ಕದ್ದುಮುಚ್ಚಿ ಪಟಾಕಿ ಹೊಡೆಯುವವರ ಬಗ್ಗೆ ಸಚಿವ ಸುಧಾಕರ್ ಹೇಳಿದಿಷ್ಟು..!

By Suvarna News  |  First Published Nov 6, 2020, 4:57 PM IST

ಈ ಬಾರಿಯ ದೀಪಾವಳಿ ವೇಳೆ ಪಟಾಕಿ ಸಿಡಿಸುವುದಕ್ಕೆ ರಾಜ್ಯ ಸರ್ಕಾರ ನಿಷೇಧಿಸಿದೆ. ಒಂದು ವೇಳೆ ಕದ್ದುಮುಚ್ಚಿ ಪಟಾಕಿ ಹೊಡೆಯುವವರ ಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ


ಬೆಂಗಳೂರು, (ನ.06): ಕೊರೋನಾ ಸೋಂಕಿನ ಹಿನ್ನಲೆ ಈ ಬಾರಿ ಸರಳವಾಗಿ ದೀಪಾವಳಿ ಆಚರಣೆ ಮಾಡುವಂತೆ ಆರೋಗ್ಯ ಸಚಿವ ಡಾ ಕೆ ಸುಧಾಕರ್​ ತಿಳಿಸಿದ್ದಾರೆ. 

"

Latest Videos

undefined

ಸುದ್ದಿಗಾರರೊಂದಿಗೆ ಮತನಾಡಿದ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಪಟಾಕಿ ನಿಷೇಧ ಬಗ್ಗೆ ಸಿಎಂ ಅವರು ಘೋಷಿಸಿದ್ದಾರೆ. ಈ ಸಲ ಸರಳ ದೀಪಾವಳಿ ಮಾಡಿ ಅಂತ ಸಿಎಂ ಹೇಳಿದ್ದಾರೆ. ಈ ವರ್ಷ ಯಾರೂ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದರು.

ಸಿಎಂ ಮಹತ್ವದ ಘೋಷಣೆ: ಈ ಬಾರಿ ದೀಪಾವಳಿ ಪಟಾಕಿ ಠುಸ್..!

ಹಬ್ಬಗಳ ಸಾಲಿನ ಜೊತೆ ಚಳಿಗಾಲ ಕೂಡ ಆರಂಭವಾಗಲಿದೆ. ಇದರಿಂದ ಕೋವಿಡ್​ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಈ ಹಿನ್ನಲೆ ಈ ಬಾರಿ ಯಾರು ಪಟಾಕಿ ಹೊಡೆಯಬಾರದು. ಒಂದು ವೇಳೆ ಕದ್ದುಮುಚ್ಚಿ ಪಟಾಕಿ ಹೊಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಯಮ ಉಲ್ಲಂಘಿಸಿ ಪಟಾಕಿ ಹೊಡೆದರೆ ದಂಡ ಹಾಕಬೇಕೋ ಇನ್ನೇನೂ ಕ್ರಮ‌ಕೈಗೊಳ್ಳಬೇಕು ಎನ್ನುವ ಬಗ್ಗೆ ನಾಳೆ ರೂಪರೇಷ ಸಿದ್ಧಪಡಿಸಲಾಗುವುದು ಎಂದರು.

click me!