
ಚಾಮರಾಜನಗರ (ಮಾ.12):ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಜಾರಿ ಮಾಡುವುದಾಗಿ ಚೆಕ್‌ನಲ್ಲಿ ಸಹಿ ಮಾಡಿ ಭರವಸೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದವು ಎಂದು ಸಚಿವ ಎಚ್‌ಸಿ ಮಹದೇವಪ್ಪ ಹೇಳಿದರು.
ಚಾಮರಾಜನಗರದ ಹೆಗ್ಗವಾಡಿಯ ಅಂಬೇಡ್ಕರ್ ಮೈದಾನದಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ. ನರೇಂದ್ರ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಗೆದ್ದಿದ್ದಾರೆ. ಮಂಜುನಾಥ ಕೂಡ ಮುಂದಿನ ದಿನಗಳಲ್ಲಿ ನಮ್ಮ ಜೊತೆಗೆ ಇರ್ತಾರೆ ಎನ್ನುವ ಮೂಲಕ ಜೆಡಿಎಸ್ ಶಾಸಕ ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಸುಳಿವು ನೀಡಿದರು.
ಗ್ಯಾರಂಟಿ ಸಮಾವೇಶದ ಮಧ್ಯೆ ಹೊರನಡೆದ ಮಹಿಳೆಯರಿಗೆ ಗದರಿದ ಸಿಎಂ
ರಾಜ್ಯಸಭೆ ಚುನಾವಣೆ ವೇಳೆಯೂ ಜೆಡಿಎಸ್ ಗೆ ಮಂಜುನಾಥ್ ಕೈ ಕೊಟ್ಟು ಕಾಂಗ್ರೆಸ್ ಪರ ಮತ ಚಲಾಯಿಸ್ತಾರೆ ಅನ್ನೋ ಗುಸು ಗುಸು ಹಬ್ಬಿತ್ತು. ಇದೀಗ ಗ್ಯಾರಂಟಿ ಸಮಾವೇಶದಲ್ಲಿ ಶಾಸಕ ಮಂಜುನಾಥ್ ನಮ್ಮ ಜೊತೆಗೆ ಇರ್ತಾರೆ ಎಂದಿರುವುದು ಕಾಂಗ್ರೆಸ್ ಸೇರುವುದು ಖಚಿತ ಎಂದಂತಾಗಿದೆ.
ವೇದಿಕೆ ಮೇಲೆ ಸಚಿವರಿಗೆ ಮುಖಭಂಗ:
ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಹೆಚ್‌ಸಿ ಮಹದೇವಪ್ಪ ಕ್ಷಣಕಾಲ ಮುಜುಗರಕ್ಕೀಡಾದ ಘಟನೆ ನಡೆಯಿತು.
ಕಾಂಗ್ರೆಸ್ ಉದ್ದೇಶಿಸಿ ದಲಿತ ಸಿಎಂ ಹೇಳಿಕೆ ನೀಡಿಲ್ಲ: ಸಚಿವ ಮಹದೇವಪ್ಪ
ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ಬರ್ತಿದೆ ಅಲ್ವಾ? ಗೃಹಲಕ್ಷ್ಮೀ ಹಣ ಯಾರಾರು ಪಡೆಯುತ್ತಿದ್ದೀರಿ? ಹಣ ಪಡೆದ ಮಹಿಳೆಯರು ಕೈ ಎತ್ತಿ ಎಂದ ಸಚಿವ ಮಹದೇವಪ್ಪ. ಈ ವೇಳೆ ಗುಂಪಿನಲ್ಲಿ ನಿಂತ ಕೆಲ ಮಹಿಳೆಯರು ಇದೂವರೆಗೂ ಒಂದು ಪೈಸೆ ಹಣ ಬಂದಿಲ್ಲ ಎಂದು ಕೈಯಲ್ಲಿ ಆಧಾರ್ ಕಾರ್ಡ್ ತೋರಿಸಿದ ಮಹಿಳೆಯರು. ಮಹಿಳೆಯರ ಪ್ರತಿಕ್ರಿಯಿಗೆ ಸಚಿವ ಮಹದೇವಪ್ಪ ಮುಜುಗರ ಅನುಭವಿಸುವಂತಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ