಕೀಯದಿಂದಾಗಿಯೇ ಪ್ರತಿ ಬಾರಿ ಕಾಂಗ್ರೆಸ್‌ ಅಡ್ಡಗಾಲು ಹಾಕಿದೆ. ಕೋವಿಡ್‌ ನಂತಹ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ, ಇಲ್ಲಿಯೂ ರಾಜಕೀಯ ಲಾಭ ಪಡೆಯುವ ಆಲೋಚನೆಯನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ. ನಮ್ಮೆಲ್ಲರ ಶತ್ರು ಕೊರೊನಾ ವೈರಾಣುವೇ ಹೊರತು ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಲ ಎಂಬ ಸತ್ಯವನ್ನು ಟೀಕಾಕಾರರು ತಿಳಿದರೆ ಕೋವಿಡ್‌ ಅನ್ನು ವೇಗವಾಗಿ ನಿಮೂರ್ಲನೆ ಮಾಡಲು ಸಾಧ್ಯ ಎಂದು ಸುಧಾಕರ್‌ ತಿರುಗೇಟು ನೀಡಿದರು.
 

click me!