'ಮಾನವೀಯ ಸಂಕಷ್ಟಕ್ಕೆ ಮೊದಲಿಗರಾಗಿ ಮಿಡಿಯುತ್ತಿದ್ದ ‘ಅಪ್ಪು’

By Suvarna NewsFirst Published Nov 7, 2021, 12:05 AM IST
Highlights

* ಜಯಕರ್ನಾಟಕ ಸಂಸ್ಥೆಯಿಂದ ‘ಅಪ್ಪುಗೆ ನಮನ’ 
* ಮಲ್ಲೇಶ್ವರಂನಲ್ಲಿ ಶನಿವಾರ ಏರ್ಪಡಿಸಿದ್ದ ‘ಅಪ್ಪುಗೆ ನಮನ’ ಕಾರ್ಯಕ್ರಮ
* ಪುನೀತ್ ರಾಜ್‌ಕುಮಾರ್ ಕಾರ್ಯಗಳನ್ನ ಸ್ಮರಿಸಿದ ಅಶ್ವತ್ಥ್ ನಾರಾಯಣ

ಬೆಂಗಳೂರು, (ನ.06): ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಮಾನವೀಯ ಸಂಕಷ್ಟಗಳ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್(Puneeth Rajkumar) ಅವರು ಮೊದಲಿಗರಾಗಿ ಸ್ಪಂದಿಸುತ್ತಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN Ashwath Narayan) ಹೇಳಿದರು. 

ಅಗಲಿದ ನಟ ಪುನೀತ್ ಅವರನ್ನು ನೆನೆದು ಜಯಕರ್ನಾಟಕ (Jaya Karnataka) ಸಂಸ್ಥೆ ಬೆಂಗಳೂರಿನ(Bengaluru) ಮಲ್ಲೇಶ್ವರಂನಲ್ಲಿ ಇಂದು(ಶನಿವಾರ) ಏರ್ಪಡಿಸಿದ್ದ ‘ಅಪ್ಪುಗೆ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಂತಹ ಸಂಕಷ್ಟದ ವೇಳೆ ಸ್ವತಃ ತಾವಾಗಿಯೇ ಕರೆ ಮಾಡಿ ತನ್ನಿಂದ ಏನು ಸಹಾಯವಾಗಬೇಕೆಂದು ಕೇಳುತ್ತಿದ್ದರು. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಕೂಡ ಅವರು ಇದೇ ರೀತಿ ಮಿಡಿದು ನೆರವು ನೀಡಿದ್ದರು ಎಂದು ಸ್ಮರಿಸಿದರು. 

Puneeth Rajkumar ನಿವಾಸಕ್ಕೆ ಭೇಟಿ ಕೊಟ್ಟ ಹಿರಿಯ ನಟಿ ಗೀತಾ, ನಟಿ ಪ್ರಿಯಾಮಣಿ!

ಪುನೀತ್ ಅವರು ಜನರ ಕಷ್ಟಕ್ಕೆ ಸ್ಪಂದಿಸಿ ದೊಡ್ಡ ಮೊತ್ತದ ಸಹಾಯ ನೀಡುತ್ತಿದ್ದರು. ನಂದಿನಿ ಹಾಲಿಗೆ ಹೇಗೆ ಉಚಿತವಾಗಿ ಜಾಹೀರಾತು ಕೊಟ್ಟು ಸಹಕಾರಿಯಾಗಿದ್ದರೋ ಅದೇ ರೀತಿ ಐಟಿಐ ಸಮವಸ್ತ್ರ ಧರಿಸಿ ಜಾಹೀರಾತು ಕೊಟ್ಟು ವಿದ್ಯಾರ್ಥಿಗಳನ್ನು ಐಟಿಐ ಓದಿನತ್ತ ಸೆಳೆಯಲು ಅನುಕೂಲ ಮಾಡಿಕೊಟ್ಟಿದ್ದರು ಎಂದು ಅಶ್ವತ್ಥ ನಾರಾಯಣ ನೆನೆದರು. 

ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಬಿಜೆಪಿ ಮುಖಂಡ ನಾಗೇಶ ಈ ಸಂದರ್ಭದಲ್ಲಿ ಇದ್ದರು.

ನ,16ರಂದು ಅಪ್ಪುಗೆ ನಮನ
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ಫಿಲಂ ಚೇಂಬರ್ ವತಿಯಿಂದ ಇದೇ 16ರಂದು ಅರಮನೆ ಮೈದಾನದಲ್ಲಿ ವಿಶೇಷ ಸಂಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ಪುನೀತ್‍ರಾಜ್‍ಕುಮಾರ್ ಅವರ ಚಿತ್ರದ ಹಾಡುಗಳನ್ನು ಹಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತದ ಬಹುತೇಕ ಎಲ್ಲಾ ಚಿತ್ರರಂಗದ ತಾರೆಯರು ಭಾಗವಹಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಸಹಕಾರದ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಎಂದೂ ಮರೆಯಲಾಗದಂತಹ ವಿಶೇಷ ಕಾರ್ಯಕ್ರಮ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಅಂದು (ನ.16) ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿವರೆಗೂ ಈ ಕಾರ್ಯಕ್ರಮ ನಡೆಯಲಿದೆ.

  ಪಂಚಭಾಷಾ ನಟ,ನಟಿಮಣಿಯರು ಹಾಗೂ ರಾಜಕೀಯ ನಾಯಕರು ಸಹ ಪುನೀತ್ ರಾಜ್‌ಕುಮಾರ್‌ ಬೆಂಗಳೂರು ನಿವಾಸಕ್ಕೆ ಹಾಗೂ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

click me!