ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವ ವಿಶೇಷ ಕೊಡುಗೆ

By Suvarna News  |  First Published Oct 28, 2021, 7:11 PM IST
  • ಕನ್ನಡ ರಾಜ್ಯೋತ್ಸವ ವಿಶೇಷ ಕೊಡುಗೆ
  • ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ

ಸ್ಟಾರ್ಟಪ್ ಇಂಡಿಯಾದಲ್ಲಿ ನೋಂದಣಿಗೊಂಡ ಕರ್ನಾಟಕದ ಮೊದಲ ಆ್ಯಪ್ ಆಧಾರಿತ ಆನ್‌ಲೈನ್ ಶಿಕ್ಷಣ ಸಂಸ್ಥೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ವಿದ್ಯಾವಿನ್ ಆ್ಯಪ್ ಆಧಾರಿತ ಆನ್‌ಲೈನ್ ಸಂಸ್ಥೆಯಿಂದ ಹತ್ತನೇ ತರಗತಿ (SSLC) ಕನ್ನಡ ಮಾಧ್ಯಮದ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಇ-ಲರ್ನಿಂಗ್ (www.vidyawin.com) ಉಚಿತ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ.

ಪ್ರೌಢಶಿಕ್ಷಣ ಹಾಗೂ ಸಕಾಲ ಕರ್ನಾಟಕ ಸರಕಾರ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ದಿನಾಂಕ 29.10.2021 (ಶುಕ್ರವಾರ), ಬೆಳಗ್ಗೆ 11.30ಕ್ಕೆ ಚಾಲನೆ ನೀಡಲಿದ್ದಾರೆ. ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಕಚೇರಿ, ಕೊಠಡಿ ಸಂಖ್ಯೆ 262, ವಿಧಾನಸೌಧ 2ನೇ ಮಹಡಿ, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.

Latest Videos

undefined

ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್‌ ದೇಣಿಗೆ

ಶ್ರೀ ಕೆ.ವಿ. ಪ್ರಕಾಶ್, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ವಿದ್ಯಾವಿನ್  ಆನ್‌ಲೈನ್  ಶಿಕ್ಷಣ ಸಂಸ್ಥೆ, ಬೆಂಗಳೂರು.
ಶ್ರೀಮತಿ ಲತಾ ಪ್ರಕಾಶ್, ಸಹಸಂಸ್ಥಾಪಕಿ, ವಿದ್ಯಾವಿನ್ ಆನ್‌ಲೈನ್ ಶಿಕ್ಷಣ ಸಂಸ್ಥೆ, ಬೆಂಗಳೂರು ಉಪಸ್ಥಿತಿ ಇರಲಿದ್ದಾರೆ.

ಇದರಲ್ಲಿ 1000ಕ್ಕೂ ಹೆಚ್ಚು ಎಕ್ಸ್‌ಪರ್ಟ್ ಶಿಕ್ಷಕರು ವಿಡಿಯೋ ತರಗತಿಗಳನ್ನು ಮಾಡುತ್ತಾರೆ. ವಿಜ್ಞಾನ ಪ್ರಯೋಗಗಳು, ಪರಿಕಲ್ಪನಾ ಮತ್ತು ಸಮಗ್ರ ಕಲಿಕೆಗಾಗಿ ವೈಜ್ಞಾನಿಕ ಪ್ರಯೋಗಗಳು, ಸಿಮ್ಯುಲೇಶನ್‌ಗಳು ಮತ್ತು ರೇಖಾಚಿತ್ರಗಳನ್ನು ತಿಳಿಸಿಕೊಡಲಾಗುತ್ತದೆ.

ಪರಿಕಲ್ಪನಾ ಕಲಿಕೆಗಾಗಿ ಸ್ವಯಂ-ಮೌಲ್ಯಮಾಪನದೊಂದಿಗೆ ಸಂವಾದಾತ್ಮಕ ಬಹು ಆಯ್ಕೆಯ ಪ್ರಶ್ನೆಗಳನ್ನೂ ಇಲ್ಲಿ ಕೇಳಲಾಗುತ್ತದೆ. ಸಂದೇಹಗಳು ಮತ್ತು ಪ್ರಶ್ನೆಗಳ ತ್ವರಿತ ಸ್ಪಷ್ಟೀಕರಣಕ್ಕಾಗಿ ಇಂಟರ್ಯಾಕ್ಟಿವ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿಯೂ ಇದು ಬಳಕೆಯಾಗುತ್ತಿದೆ.

ವಿಶೇಷ ವಿಷಯಗಳು, ಸಂಕೀರ್ಣ ಮಾಡ್ಯೂಲ್‌ಗಳು ಮತ್ತು ಪುನರಾವರ್ತಿತ ಪ್ರಶ್ನೆಗಳ ಕುರಿತು ವೆಬಿನಾರ್‌ಗಳು ಮತ್ತು ಫೋನ್-ಇನ್ ಕಾರ್ಯಕ್ರಮಗಳು ನಡೆಯುತ್ತವೆ. ಆಡಿಯೊ ಪುಸ್ತಕಗಳ ಬೃಹತ್ ಪರಿಮಾಣದ ಜೊತೆಗೆ ಸಮಗ್ರ ಪ್ರಶ್ನೆಗಳು ಮತ್ತು ಉತ್ತರಗಳನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.

ಈ ವೆಬ್‌ಸೈಟ್‌ಗೆ 3,585 ಬಳಕೆದಾರರಿದ್ದಾರೆ. ಈಗಾಗಲೇ ಇದರಲ್ಲಿ 23,569 ಪ್ರಶ್ನೆಗಳನ್ನು ಅಭ್ಯಾಸ ಮಾಡಲಾಗಿದೆ. 8,237 ವಿಡಿಯೋಗಳನ್ನು ವ್ಯೂ ಮಾಡಲಾಗಿದೆ. ಸುಮಾರು 2,478 ಸಂದೇಹಗಳನ್ನು ಬಗೆಹರಿಸಲಾಗಿದೆ.

click me!