ಉಡುಪಿ[ಅ. 01] ಸಾಹಿತಿ ಎಸ್.ಎಲ್. ಭೈರಪ್ಪ ದಸರಾ ಉದ್ಘಾಟನಾ ಭಾಷಣವನ್ನು ಪ್ರಗತಿಪರರು ಟೀಕೆ ಮಾಡಿದ್ದಾರೆ. ಮಹಿಳೆಯರು ಮತ್ತು ಮುಟ್ಟಿನ ಹೇಳಿಕೆಗೆ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಭೈರಪ್ಪ ಅವರ ಪಕ್ಕದಲ್ಲೇ ಇದ್ದೆ. ಅವರು ತಪ್ಪೇನೂ ಮಾತಾಡಿಲ್ಲ. ನಾಡದೇವಿಗೆ ಕೈ ಮುಗಿಯದ ನಾಸ್ತಿಕರು ಕೂಡಾ ದಸರಾ ಉದ್ಘಾಟನೆ ಮಾಡಿದ್ದಾರೆ. ತಮ್ಮಶ್ರದ್ಧೆ ತೋರ್ಪಡಿಸಿದ ಭೈರಪ್ಪ ಕೋಟಿ ಪಾಲು ಮೇಲಿದ್ದಾರೆ. ನಾಸ್ತಿಕರನ್ನು ಕರೆದು ಹಿಂದಿನ ಸರ್ಕಾರ ಅಪಮಾನ ಮಾಡಿತ್ತು. ಭೈರಪ್ಪ ಶಬರಿಮಲೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದ್ದಾರೆ ಅಷ್ಟೇ ಎಂದು ಹೇಳಿದರು.
ಸಂತ್ರಸ್ತರ ನೋವು ಕಾಣ್ತಿಲ್ಲವೆ? ಮೋದಿ ನಡೆಗೆ ಬೇಸರ, ಸಂಸದರ ವಿರುದ್ಧ ಆಕ್ರೋಶ
ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದೇನೂ ಹೇಳಿಲ್ಲ. ನಮ್ಮ ದೇಶದಲ್ಲಿ ಗಂಡು ದೇವತೆಗಳಿಗಿಂತ ಹೆಣ್ಣು ದೇವತೆಗಳೇ ಹೆಚ್ಚಿದ್ದಾರೆ. ಹೆಣ್ಣು ದೇವತೆಯೇ ಇಲ್ಲದಂಥ ಮತದವರು ಅವರ ಬಗ್ಗೆ ಯೋಚನೆ ಮಾಡ್ಲಿ ಸಾಕು ಎಂದರು.
ಹತ್ತು ರಾಜ್ಯಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಹತ್ತೂ ರಾಜ್ಯಕ್ಕೆ ಮಧ್ಯಂತರ ಪರಿಹಾರ ಕೊಟ್ಟಿದ್ದಾರೆ, ಪೂರ್ಣ ಪರಿಹಾರ ಕೊಟ್ಟಿಲ್ಲ. ಚುನಾವಣೆ ಹೋಗುವ ಮಹಾರಾಷ್ಟ್ರಕ್ಕೂ ಪರಿಹಾರ ಕೊಟ್ಟಿಲ್ಲ. ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯಗಳೂ ಸಮಾನ. ದೇಶದ 132 ಕೋಟಿ ಜನರೂ ಅವರಿಗೆ ಒಂದೇ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕಾರಣ ಮಾಡುತ್ತಿವೆ ಎಂದು ದೂರಿದರು.
ಒಂದೂ ಸೀಟು ಗೆಲ್ಲದ ಕೇರಳ, ಒಂದೇ ಸೀಟು ಗೆದ್ದ ತಮಿಳುನಾಡಿಗೂ ಪರಿಹಾರ ಕೊಟ್ಟಿದ್ದಾರೆ, ನಮಗೂ ಕೊಡ್ತಾರೆ. ಒಂದು ರಾಜ್ಯಕ್ಕೆ ಕೊಟ್ಟು ಇನ್ನೊಬ್ರಿಗೆ ಕೊಡದೇ ಇದ್ರೆ ರಾಜಕಾರಣ ಅನ್ನಬಹುದಿತ್ತು. ಹಾಗೇನಾದ್ರೂ ಆಗಿದ್ರೆ ನಾವೇ ಧ್ವನಿ ಎತ್ತುತ್ತೇವೆ ಸಂಶಯ ಬೇಡ. ಅವಶ್ಯಕತೆ ಬಿದ್ರೆ ನಮ್ಮ ಸಂಸದರು ಮುಖ್ಯಮಂತ್ರಿನೂ ಹೋಗ್ತಾರೆ. ಕರ್ನಾಟಕದ ಹಿತಾಸಕ್ತಿ ಬಿಟ್ಟು ರಾಜಕಾರಣ ಮಾಡಲ್ಲ ಎಂದು ಭರವಸೆ ನೀಡಿದರು.
ರಾಷ್ಡ್ರೀಯ ಹಿತಾಸಕ್ತಿ ಪೂರಕ ಕೆಲಸ ಮಾಡಿರೋದನ್ನು ಚಕ್ರವರ್ತಿ ಸೂಲಿಬೆಲೆ ಮೊದಲು ಪ್ರಶಂಸೆ ಮಾಡಿದ್ದಾರೆ. ತಮ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ, ಅದು ಟೀಕೆ ಅಲ್ಲ. ಪ್ರಧಾನಿ ಕರ್ನಾಟಕಕ್ಕೆ ಬರಬೇಕು, ಪರಿಹಾರ ಡಿಕ್ಲೇರ್ ಮಾಡಬೇಕು ಅನ್ನೋದು ಅವರ ಅಪೇಕ್ಷೆ . ಇದುವೇ ಬ್ಯೂಟಿ ಆಫ್ ಡೆಮಾಕ್ರಸಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ