ಬ್ರಿಟನ್‌ ರಿಟರ್ನ್‌ ಸೋಂಕಿತರ ಸಂಖ್ಯೆ 26ಕ್ಕೆ: ನಾಪತ್ತೆ ಆಗಿದ್ದವರಲ್ಲಿ 153 ಜನ ಪತ್ತೆ!

By Kannadaprabha NewsFirst Published Dec 28, 2020, 7:20 AM IST
Highlights

ಟನ್‌ ರಿಟರ್ನ್‌ ಸೋಂಕಿತರ ಸಂಖ್ಯೆ 26ಕ್ಕೆ| ಬ್ರಿಟನ್‌ನಿಂದ ಬಂದವರಲ್ಲಿ ಮತ್ತೆ 3 ಜನಕ್ಕೆ ಪಾಸಿಟಿವ್‌| ನಾಪತ್ತೆ ಆಗಿದ್ದ 693 ಜನರಲ್ಲಿ 153 ಜನ ನಿನ್ನೆ ಪತ್ತೆ| ಎಲ್ಲರಿಗೂ ಕೊರೋನಾ ಟೆಸ್ಟ್‌| 540 ಜನ ಇನ್ನೂ ನಾಪತ್ತೆ

ಬೆಂಗಳೂರು(ಡಿ.28): ಬ್ರಿಟನ್‌ನಿಂದ ರಾಜ್ಯಕ್ಕೆ ವಾಪಸಾದವರ ಪೈಕಿ ಹೊಸದಾಗಿ ಮೂರು ಜನರಿಗೆ ಭಾನುವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಇದುವರೆಗೆ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಿಂದ ವಾಪಸಾದ ಬಳಿಕ ನಾಪತ್ತೆಯಾಗಿದ್ದವರ 693 ಜನರ ಪೈಕಿ ಭಾನುವಾರ 153 ಜನರನ್ನು ಪತ್ತೆ ಹಚ್ಚಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 90 ಜನರ ವರದಿ ಬಂದಿದ್ದು, ಮೂವರಿಗೆ ಸೋಂಕು ದೃಢಪಟ್ಟಿದೆ. ಉಳಿದ 63 ಜನರ ವರದಿ ಬರಬೇಕಿದೆ. ಸೋಂಕು ದೃಢಪಟ್ಟವರ ಗಂಟಲು ದ್ರವದ ಮಾದರಿಯನ್ನು ರೂಪಾಂತರಿ ವೈರಾಣು ಪತ್ತೆಗೆ ನಡೆಸುವ ವಂಶವಾಹಿ ಪರೀಕ್ಷೆಗೆ ನಿಮ್ಹಾನ್ಸ್‌ ಮತ್ತು ನ್ಯಾಷನಲ್‌ ಸೈನ್ಸ್‌ ಆಫ್‌ ಬಯಾಲಜಿಕಲ್‌ ಸೈನ್ಸಸ್‌ಗೆ (ಎನ್‌ಸಿಬಿಎಸ್‌) ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡಿ.12ರಿಂದ 21ರವರೆಗೆ ಬ್ರಿಟನ್‌ನಿಂದ ರಾಜ್ಯಕ್ಕೆ ಒಟ್ಟು 2127 ಜನರು ಬಂದಿದ್ದು, ಈ ಪೈಕಿ ಭಾನುವಾರದ ವರೆಗೆ 1587 ಜನರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಉಳಿದ 540 ಜನರು ಇನ್ನೂ ಪತ್ತೆಯಾಗಿಲ್ಲ. ಪೊಲೀಸರ ಸಹಕಾರದೊಂದಿಗೆ ಅವರ ಪತ್ತೆ ಕಾರ್ಯ ಮುಂದುವರೆಸಲಾಗಿದೆ. ಇನ್ನು ಕೋವಿಡ್‌ ಪರೀಕ್ಷೆ ನಡೆಸಿರುವವರ ಪೈಕಿ 1290 ಜನರ ವರದಿ ಬಂದಿದ್ದು, 26 ಜನರಿಗೆ ಪಾಸಿಟಿವ್‌, 1264 ಜನರಿಗೆ ನೆಗೆಟಿವ್‌ ಬಂದಿದೆ. ಉಳಿದ 297 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

click me!