* ದೊಡ್ಡವರ ಬಗ್ಗೆ ಹಗುರವಾಗಿ ಮಾತನಾಡಿದರೂ ಸುಮ್ಮನಿರಬೇಕಾ?
* ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲೋದು ಖಚಿತ
* ಕಳೆದ ಚುನಾವಣೆಯಲ್ಲಿ ನಿಮಗೆ ಜನರು ತೋರಿಸಿದ್ದಾರೆ
ಬಳ್ಳಾರಿ(ಅ.29): ‘ಸಿದ್ದರಾಮಯ್ಯ ತಾನು ಮಾತ್ರ ದೊಡ್ಡವನು ಎಂಬ ಭ್ರಮೆಯಲ್ಲಿದ್ದಾರೆ. ಸಣ್ಣವರು, ದೊಡ್ಡವರು ಯಾರು ಎಂಬುದು ರಾಜಕಾರಣದಲ್ಲಿ(Politics) ಜನರೇ ತೀರ್ಮಾನ ತೆಗೆದುಕೊಳ್ಳಬೇಕಾದ ನಿರ್ಧಾರ ವಿನಃ ಸಿದ್ದರಾಮಯ್ಯ ಅಲ್ಲ. ಕಳೆದ ಚುನಾವಣೆಯಲ್ಲಿ ಈಗಾಗಲೇ ಜನರು ಅವರಿಗೆ ಇದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗಿರಾಕಿ ಎಂಬ ಶಬ್ದ ಬಳಕೆ ಮಾಡುವ ಸಿದ್ದರಾಮಯ್ಯ(Siddaramaiah) ದೊಡ್ಡ ಮನುಷ್ಯನಾ? 130 ಕೋಟಿ ಜನರಿಂದ ಆಯ್ಕೆಗೊಂಡ ಪ್ರಧಾನಮಂತ್ರಿಗಳಿಗಿಂತ(Prime Minister) ಸಿದ್ದರಾಮಯ್ಯ ದೊಡ್ಡೋನಾ ? ಆತ ಯಾರ ಕುರಿತಾದರೂ ಮಾತನಾಡಬಹುದು. ಯಾರನ್ನು ಬೇಕಾದರೂ ಗಿರಾಕಿ, ಲೂಟಿಕೋರ, ಸೂಟ್‌ಕೇಸ್ ಎಂಬಿತ್ಯಾದಿ ಪದಗಳನ್ನು ಬಳಸಬಹುದಾ? ದೊಡ್ಡವರು ಎನ್ನದೆ ಏಕವಚನದಲ್ಲಿ ಮಾತನಾಡಬಹುದಾ? ಎಂದು ಶ್ರೀರಾಮುಲು(B Sriramulu) ಕೇಳಿದರು.
undefined
‘ನಿನ್ನ ದೃಷ್ಟಿಯಲ್ಲಿ ನಾನು ಸಣ್ಣವನಾಗಿರಬಹುದು. ಜನರ ದೃಷ್ಟಿಯಲ್ಲಿ ನಾನು ಬಹಳಷ್ಟು ದೊಡ್ಡವನು. ಜನ ನನ್ನ ಗೌರವಿಸುತ್ತಿದ್ದಾರೆ. ಸ್ಥಾನಮಾನಗಳನ್ನು ನೀಡಿದ್ದಾರೆ. ಸಣ್ಣವ ಯಾರು ದೊಡ್ಡವ ಯಾರು ಎಂಬುದು ನಾವಿಬ್ಬರು ತೀರ್ಮಾನಿಸುವುದಲ್ಲ. ಜನರು ತೀರ್ಮಾನಿಸಬೇಕು. ಕಳೆದ ಚುನಾವಣೆಯಲ್ಲಿ ನಿಮಗೆ ಜನರು ತೋರಿಸಿದ್ದಾರೆ. ಬರುವ 2023ರ ಚುನಾವಣೆಯಲ್ಲಿ(Election) ಸಹ ನಿಮಗೆ ತೋರಿಸಿಕೊಡಲಿದ್ದಾರೆ ಎಂದರು. ಆತ ಯಾರನ್ನೇ ಬೈದರೂ ಒಪ್ಪಿಕೊಳ್ಳಬೇಕಾ? ದೊಡ್ಡವರ ಬಗ್ಗೆ ಹಗುರವಾಗಿ ಮಾತನಾಡಿದರೂ ಸುಮ್ಮನಿರಬೇಕಾ ಎಂದು ಕೇಳಿದರು.
ಸಿದ್ದರಾಮಯ್ಯ ವಿರುದ್ಧ ಗರಂ ಆದ ಶ್ರೀರಾಮುಲು
ದಲಿತರನ್ನು ಮುಖ್ಯಮಂತ್ರಿ ಮಾಡ್ತೀರಾ?:
ಹಿಂದುಳಿದ ನಾಯಕ, ದಲಿತಪರ(Dalit) ಎಂದುಕೊಳ್ಳುವ ನೀವು ದಲಿತರನ್ನು ಮುಖ್ಯಮಂತ್ರಿ(Chief Minister) ಮಾಡುವ ಪ್ರಯತ್ನ ಮಾಡಿದ್ದೀರಾ? ಅಲ್ಪಸಂಖ್ಯಾತ(Minorities) ಸಮುದಾಯದ ವ್ಯಕ್ತಿಯನ್ನು ಕೆಪಿಸಿಸಿ(KPCC) ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ಮಾಡಿದ್ದೀರಾ ಎಂದು ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ದಲಿತರು ಎಂದರೆ ಕಾಂಗ್ರೆಸ್, ಹಿಂದುಳಿದ, ಅಲ್ಪಸಂಖ್ಯಾತರು ಎಂದರೆ ಕಾಂಗ್ರೆಸ್(Congress) ಎಂದು ಹೇಳಕೊಳ್ಳುತ್ತಿದ್ದೀರಿ. ಆದರೆ, ಮುಖ್ಯಮಂತ್ರಿ ಮಾಡಲು ಯಾಕೆ ಪ್ರಯತ್ನಿಸಲಿಲ್ಲ. ಯಾಕೆ ದಲಿತರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ? ಎಂದು ಕೇಳಿದರಲ್ಲದೆ, ಎರಡು ಉಪಚುನಾವಣೆಯಲ್ಲಿ(Byelection) ಕಾಂಗ್ರೆಸ್ ಸೋಲುಣ್ಣುವುದು ಖಚಿತ. ಹತಾಶೆಯಿಂದ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿ(BJP) ದಲಿತರನ್ನು ಮುಖ್ಯಮಂತ್ರಿ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ‘ಮೊದಲು ಕಾಂಗ್ರೆಸ್‌ನವರು ಮಾಡಲಿ’ ಆಮೇಲೆ ನೋಡೋಣ ಎಂದು ಪ್ರತಿಕ್ರಿಯಿಸಿದರು.