ಬಿಜೆಪಿ ಮೈತ್ರಿಯೇ ಚೆನ್ನಾಗಿತ್ತು : ಜೆಡಿಎಸ್ ಸಚಿವ

Published : Jan 29, 2019, 12:10 PM IST
ಬಿಜೆಪಿ ಮೈತ್ರಿಯೇ ಚೆನ್ನಾಗಿತ್ತು : ಜೆಡಿಎಸ್ ಸಚಿವ

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು, ಕಾಂಗ್ರೆಸ್ ಜೊತೆಗಿನ ಮೈತ್ರಿಗಿಂದ ಬಿಜೆಪಿ ಜೊತೆಗಿನ ಮೈತ್ರಿಯೇ ಚನ್ನಾಗಿತ್ತು ಎಂದು ಜೆಡಿಎಸ್ ಸಚಿವರೋರ್ವರು ಹೇಳಿಕೆ ನೀಡಿದ್ದಾರೆ. 

ಬೆಂಗಳೂರು :  ಹಿಂದೆ ಬಿಜೆಪಿ ಜತೆಗೆ ರಚಿಸಿದ್ದ ಮೈತ್ರಿಯೇ ಚೆನ್ನಾಗಿತ್ತು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ.

2006ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಉತ್ತಮವಾಗಿ ಆಡಳಿತ ನೀಡಿದ್ದೇವೆ. ಜನರು ಸಹ ಮೆಚ್ಚಿಕೊಂಡಿದ್ದರು. ಮೈತ್ರಿ ವಿಷಯದಲ್ಲಿ ಕಾಂಗ್ರೆಸ್ಸಿಗಿಂತ ಬಿಜೆಪಿ ಜೊತೆಗಿನ ಮೈತ್ರಿಯೇ ಉತ್ತಮವಾಗಿದೆ ಎಂದರು.

ಈಗಿನ ಕಾಂಗ್ರೆಸ್‌ ಜತೆಗಿನ ಮೈತ್ರಿ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ತಕರಾರು ಮಾಡಲಾಗುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಹೇಳಬೇಕಾದರೆ ಅವರಿಗೆ ಎಷ್ಟು ನೋವಿರಬೇಕು ಎಂಬುದನ್ನು ಜನರು ಗಮನಿಸಬೇಕು. 

ಕಾಂಗ್ರೆಸ್‌ ಮುಖಂಡರು ಇದೇ ರೀತಿ ಮಾತನಾಡುತ್ತಿದ್ದರೆ ಮುಂದಿನ ಪರಿಣಾಮ ಬೇರೆಯೇ ಆಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಥಣಿಸಂದ್ರ ಮನೆ ತೆರವು: ಮುಸ್ಲಿಂ-ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡ್ತಿದೆಯೇ ಸರ್ಕಾರ? ಸಿಎಂ ವಿರುದ್ಧ ಎಸ್‌ಡಿಪಿಐ ಮಜೀದ್ ವಾಗ್ದಾಳಿ!
ದೇಶಕ್ಕಾಗಿ ಒಲಂಪಿಕ್ಸ್ ಪದಕ ಗೆದ್ದ ಪ್ರಸಾದ್ ಈಗ ಹೌಸ್ ಕೀಪಿಂಗ್ ನೌಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ನರಕವಾದ ಬದುಕು!