'13 ವರ್ಷ ಆದ ಹಸುವನ್ನ ಸಾಯಿಸಬಹುದು, ವಿರೋಧ ಮಾಡಿಲ್ಲ'

By Suvarna NewsFirst Published Dec 28, 2020, 2:20 PM IST
Highlights

18 ನೇ ತಾರೀಖಿನಿಂದ ಅಧಿವೇಶನ  ಮಾಡೋ ಚಿಂತನೆ| ಮುಂದಿನ ಕ್ಯಾಬಿನೆಟ್ ನಲ್ಲಿ ದಿನಾಂಕ ನಿಗಧಿ ಮಾಡ್ತೀವಿ| ಗಂಡು ಕರುವಿಗೆ ಸಾಕಲು ಆಗದವರು ಗೋಶಾಲೆಗೆ ಬಿಡಬಹುದು| 13 ವರ್ಷ ಆದ ಹಸುವನ್ನ ಸಾಯಿಸಬಹುದು

ಬೆಂಗಳೂರು(ಡಿ.28): ಅಧಿವೇಶನ ದಿನಾಂಕ ಕುರಿತಾಗಿ ಅಚಿವ ಜೆ. ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದು, 18 ನೇ ತಾರೀಖಿನಿಂದ ಅಧಿವೇಶನ ಮಾಡೋ ಚಿಂತನೆ ಇದೆ. ಮುಂದಿನ ಕ್ಯಾಬಿನೆಟ್ ನಲ್ಲಿ ದಿನಾಂಕ ನಿಗಧಿ ಮಾಡುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಹಾಗೂ ಗೋಹತ್ಯೆ ನಿಷೇಧ ಕಾನೂನು ಕುರಿತಾಗಿಯೂ ಮಾತನಾಡಿದ್ದಾರೆ. 

ಬಿಬಿಎಂಪಿ ಚುನಾವಣೆ ಕುರಿತಾಗಿ ಮಾತನಾಡಿದ ಸಚಿವರು ಫೆಬ್ರವರಿವರೆಗೆ ಸುಪ್ರೀಂಕೋರ್ಟ್ ಸ್ಟೇ ಕೊಟ್ಟಿದೆ. ಕಾಯ್ದೆ ಬದಲಾವಣೆ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದೇವೆ. ಚುನಾವಣೆಗೆ ಸಮಯ ಬೇಕು ಅಂತ ನಾವು ಕೋರ್ಟ್ ಗೆ ಮನವಿ ಮಾಡುತ್ತೇವೆ ಎಂದಿದ್ದಾರೆ. 

ಗೋಹತ್ಯೆ ನಿಒಷೇಧ ಕಾನೂನು ಕುರಿತಾಗಿಯೂ ಈ ಸಂದರ್ಭದಲ್ಲಿ ಮಾತನಾಡಿದ ಮಾಧುಸ್ವಾಮಿ 'ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಇದೆ, ಇದಕ್ಕೆ ಮತ್ತಷ್ಟು ಹೊಸ ರೂಪ ಕೊಡಲಾಗಿದೆ. ದಂಡ ಹೆಚ್ಚಳ ಮಾಡಲಾಗಿದೆ. ಗಂಡು ಕರುವಿಗೆ ಸಾಕಲು ಆಗದವರು ಗೋಶಾಲೆಗೆ ಬಿಡಬಹುದು. ಇದನ್ನ ಸರ್ಕಾರ ನಿರ್ವಹಣೆ ಮಾಡಲಿದೆ. ಇಂತಹ ಕೆಲಸ ಅಂಶಗಳನ್ನ ಮಾತ್ರ ಸೇರಿಸಲಾಗಿದೆ. ಇದ್ರಲ್ಲಿ ಬೇರೆ ವಿಶೇಷ ಇಲ್ಲ. 13 ವರ್ಷ ಆದ ಹಸುವನ್ನ ಸಾಯಿಸಬಹುದು. ಇಂತಹ ಹಸು ಮಾಂಸ ತಿನ್ನೋದಕ್ಕೆ ವಿರೋಧ ಮಾಡಿಲ್ಲ. ಅಲ್ಲದೆ ಹಸು ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಆದ್ರೆ ಯಾಕೆ ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ' ಎಂದಿದ್ದಾರೆ. 

click me!