ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನೆಗೆ ಕೊರೋನಾ ವಕ್ಕರಿಸಿಕೊಂಡಿದ್ದು, ಈವರೆಗೆ ಮೂವರಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು, (ಜೂನ್.22): ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಸಚಿವ ಸುಧಾಕರ್ ಮನೆಗೂ ಕಾಲಿಟ್ಟ ಕೊರೋನಾ...!
ಈ ಬಗ್ಗೆ ಸ್ವತಃ ಸುಧಾಕರ್ ಅವರೇ ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ. ಮೊದಲಿಗೆ ಅಡುಗೆ ಭಟ್ಟನಿಗೆ ವಕ್ಕರಿಸಿದ್ದ ಮಾಹಾಮಾರಿ ಕೊರೋನಾ ಬಳಿಕ ಸುಧಾಕರ್ ತಂದೆಗೂ ಕೊರೋನಾ ಪಾಸಿಟಿವ್ ದೃಢಟ್ಟಿದೆ.
ಸಚಿವ ಸುಧಾಕರ್ ತಂದೆಗೆ ಕೊರೋನಾ ಸೋಂಕು ದೃಢ..!
ಇದರ ಬೆನ್ನಲ್ಲೇ ಇದೀಗ ಮನೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಕೊರೋನಾ ಸೋಂಕು ತಗುಲಿದ್ದು, ಮನೆಯಲ್ಲಿರುವ ಇನ್ನುಳಿದವರಿಗೂ ಆತಂಕ ಶುರುವಾಗಿದೆ.
ನಮ್ಮ ಮನೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಅವರೂ ಕೂಡ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರೂ ಬೇಗ ಗುಣಮುಖರಾಗಲಿ ಎಂದು ನಮ್ಮ ಪ್ರಾರ್ಥನೆ.
ಬೆಂಗಳೂರಿನ ಸದಾಶಿವ ನಗರದಲ್ಲಿರೋ ನಿವಾಸದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು. ಇದರ ಬೆನ್ನಲ್ಲೇ ಸಚಿವ ಸುಧಾಕರ್ ಅವರ ತಂದೆಗೆ ಕೊರೋನಾ ಲಕ್ಷಣಗಳಾದ ಇಜ್ವರ, ಕೆಮ್ಮು ಸಮಸ್ಯೆ ಕಂಡುಬಂದಿದ್ದವು.
ಹಿನ್ನಲೆಯಲ್ಲಿ 82 ವರ್ಷದ ಸುಧಾಕರ್ ತಂದೆಯವರನ್ನ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆಗೂ ಒಳಪಡಿಸಲಾಗಿತ್ತು. ಇದೀಗ ಆ ವರದಿ ಬಂದಿದ್ದು, ಸೋಂಕು ಇರುವುದು ದೃಢವಾಗಿದೆ.